ವಿವಿಧ ಸ್ಪರ್ಧೆಯಲ್ಲಿ ಫುಲದಿನ್ನಿ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಿಂಧನೂರು: ತಾಲೂಕಿನ ರಾಗಲಪರ್ವಿ ವಲಯ ಮಟ್ಟದ ವ್ಯಾಪ್ತಿಗೆ ಬರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಲದಿನ್ನಿ ಶಾಲೆಯು 600 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಕುಮಾರಿ ಶರಣಮ್ಮ ತಂದೆ ಭೀಮಣ್ಣ ಇವರು ಮೇಲು ಗೈ ಸಾಧಿಸುವ ಮೂಲಕ ಆಯ್ಕೆಗೊಂಡಿದ್ದಾರೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮದ ಹಿರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಿಂಧನೂರು ನಗರದಲ್ಲಿ ಆಯೋಜಿಸಲಾಗಿದ್ದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಲದಿನ್ನಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಯ ವಿದ್ಯಾರ್ಥಿಗಳಾದ ವೀರನಗೌಡ ತಂದೆ ವೆಂಕಟೇಶ್ 100 ಮೀಟರ್ ಸ್ಪರ್ಧೆ ,200 ಮೀಟರ್ ಪ್ರಥಮ ಸ್ಥಾನ, ಕಿರಣ್ ತಂದೆ ನಾಗರಾಜ್ 400 ಮೀಟರ್ ಪ್ರಥಮ ಸ್ಥಾನ, ಮಂಜುನಾಥ್ ತಂದೆ ಹುಸೇನಪ್ಪ 600 ಮೀಟರ್ ಪ್ರಥಮ, ಉದ್ದ ಜಿಗಿತ ಪ್ರಥಮ ಸ್ಥಾನ ಹೀಗೆ ಹಲವು ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಆಯ್ಕೆಗೊಂಡು ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು ಹಾಗೂ ಊರಿನ ಗೌರವವನ್ನು ಹೆಚ್ಚಿಸಿದ್ದಾರೆ.
ಮಕ್ಕಳ ಕ್ರೀಡಾ ಸ್ಪರ್ಧೆಗೆ ತರಬೇತಿದಾರರಾಗಿ ಕಾರ್ಯನಿರ್ವಹಿಸಿದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಪುಲದಿನ್ನಿ ಮುಖ್ಯ ಗುರುಗಳು ಎಂ.ಸಿ ದಿನೇಶ್ ಕುಮಾರ್ , ಸಹ ಶಿಕ್ಷಕರಾದ ರೇಣುಕಾ, ಗುಂಡಪ್ಪ ರಾಥೋಡ್ ಶಿಕ್ಷಕರು, ಅತಿಥಿ ಶಿಕ್ಷಕರಾದ ದೇವರಾಜ್ ,ಅಕ್ಕನಾಗಮ್ಮ ಶಿಕ್ಷಕಿ, ವೆಂಕಟೇಶ್ ಶಿಕ್ಷಕರು, ಸೋಮಶೇಖರ್ ಶಿಕ್ಷಕರು, ದುರ್ಗಮ್ಮ ಶಿಕ್ಷಕಿ,ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಊರಿನ ಗ್ರಾಮಸ್ಥರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ