ನೂತನ ಕೃಷಿ ಅಧಿಕಾರಿಯಾಗಿ ಶಿವಶರಣ ಭೋವಿ ಅಧಿಕಾರ ಸ್ವೀಕಾರ

ಮಸ್ಕಿ ಪಟ್ಟಣದ ಕೃಷಿ ಇಲಾಖೆಯ ನೂತನ ಕೃಷಿ ಅಧಿಕಾರಿಯಾಗಿ ಶಿವಶರಣ ಭೋವಿ ಇವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಹಲವು ತಿಂಗಳುಗಳಿಂದ ಅಧಿಕಾರಿ ಇಲ್ಲದೇ ಖಾಲಿ ಇದ್ದ ಕೃಷಿ ಇಲಾಖೆಗೆ ಸೋಮವಾರ ಹೊಸ ಕಳೆ ಬಂದಂತಾಗಿದೆ. ರೈತ ಭಾಂದವರು ಯಾವುದೇ ಕೃಷಿ ಸಲಕರಣೆ ಹಾಗೂ ಔಷಧಿ ಪಡೆಯಲು ಅಧಿಕಾರಿ ಇಲ್ಲದೇ ರಾಮನ ಗೆರೆ ಎಳೆದಂತಾಗಿತ್ತು. ಶಿವಶರಣ ಭೋವಿ ಇವರು ನೂತನ ಕೃಷಿ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಲೇ ತೊಗರಿ ಹಾಗು ಇನ್ನಿತರೇ ಬೆಳೆಗಳಿಗೆ ಔಷಧಿ ಸಿಂಪಡಣೆ ಎಣ್ಣೆಗಳನ್ನು ವಿತರಣೆ ಮಾಡಿದರು. ಮಸ್ಕಿ ಹೋಬಳಿ ಕೃಷಿ ಇಲಾಖೆ ವ್ಯಾಪಿಯ ರೈತ ಭಾಂದವರು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸಂತೋಷದಿ ಬರಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಮಂಜುನಾಥ,ಪ್ರಸಾದ,ಜಯರಾಮ ಹಾಗೂ ರೈತ ಮುಖಂಡರು ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*