*ಏಕಮುಖವಾಗಿ ತಮಗೆ ಬೇಕಾದ ಹಾಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿದ ಕಾಳಾಪುರ ಪಿಡಿಓ ಜಯಮ್ಮ..?* "ಗ್ರಾಮ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿಯವರನ್ನು ಕೂಡಲೇ ಅಮಾನತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯ" ಕೊಟ್ಟೂರು ತಾಲ್ಲೂಕು ಕಾಳಾಪುರ ಗ್ರಾಮ ಪಂಚಾಯಿತಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಪೂರ್ವಭಾವಿ ಸಭೆ ಕರೆಯದೇ, ಸದಸ್ಯರನ್ನು ಸದರಿ ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನಿಸದೇ ಪ್ರೊಟೋಕಾಲ್ ಸರಿಯಾಗಿ ಪಾಲಿಸಿಲ್ಲದ ಕಾರಣ ಹತ್ತು ಮಂದಿ ಮಂಜುನಾಥ್ ಪೂಜಾರ್ ಕಾಳಾಪುರ, ನಾಗಪ್ಪ ಕನ್ನಕಟ್ಟೆ ಕಾಳಾಪುರ,ಸಾತಾಳ ಅಂಜಿನಪ್ಪ ಚೀನ್ನೇನಹಳ್ಳಿ, ಮಾರಕ್ಕ ಕಾಳಾಪುರ, ಭರಮಪ್ಪ ಹಾರಕನಾಳು, ಶಿವಮ್ಮಚೀನ್ನೇನಹಳ್ಳಿ,ಸಿ ನಾಗರಾಜ್ ಗೌಡ ನಡುಮಾವಿನಹಳ್ಳಿ,ನಿಂಗಮ್ಮಹಾರಕನಾಳು,ನಾಗರಾಜ ಹಿರೇ ವಡ್ಡರಹಳ್ಳಿ ,ಗೀತಮ್ಮ ನಡುಮಾವಿನಹಳ್ಳಿ,ಗ್ರಾಮ ಪಂಚಾಯಿತಿ ಸದಸ್ಯರು ಹಕ್ಕುಚ್ಯುತಿ ಮಂಡಿಸಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹತ್ತು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಸಲ್ಲಿಸಿರುವ ಹಕ್ಕುಚ್ಯುತಿ ಪತ್ರದಲ್ಲಿ ಈ ಹಿಂದೆ ಪಿಡಿಓ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಪೂರ್ವಭಾವಿ ಸಭೆಗೆ ಹಾಜರಾಗುವಂತೆ ಕರೆಯೋಲೆ ನೀಡಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ನಂತರ ಸದರಿ ಕಾರ್ಯಕ್ರಮಕ್ಕೆ ಎಲ್ಲರೂ ಹಾಜರಾಗುವಂತೆ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಇತ್ತು. *ಬೇಕಾ ಬಿಟ್ಟ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ