ಶರತ್ ಚಂದ್ರ ಚಟರ್ಜಿ 148ನೇ ಜನ್ಮ ವಾರ್ಷಿಕೋತ್ಸವ(#sharathchandrachatarajijayanti)

 ಶರತ್ ಚಂದ್ರ ಚಟರ್ಜಿ 148ನೇ ಜನ್ಮ ವಾರ್ಷಿಕೋತ್ಸವ

#sharathchandrachatarajijayanti #aidyonews



ಬಳ್ಳಾರಿ:ಎಐಡಿವೈಓ ರಾಜ್ಯ ಸಮಿತಿಯಿಂದ ನವೋದಯದ ಸಾಹಿತಿ ಶರತ್ ಚಂದ್ರ ಚಟರ್ಜಿ ಅವರ 148ನೇ ಜನ್ಮ ವಾರ್ಷಿಕದ ಅಂಗವಾಗಿ ಇಂದು ಅವರ ಕಾದಂಬರಿ "ಹಳ್ಳಿಯ ಸಮಾಜ ಮತ್ತು ರಮಾ" ಕುರಿತು ವರ್ಚುಯಲ್ ಅಧ್ಯಯನ ತರಗತಿ ಹಮ್ಮಿಕೊಳ್ಳಲಾಗಿತ್ತು.

ಎಐಡಿವೈಓ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಎಸ್. ಕುಮಾರ್ ಚರ್ಚೆ ನಡೆಸಿ ಕೊಟ್ಟರು.

ಶರತ್‌ಚಂದ್ರರು ತಮ್ಮ ಕಾದಂಬರಿಗಳಲ್ಲಿ ತಾವು ಕಂಡ ಸಮಾಜದ ಗಂಭೀರ ಸಮಸ್ಯೆಗಳನ್ನು, ಅದರ ಓರೆ ಕೋರೆಗಳನ್ನು ಕಲಾತ್ಮಕವಾಗಿ ಚಿತ್ರಿಸುವುದರೊಂದಿಗೆ ಅವುಗಳನ್ನು ಮೀರಿ ಸಮಾದ ಬೆಳೆದು ಬರಬೇಕಾದ ಮಾರ್ಗದ ಬಗ್ಗೆಯೂ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ. ಅವರ ಸಾಹಿತ್ಯ ಕೇವಲ ಮನರಂಜನೆಗೆ ಸೀಮಿತವಾಗದೆ ಓದುಗನ ಮನೋವಿಕಾಸಕ್ಕೆ, ಮೌಲ್ಯಪ್ರಜ್ಞೆಯ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಹಳ್ಳಿಯ ಸಮಾಜ ಮತ್ತು ರಮಾ - ಕಾದಂಬರಿಯಲ್ಲಿ ಗ್ರಾಮೀಣ ಬದುಕಿನ ಸಮಸ್ಯೆಗಳು ಮತ್ತು ಅಂದಿನ ಕಾಲದ ಸಾಮಾಜಿಕ ಸಮಸ್ಯೆಗಳಾದ ಜಾತಿ ಸಮಸ್ಯೆ, ಸಂಕುಚಿತ ಮನೋಭಾವ ಮತ್ತು ಅವುಗಳಿಂದ ಸಾಮಾಜಿಕ ಪ್ರಗತಿಗೆ ಆಗುವ ತೊಡಕುಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದಲ್ಲದೆ, ಸಮಾಜ ಅಲ್ಲಿಂದ ಮುಂದಿನ ಹಂತಕ್ಕೆ ಪ್ರಗತಿ ಹೊಂದುವ ಬಗ್ಗೆ ವಿವರಿಸಿದ್ದಾರೆ. ನಾವು ಅವರ ಕಾದಂಬರಿಗಳ ವಿಮರ್ಶಾತ್ಮಕ ಅಧ್ಯಯನದ ಮೂಲಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಸ್ಫೂರ್ತಿ ಪಡೆಯಬಹುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಡಿವೈಓ ಕರ್ನಾಟಕ ರಾಜ್ಯಾಧ್ಯಕ್ಷರಾದ ಶರಣಪ್ಪ ಉದ್ಬಾಳ್ ಅವರು ಸಾಹಿತ್ಯದ ಅಧ್ಯಯನ ಮನುಷ್ಯನನ್ನು ಭಾವನಾತ್ಮಕವಾಗಿ ಬೆಳೆಸುತ್ತದೆ. ಶರತ್‌ಚಂದ್ರರ ಸಾಹಿತ್ಯ ಉತ್ಕಟ ಭಾವ ಸ್ಫುರಣೆಯ ಮೂಲಕ ಓದುಗನಲ್ಲಿ ಮೌಲ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಆದ್ದರಿಂದ ಇಂದಿನ ಯುವಜನರು ಶ್ರೇಷ್ಠ ಸಾಹಿತಿ ಶರತ್‌ಚಂದ್ರರ ಕಾದಂಬರಿಗಳನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಬೇಕು ಎಂದರು.

ಕಾರ್ಯಕ್ರಮದ ಮೊದಲಿಗೆ ಪ್ರಗತಿಪರ ಗೀತೆಗಳನ್ನು ಹಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಯುವಜನರು ಈ ವರ್ಚುಯಲ್ ಅಧ್ಯಯನ ತರಗತಿಯಲ್ಲಿ ಪಾಲ್ಗೊಂಡಿದ್ದರು.


x

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ