ಮಸ್ಕಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಹಾಗೂ ಪೂರ್ಣ ಪ್ರಮಾಣದ ಇಲಾಖೆಗಳನ್ನು ಪ್ರಾರಂಭಿಸಿ : ಮನವಿ
ಮಸ್ಕಿ, ಪಟ್ಟಣದ ಭ್ರಮರಾಂಬ ದೇವಸ್ಥಾನದಿಂದ ಆರಂಭವಾಗಿ ತಹಸೀಲ್ದಾರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಮೂಲಕ ತೆರಳಿ ಮಸ್ಕಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಹಾಗೂ ಸಂಭಂದಪಟ್ಟ ಇಲಾಖೆಗಳನ್ನು ಕಾರ್ಯಾರಂಭ ಮಾಡುವಂತೆ ತಹಸೀಲ್ದಾರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕದ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಸಂಪೂರ್ಣವಾಗಿ ಮುಂಗಾರು ಮಳೆ ಕೈಕೊಟ್ಟಿದ್ದು ಇದರ ಜೊತೆಯಲ್ಲಿ ಕೆಲವು ಭಾಗ ಟಿ ಬಿ ಪಿ ನೀರಾವರಿ ಸೌಲಭ್ಯ ಹೊಂದಿದ್ದರು ನಮ್ಮ ಭಾಗಕ್ಕೆ ಈವರೆಗೂ ನೀರು ತಲುಪಿರುವುದಿಲ್ಲ ಇದಕ್ಕೆ ಮುಖ್ಯ ಕಾರಣ ನೀರಾವರಿ ಇಲಾಖೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡದೇ ಇರುವುದು. ಅಲ್ಲದೆ ಮೇಲ್ಭಾಗದಲ್ಲಿ ನೀರನ್ನು ಕಳುವು ಮಾಡುವುದು ಇಲ್ಲವೇ ಮಾರಾಟ ಮಾಡುತ್ತಿರುವ ಬಗ್ಗೆ ಕೇಳಿ ಬಂದಿರುತ್ತದೆ. ಮಸ್ಕಿ ತಾಲೂಕಿನ ಮಾರಲದಿನ್ನಿ ನಾಲಾ ಯೋಜನೆ ಇದ್ದು ಈ ಬಾರಿ ಜಲಾಶಕ್ಕೆ ಅರಿವು ಇಲ್ಲದೆ ನೀರಿನ ಸಂಗ್ರಹ ಕೆಳಮಟ್ಟದಲ್ಲಿ ಇರುವುದರಿಂದ ಇದರ ಮೇಲೆ ಅವಲಂಬಿತವಾಗುವ ರೈತರ ಗತಿ ದೇವರೇ ಗತಿ ಎನ್ನುವಂತಾಗಿದೆ.
ಹಾಗೋ ಹೀಗೋ ಸಾಲ ಸೂಲ ಮಾಡಿಕೊಂಡ ರೈತರು ತಮ್ಮ ತಮ್ಮ ಜಮೀನನ್ನು ಸಾಗುವಳಿ ಮಾಡಿದ್ದು, ಈ ಬಾರಿ ಜಮೀನಿಗೆ ಹಾಕಿದ ಖರ್ಚು ವೆಚ್ಚ ಸಹಿತ ಬಂದಿಲ್ಲ ರೈತರು ಆಕಾಶದತ್ತ ಮುಖಮಾಡಿ ನೋಡುವ ಸ್ಥಿತಿ ಎದುರಾಗಿದೆ.
ಮಸ್ಕಿ ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡುವುದರ ಜೊತೆಯಲ್ಲಿ ಈಗಾಗಲೇ ಮಸ್ಕಿ ತಾಲೂಕು ಎಂದು ಘೋಷಣೆ ಮಾಡಿ ಒಂದು ದಶಕವೇ ಕಳೆದು ಹೋದರು ಪೂರ್ಣ ಪ್ರಮಾಣದ ತಾಲೂಕ ಮಟ್ಟದ ಇಲಾಖೆಗಳು ಇರದೇ ಇರುವುದು ವಿಪರ್ಯಾಸದ ಸಂಗತಿಯೆಂದರೆ ತಪ್ಪಾಗಲಾರದು.
ಉದಾಹರಣೆಗೆ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷಗಳಾದರೂ ಇನ್ನೂ ಹಲವು ಪೈಲ್ ಗಳು ಅಳತೆ ಮಾಡದೇ ಪೆಂಡಿಂಗ್ ಇರುತ್ತವೆ. ಸರ್ವೇ ಇಲಾಖೆಯವರಿಗೆ ಹಣ ಕೊಟ್ಟವರಿಗೆ ಮಾತ್ರ ಕೆಲಸ ಮುಂದುವರೆಯುತ್ತದೆ.ಲಂಚ ಇಲ್ಲದೆ ಅವರು ಯಾವುದೇ ಕೆಲಸ ಮಾಡುತ್ತಿಲ್ಲ ಇನ್ನು ಕಂದಾಯ ಇಲಾಖೆ ಹೋದರೆ ಯಾವುದೇ ಕೆಲಸಕ್ಕೆ 600 ರಿಂದ 800 ರವರೆಗೆ ಅರ್ಜಿದಾರರ ಮೂಲಕ ಅಧಿಕಾರಿಗಳು ಲಂಚ ಕೊಟ್ಟರೇ ಮಾತ್ರ ಇವರ ಕೆಲಸವಾಗುತ್ತದೆ ಇಲ್ಲವಾದಲ್ಲಿ ಅಲೆಯುವುದು ತಪ್ಲಿದಲ್ಲ. ಇನ್ನುಳಿದ ಇಲಾಖೆಗಳ ಸೌಲಭ್ಯಗಳನ್ನು ಹುಡುಕಿಕೊಂಡು ಸಿಂಧನೂರು ತಾಲೂಕು ಮತ್ತು ಲಿಂಗಸುಗೂರು ಮತ್ತು ಮಾನ್ವಿ ತಾಲೂಕಿಗೆ ರೈತರು ಅಲೆಯುವಂತಾಗಿದೆ.
ಆದ್ದರಿಂದ ಮಸ್ಕಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಹಾಗೂ ಪೂರ್ಣ ಪ್ರಮಾಣದ ಇಲಾಖೆಗಳನ್ನು ತಾಲೂಕಿನಲ್ಲಿ ಕಾರ್ಯರಂಭಗೊಳಿಸುವುದು, ಲಂಚ ಕೋರ ಅಧಿಕಾರಿಗಳನ್ನು ಇಲ್ಲಿಂದ ಎತ್ತಂಗಡಿ ಅಥವಾ ಕೆಲಸದಿಂದ ವಜಾಗೊಳಿಸುವ ಕಾರ್ಯವನ್ನು ಅತಿ ಜರೂರಾಗಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ವಿಷಯವನ್ನು ಮುಂದಿಟ್ಟುಕೊಂಡು ತಾಲೂಕಿನ ರೈತರ ಸಹಾಯ ಯೋಗದಲ್ಲಿ ಮೊದಲು ಮಸ್ಕಿ ತಾಲೂಕಿನ ತಹಸಿಲ್ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ನಂತರದಲ್ಲಿ ಬೆಂಗಳೂರು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಮಸ್ಕಿ ವತಿಯಿಂದ ಉಪ ತಹಸೀಲ್ದಾರರರು ವಿಜಯ್ ಕುಮಾರ್ ಸಜ್ಜನ್ ಮಸ್ಕಿ ಇವರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸಂಘಟನೆಯು ಒತ್ತಾಯಿಸಲಾಯಿಸಿತು.
ಇದೇ ಸಂದರ್ಭದಲ್ಲಿ ವೆಂಕಟೇಶ್ ಎಸ್ ರತ್ನಾಪುರ ಹಟ್ಟಿ ತಾಲೂಕ ಅಧ್ಯಕ್ಷರು, ಲಾಲಪ್ಪ ನಾಡಗೌಡರ್ ಮಸ್ಕಿ ತಾಲೂಕ ಗೌರವಾಧ್ಯಕ್ಷರು,ಶರಣಪ್ಪ ಮರಳಿ ಜಿಲ್ಲಾಧ್ಯಕ್ಷರು, ರಾಮಯ್ಯ ಜವಳೇರಾ ಜಿಲ್ಲಾ ಉಪಾಧ್ಯಕ್ಷರು, ಬಸನಗೌಡ ತೀರ್ಥವಾಗಿ ಕಾರ್ಯಧ್ಯಕ್ಷರು, ನಿರುಪಾದಿಪ್ಪ ತೀರ್ಥಭಾವಿ ಪ್ರಧಾನ ಕಾರ್ಯದರ್ಶಿ, ಮಾನಯ್ಯ ಅಂಕುಶದೊಡ್ಡಿ ಜಿಲ್ಲಾ ಮುಖಂಡರು, ದೇವಣ್ಣ ಮಾಲದಿನ್ನಿ, ವೀರಭದ್ರಪ್ಪ ಕೆ ಬಸಾಪುರ್ ಉಪಾಧ್ಯಕ್ಷರು, ಮಲ್ಲನಗೌಡ ನಾಯಕ ನಗರ ಘಟಕ ಅಧ್ಯಕ್ಷರು ಮಸ್ಕಿ,ರೈತ ಭಾಂಧವರು ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ