ಶಾಮನೂರು ಸಿಎಂ ಆಗಬಹುದಿತ್ತು: ಕಲ್ಯಾಣ ಶ್ರೀ
ಬಳ್ಳಾರಿ: ಶಾಮನೂರು ಶಿವಶಂಕರಪ್ಪ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಆದರೆ, ಒಗ್ಗಟ್ಟಿನ ಕೊರತೆ ಕಾರಣಕ್ಕೆ ಇಂದು ಅವರು ಮುಖ್ಯಮಂತ್ರಿ ಆಗುವ ಅವಕಾಶದಿಂದ ವಂಚಿತ ಆದರು ಎಂದು ಕಲ್ಯಾಣ ಶ್ರೀ ಹೇಳಿದರು.
ನಗರದ ಕಪ್ಪಗಲ್ಲು ರಸ್ತೆಯಲ್ಲಿನ ಶೆಟ್ಟರ ಗುರುಶಾಂತಪ್ಪ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡ ವೀರಶೈವ ಲಿಂಗಾಯತ ಜನ ಜಾಗೃತಿ ಸಮಾವೇಶ, ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ನೆರೆಯ ತಮಿಳುನಾಡಿನಲ್ಲಿ ವೀಲ್ ಚೇರ್ ಮೇಲೆ ಕುಳಿತು ಮುಖ್ಯಮಂತ್ರಿ ಆದರು. ಆದರೆ, ನಮ್ಮ ಸಮಾಜದ ಶಾಮನೂರು ಶಿವಶಂಕರಪ್ಪ ಆಗಲಿಲ್ಲ ಎಂದರು.
ನಮ್ಮ ಸಮಾಜ ಉದ್ಧಾರ ಆಗಬೇಕು ಎಂದರೆ ಸಮಾಜ ಒಗ್ಗಟ್ಟು ಆಗಬೇಕು. ನಮ್ಮಲ್ಲಿ ಜಾಗೃತಿ ಮೂಡಬೇಕು. ಹಾನಗಲ್ ಕುಮಾರ್ ಸ್ವಾಮಿ ಅವರು 156 ವರ್ಷದ ಹಿಂದೆ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿ ಸಮಾಜದ ಒಳಿತಿಗೆ ಕಾರಣ ಆದರು ಎಂದು ಅವರು ತಿಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ