ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ತೀರ್ವ ಗಾಯ
ಕೊಟ್ಟೂರು ತಾಲೂಕು ಹನುಮನಹಳ್ಳಿ ಗ್ರಾಮದ ಬಳಿ ಸರ್ಕಾರಿ ಬಸ್ಸಿಗೊಂದು ಬೈಕ್ ಡಿಕ್ಕಿ ಹೊಡೆದು ಕೊಟ್ಟೂರಿನ ಜ್ಯೋತಿ ಮತ್ತು ಕಾರ್ತಿಕ್ ತೀರ್ವ ಗಾಯಗೊಂಡಿದ್ದಾರೆ.ಕೊಟ್ಟೂರಿನಿಂದ ಅಮಾವಾಸ್ಯೆ ಪ್ರಯುಕ್ತಅಗಸನಹಳ್ಳಿ ದೇವಸ್ಥಾನಕ್ಕೆ ಹೊರಟಿದ್ದು ಹನುಮನಹಳ್ಳಿ ಗ್ರಾಮದ ಬಳಿ ಬೈಕ್ ಸವರನ್ನು ತಿರುವಿನಲ್ಲಿ ಬಸ್ಸಿಗೆ ಡಿಕ್ಕಿ ಹೊಡೆದು ತೀರ್ವ ಗಾಯಗೊಂಡಿದ್ದಾರೆ ಸರ್ಕಾರಿ ಬಸ್ಸಿನ ಚಾಲಕ ನಾಗಭೂಷಣ್ ಮತ್ತು ಇಲ್ಲಿನ ಸಾರ್ವಜನಿಕರು ತಿಳಿಸಿದರು.
ಈ ಘಟನೆ ಸಂಭವಿಸಲು ಕಾರಣ ಇಲ್ಲಿನ ರಸ್ತೆಯ ಕಾಮಗಾರಿಯಾಗಿದೆ ಏಕೆಂದರೆ ಇಲ್ಲಿ ಅನೇಕ ತಿರುಗುಗಳಿದ್ದು ಯಾವುದೇ ರೀತಿಯ ಸೂಚನ ಫಲಕವಿಲ್ಲ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಹನುಮನಹಳ್ಳಿ ಗ್ರಾಮವು ಕೊನೆ ಗಡಿ ಭಾಗವಾಗಿರುವುದರಿಂದ ಯಾವುದೇ ರೀತಿಯ ಅನಾರೋಗ್ಯ ಆಗಲಿ, ಅಪಘಾತಗಳು ಆಗಲಿ ಸಂಭವಿಸಿದರೆ ಇಲ್ಲಿ ಸರ್ಕಾರ ಸೂಚಿಸಿರುವ ಅಂಬುಲೆನ್ಸ್ ವ್ಯವಸ್ಥೆ ಇದೆ ಎಂದು ಸಾರ್ವಜನಿಕರು 108ಗೆ ಕರೆ ಮಾಡಿದರೆ ಅವರು ಬರುವುದು ಒಂದು ತಾಸು ಬೇಕು ಹಾಗಾಗಿ ಇಲ್ಲಿನ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಹೊಸಮನಿ ರಮೇಶ್ ಮತ್ತು ಮಾಗಡಿ ನಿಂಗನಗೌಡ ಪತ್ರಿಕೆಗೆ ಹಂಚಿಕೊಂಡರು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ