ಬ್ಯಾಂಕ್ ನ ಮೂಲ ಸೌಕರ್ಯ ಒದಗಿಸುವಂತೆ ವ್ಯವಸ್ಥಾಪಕರಲ್ಲಿ ಮನವಿ

 

ಮಸ್ಕಿ, ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಯ ವ್ಯವಸ್ಥಾಪಕರಿಗೆ ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆ ಹಾಗೂ ಸಾರ್ವಜನಿಕರಿಂದ ಹೆಚ್ಚಿನ ನಗದು ಕೌಂಟರ್ ಹಾಗೂ ಸಿಬ್ಬಂದಿ ಹೆಚ್ಚಳ ಸೇರಿದಂತೆ ಸಾರ್ವಜನಿಕ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮಸ್ಕಿಪಟ್ಟಣದ ಬೀದರ್ ನಿಂದ ಶ್ರೀರಂಗಪಟ್ಟಣದವರೆಗಿನ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್ 150A ಗೆ ಹೊಂದಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮಸ್ಕಿ ಕಚೇರಿಯು ಮಸ್ಕಿ ತಾಲೂಕಿಗೆ ಮುಖ್ಯ ಕಛೇರಿ ಶಾಖೆ ಆಗಿದ್ದು, ತಾಲೂಕಿನ ವಿವಿಧ ಗ್ರಾಮಗಳಿಂದ ದೈನಂದಿನ ಕೆಲಸ ಕಾರ್ಯಗಳನ್ನು ಬದಿಗೆ ಒತ್ತಿ ಕಚೇರಿ ವ್ಯವಹಾರಕ್ಕಾಗಿ ಬರುವ ಗ್ರಾಹಕರಿಗೆ ಪ್ರಮುಖ ಸಮಸ್ಯೆ ಏನೆಂದರೆ ನಗದು ಕೌಂಟರ್ ಒಂದೇ ಇರುತ್ತದೆ ಹಾಗೆಯೇ ಸಿಬ್ಬಂದಿ ಕೊರತೆ ಇದ್ದು, ಸಾರ್ವಜನಿಕರ ಹಿತದೃಷ್ಟಿಯ ವತಿಯಿಂದ ಮತ್ತೊಂದು ನಗದು ಕೌಂಟರ್ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿರುತ್ತದೆ. 

ಬ್ಯಾಂಕ್ ನ ವ್ಯವಹಾರಕ್ಕಾಗಿ ಬರುವ ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರಿಗೆ ಕುಡಿಯುವ ನೀರು ಮತ್ತು ಶೌಚಾಲಯದ ಅವಶ್ಯ ಇರುತ್ತದೆ. ಆದಷ್ಟು ಬೇಗನೆ ನಗದು ಕೌಂಟರ್ ವ್ಯವಸ್ಥೆ,ಸಿಬ್ಬಂದಿ ಕೊರತೆ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರ ಒತ್ತಾಸೆಯ ಮೇರೆಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆ ಸಮಿತಿಯ ಜಿಲ್ಲಾಧ್ಯಕ್ಷರಾದ ಎಸ್ ನಝೀರ್, ಸುರೇಶ್ ಬಳಗಾನೂರ, ಗ್ಯಾನಪ್ಪ ದೊಡ್ಡಮನಿ,ಸಿದ್ದಾರ್ಥ್ ಪಾಟೀಲ್ ಹಾಲಾಪೂರ, ಬಸವರಾಜ್ ನಾಯಕ ತುಗ್ಗಲದಿನ್ನಿ, ಮಾನಯ್ಯ ಅಂಕುಷದೊಡ್ಡಿ, ಬ್ಯಾಂಕ್ ಸಿಬ್ಬಂದಿ, ಸಾರ್ವಜನಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*