ವಿಶ್ವಕರ್ಮ ಹಾಗೂ ಕಲ್ಯಾಣ ಕರ್ನಾಟಕ ವಿಮೋಚನೆ ಆಚರಣೆ

ಕಾನ ಹೊಸಹಳ್ಳಿ: ಇಲ್ಲಿನ ನಾಡ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಮತ್ತು ದೇವಶಿಲ್ಪಿ ವಿಶ್ವಕರ್ಮರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಉಪ ತಹಶೀಲ್ದಾರ್ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನೆಯ ಹರಿಕಾರ ಸರದಾರ್ ವಲ್ಲಭಭಾಯಿ ಪಟೇಲ್ ಮತ್ತು ವಿಶ್ವಕರ್ಮ ರವರ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧ್ವಜ ಆರೋಣ ನೆರವೇರಿಸಿ ಮಾತನಾಡಿದರು ನಿಜಾಮನ ದಾಸ್ಯತನದಲ್ಲಿ ಸಿಲುಕಿ ನಲುಗುತ್ತಿರುವ ಈ ನಮ್ಮ ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ 15 ಅಗಸ್ಟ 1947ರಂದು ಸ್ವಾತಂತ್ರ್ಯ ಸಿಗಲಿಲ್ಲ. ಸ್ವಾಮಿ ರಮಾನಂದತೀರ್ಥರು ಹಾಗೂ ಮುಂತಾದ ಮಹನೀಯರ ಹೋರಾಟದ ಫಲದಿಂದ 1 ವರ್ಷ 1 ತಿಂಗಳು 2 ದಿನಗಳ ನಂತರ 1948 ಸೆಪ್ಟಂಬರ 17 ರಂದು ನಮ್ಮ ಈ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿತು ಹಾಗೂ ವಿಶ್ವಕರ್ಮರನ್ನು ನೆನಪಿಸುವ ಪುಣ್ಯ ದಿನವಾಗಿದೆ ಇಂದು ಎಂದು ಹೇಳಿದರು‌.

ಈ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕರು ಮುರುಳಿಕೃಷ್ಣ, ಗ್ರಾಮ ಲೆಕ್ಕಾಧಿಕಾರಿಗಳಾದ ಚನ್ನಬಸಯ್ಯ, ಸಂಪ್ರೀತ, ಚೈತ್ರ, ಅನಿತಾ ಪೂಜಾರ್ ಹಾಗೂ ಬಿಜೆಪಿ ಮುಖಂಡರು ವೀರೇಶ್ ಕಟ್ಟಪ್ಪನವರ್, ಗ್ರಾಮದ ಮುಖಂಡರಾದ ಶ್ರೀನಿವಾಸ ಆಚಾರಿ, ನಡಲು ಮನೆ ತಿಪ್ಪೇಸ್ವಾಮಿ, ಕೊಟ್ರಣ್ಣ, ನಿವೃತ್ತಿ ಶಿಕ್ಷಕ ಮಹದೇವಪ್ಪ, ಸಮಾಜ ಸೇವಕ ಕೆ.ಎಸ್ ವಿಕಾಸ್, ಹೇಮಂತ್ ಸೇರಿದಂತೆ ಸಿಬ್ಬಂದಿಗಳು, ಗ್ರಾಮದ ಮುಖಂಡರು, ಸಾರ್ವಜನಿಕ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ