ನರೇಂದ್ರ ಮೋದಿಯದ್ದು ಐರನ್ ಲೆಗ್:ಉಗ್ರಪ್ಪ
ಬಳ್ಳಾರಿ:ಈ ದೇಶದಲ್ಲಿ ಐರಾನ್ ಲೆಗ್ ಅಂತ ಯಾರಾದ್ರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಗುರುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಬಂದರು ಇಲ್ಲಿ ಬಿಜೆಪಿ ಸೋಲು ಕಂಡಿತು. ಪಶ್ಚಿಮ ಬಂಗಾಳದಲ್ಲಿ ಹಾಗೆ ಆಯಿತು. ಹಾಗಾಗಿ ಈ ದೇಶದ ಐರನ್ ಲೆಗ್ ಎಂದರು.
ಬಿಜೆಪಿ ತಾನೂ ನೀಡಿದ ಒಂದೇ ಒಂದು ವಾಗ್ದಾನ ಪೂರೈಸದ ಬಿಜೆಪಿ ಕರ್ನಾಟಕದ ಸೋಲಿನಿಂದ ಹತಾಶರಾಗಿದ್ದಾರೆ. ಮೂರುವರೆ ತಿಂಗಳು ಕಳೆದರೂ ವಿಧಾನ ಪರಿಷತ್, ಸಭಾದಲ್ಲಿ ವಿಪಕ್ಷ ನಾಯಕರ ಆಯ್ಕೆ ಮಾಡಲು ಆಗಿಲ್ಲ. ರಾಷ್ಟ್ರಮಟ್ಟದಲ್ಲಿ 28 ರಾಜಕೀಯ ಪಕ್ಷಗಳು ಮಲ್ಲಿಕಾರ್ಜುನ್ ಖರ್ಗೆ, ರಾಹುಲ್, ಸೋನಿಯಾ ಗಾಂಧಿ ಮಾರ್ಗದರ್ಶನದಲ್ಲಿ ಇಂಡಿಯಾ ಎಂಬ ಹೆಸರಿನಲ್ಲಿ ಒಗ್ಗೂಡಿದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ದಿ ಬಗ್ಗೆ ಮಾತನಾಡಲು ಆಗದೆ. ಎಮೋಷನಲ್ ವಿಷಯ ಮಾತನಾಡುತ್ತಿದ್ದಾರೆ ಎಂದರು.
ಒನ್ ನೇಶನ್ ಒನ್ ಎಲೆಕ್ಷನ್ ಅದು ಹೇಗೆ ಸಾಧ್ಯ. ಒಂದು ಕಡೆ ಈ ಸಮಿತಿಗೆ ಒಬ್ಬ ಮಾಜಿ ರಾಷ್ಟ್ರಪತಿ ಅವರನ್ನು ನೇಮಕ ಮಾಡಿದ್ದು ಸಲ್ಲ. ಇನ್ನು 1996 ನಿಂದ ಲೋಕಸಭೆಯಲ್ಲಿ ನೆನೆಗುದಿಗೆ ಬಿದ್ದ ಮಹಿಳಾ ಮೀಸಲಾತಿ ಮಸೂದೆ ಪಾಸ್ ಮಾಡದೆ ಈಗ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಈಗ ಏಕಾಏಕಿ ದೇಶದ ಹೆಸರು ಬದಲಾಯಿಸಲು ಮುಂದಾಗಿದ್ದಾರೆ. ನಮಗೆ ಭಾರತ, ಇಂಡಿಯಾ ಒಂದೇ. ಸಮಸ್ಯೆ ಏನೂ ಇಲ್ಲ. ಆದರೆ, ಇದನ್ನೇ ಒಂದು ಸಮಸ್ಯೆ ಮಾಡಿ ಜನರ ಗಮನ ಬೇರೆ ಕಡೆ ಸೆಳೆಯುವ ಯತ್ನ ಮಾಡುವುದು ಸರಿ ಅಲ್ಲ ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿ ಅವರ ಕನ್ಯಾಕುಮಾರಿ ಟು ಕಾಶ್ಮೀರ ಯಾತ್ರೆಗೆ ಒಂದು ವರ್ಷ ಪೂರ್ಣ ಆಗಿದೆ. ಬೇರೆ ಬೇರೆಯವರು ಸಹ ಪಾದಯಾತ್ರೆ ಮಾಡಿದ್ದಾರೆ. ದೇಶದಲ್ಲಿ ಐಕ್ಯತೆ ಮೂಡಿಸಿ, ಸಾಮರಸ್ಯ ತರುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಹೆಸರು ವಾಸಿ ಆಗಿದ್ದಾರೆ. ಅವರನ್ನು ಗಂಭೀರವಾಗಿ ಟೀಕೆ ಮಾಡುತ್ತಿದ್ದವರು ಇಂದು ತುಟಿ ಬಿಚ್ಚದ ಹಂತಕ್ಕೆ ಬಂದಿದ್ದಾರೆ ಎಂದರು.
ಪಕ್ಷದ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ಗ್ರಾಮಾಂತರ ಕಾಂಗ್ರೆಸ್ ಮುಖಂಡ ಸಂಗನಕಲ್ಲು ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ