ತರಳಬಾಳು ಸ್ವಾಮೀಜಿಗಳೇ ನಿಮ್ಮ ಮಾತು ಬರೀ ಪೊಳ್ಳು ಆಶ್ವಾಸನೆಯಾಯಿತೇ?

 

ಬಡದಲಿತರ ಮೇಲಿನ ದಬ್ಬಾಳಿಕೆಗೆ ಕೊನೆಯೇ ಇಲ್ಲವೇ?

ಮೇಲ್ವರ್ಗದ ದಬ್ಬಾಳಿಕೆಯಿಂದ ಮುಕ್ತಿ ಗೊಳ್ಳಿಸಿ| ನಮ್ಮನ್ನು ಬದುಕಲು ಬಿಡಿ ಎನ್ನುವ| ಬಡ ದಲಿತ ಕುಟುಂಬಗಳ ಆಕ್ರಂದನ..!

ಕೊಟ್ಟೂರು ಪಟ್ಟಣದಲ್ಲಿ ಈ ಹಿಂದೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಸಂದರ್ಭದಲ್ಲಿ ಕಾರ್ಯಕ್ರಮದ ಮೊದಲ ದಿನವೇ ಜಗಳೂರು, ಉಜ್ಜಿನಿ ಮಾರ್ಗದ ಮೂಲಕ ಕೊಟ್ಟೂರಿಗೆ ಬರುವ ಕಾಳಾಪುರ ಗ್ರಾಮದ ಹತ್ತಿರ ಗಲಾಟೆಗಳು ನಡೆದು, ಮೇಲ್ವರ್ಗದವರು ದಲಿತರ ಮನೆಗಳ ಮೇಲೆ ಸುಖಾಸುಮ್ಮನೆ ಗ್ರಾಮದೊಳಗೆ ನುಗ್ಗಿ ದಲಿತರ ಮನೆಗಳನ್ನು ಹೊಕ್ಕು, ಪ್ರಾಣಹಾನಿ ಹಾಗೂ ಚರಾಸ್ತಿಗಳಾದ ಸೈಕಲ್ ಮೋಟಾರ್, ಆಟೋ, ಇನ್ನಿತರೆ ಮನೆಯ ಚರಾಸ್ತಿಗಳನ್ನು ಸುಟ್ಟು ಭಯದ ವಾತಾವರಣವನ್ನು ಸೃಷ್ಟಿಸಿದ್ದರು. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ಸಹ ಈ ಹಿಂದೆ ದಾಖಲಾಗಿತ್ತು. ಈ ಸಂದಿಗ್ಧತೆಯನ್ನು ಅರಿತ ತರಳಬಾಳು ಸ್ವಾಮಿಗಳು ಆ ಹುಣ್ಣಿಮೆ ಕಾರ್ಯಕ್ರಮದ ವೇದಿಕೆಯಲ್ಲಿ ಕಾಳಾಪುರ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆಯನ್ನು ಕೊಟ್ಟಿದ್ದರು. ಕಾರ್ಯಕ್ರಮ ೦೫-೦೩-೨೦೨೩ ರಂದು ನಡೆದು ಸುಮಾರು ಏಳು ತಿಂಗಳು ಗತಿಸಿದರೂ ಇದುವರೆಗೂ ಕಾಳಾಪುರ ಗ್ರಾಮಸ್ಥರಿಗೆ ಯಾವುದೆ ಪರಿಹಾರ ದೊರೆತಿರುವುದಿಲ್ಲ. ತಮ್ಮ ಕಾರ್ಯಕ್ರಮಕ್ಕೆ ಅಪಾಯ ಬರಬಹುದೆಂಬ ನಿಟ್ಟಿನಲ್ಲಿ ವೇದಿಕೆಯ ಮೇಲೆ ಸ್ವಾಮೀಜಿಗಳು ಕೊಟ್ಟ ಆಶ್ವಾಸನೆ ಬರೀ ಮಾತಿನಲ್ಲಿಯೇ ಇದೆ ವಿನಾಃ ಯಾವುದೇ ಪ್ರಯೋಜನವೂ ಆಗಿಲ್ಲ, ಪರಿಹಾರವೂ ದೊರೆತಿಲ್ಲ. ಇತ್ತ ತಿರುಗಿಯೂ ನೋಡಿಲ್ಲ . ದಲಿತರ ಮೇಲಿನ ಇವರ ಕಾಳಜಿ ಎಷ್ಟು ಕನಿಷ್ಟವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಘಟನೆಯಿಂದ ಹೆದರಿದ ಗ್ರಾಮಸ್ಥರು ಹಳ್ಳಿಯನ್ನೇ ಬಿಟ್ಟು ಹತ್ತಿರದ ಪಟ್ಟಣಗಳನ್ನು ಸೇರಿ ಕೂಲಿ ನಾಲಿ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಗ್ರಾಮದಲ್ಲಿ ಶಾಂತಿ ವಾತಾವರಣ ಕಂಡು ವಾಸಿಸಲು ತೆರಳಿರುವ ದಲಿತ ಕುಟುಂಬಗಳಿಗೆ ಸೂರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ ಕೊಟ್ಟೂರು ಪೊಲೀಸ್ ಠಾಣೆಗೆ ಆಗಮಿಸಿದ ಹಾನಿಗೊಳಗಾದ ಸುಮಾರು ೨೦೦ ಬಡಕುಟುಂಬದ ದಲಿತ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರ ಗಮನಕ್ಕೂ ಪತ್ರದ ಮೂಲಕ ತರಲಾಗಿದೆ. ಶತ ಶತಮಾನಗಳಿಂದಲೂ ಮೇಲ್ವರ್ಗಗಳಿಂದ ದಲಿತರ ಮೇಲಿನ ಹಲ್ಲೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸಹ ಇದುವರೆಗೂ ಸರ್ಕಾರ ಗಮನ ಹರಿಸದೇ ಇರುವುದು ದಲಿತರ ಮೇಲಿನ ಇವರ ನಿರ್ಲಕ್ಷ್ಯತನವನ್ನು ತೋರಿಸುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು ಹಾನಿಗೊಳಗಾದ ಬಡದಲಿತ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಪರಿಹಾರ ಒದಗಿಸಬೇಕೆಂದು ಬಡದಲಿತ ಹೆಣ್ಣುಮಕ್ಕಳು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ. 


ಕೋಟ್-೧

ತರಳಬಾಳು ಹುಣ್ಣಿಮೆಯ ದಿನ ಘಟನೆ ನಡೆದ ಹಿನ್ನೆಲೆಯಲ್ಲಿ ಭಯಭೀತಗೊಂಡು, ಇರುವ ಮನೆ ದಾಳಿಗೊಳಗಾಗಿ, ನಮ್ಮ ಸ್ವಂತ ಊರನ್ನೇ ಬಿಟ್ಟು ಪಟ್ಟಣ ಸೇರಿದ್ದೇವೆ. ಸುಖಾಸುಮ್ಮನೆ ದಾಳಿಗೊಳಗಾದ ನನ್ನ ಮಗನ ಕಾಲು ಗುಣಮುಖನಾಗಲು ಹರಸಾಹಸ ಪಟ್ಟಿದ್ದಾನೆ. ಈಗಲಾದರೂ ಸರ್ಕಾರ ಪರಿಹಾರ ನೀಡಲು  ಗಮನ ಹರಿಸಲಿ.

ರೇಣುಕಮ್ಮ, ದಾಳಿಗೊಳಗಾದ ದಲಿತ ಮಹಿಳೆ, ಕಾಳಾಪುರ

ಕಾಮೆಂಟ್‌ಗಳು

  1. ನಾನು ಕೇಳಿದಂತೆ, ಗಮನಿಸಿದಂತೆ ತರಳಬಾಳು ಗುರುಗಳು ಪೊಳ್ಳು ಭರವಸೆ ನೀಡುವವರು ಅಲ್ಲ. ಅವರು ಸರ್ವ ಜನಾಂಗದ ಒಳಿತಿಗಾಗಿ ಕೆಲಸ.ಮಾಡುತ್ತಾರೆ. ಹಿಂದಿನ ಸರ್ಕಾರ ಮಠ,ಮಂದಿರಗಳಿಗೆ ಹಣ ಮಂಜೂರು ಮಾಡಿದಾಗ ತಮ್ಮ ಮಠಕ್ಕೆ ಹಣ ನೀಡುವುದನ್ನು ನಿರಾಕರಿಸಿ ಸಾರ್ವಜನಿಕ ಉದ್ದೇಶಕ್ಕೆ ಹಣ ಮಂಜೂರು ಮಾಡುವಂತೆ ಸೂಚಿಸಿದವರು. ಸಕಲ ಜವಾತ್ಮರಿಗೆ ಲೇಸನ್ನೇ ಬಯಸುವವರು. ಅವರು ಪ್ರತಿ ಸೋಮವಾರ ನಡೆಸುವ ನ್ಯಾಯ ಪ್ರಕ್ರಿಯೆಯೇ ಸಾಕ್ಷಿ. ಗ್ರಾಮಸ್ಥರು ಅವರು ಚಾಚಿದ ಸಹಾಯ ಹಸ್ತವನ್ನು ನಿರಾಕರಿಸಿದ್ದಾರಂತೆ. ಆದರ ಸತ್ಯಾಸತ್ಯತೆ ಪರೀಕ್ಷಿಸಿ .

    ಪ್ರತ್ಯುತ್ತರಅಳಿಸಿ
  2. ಯಾವುದನ್ನು ಬರೆಯಬೇಕಾದ್ದು, ಪ್ರಕಟಿಸಬೇಕಾದರೂ ವಿಚಾರವಂತಿಕೆಯಿಂದ ಪ್ರಕಟಿಸಬೇಕು. ಎಂಜಲು ತಿಂದು ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆದರೆ ಈಗೇ ಹಾಗುವುದು. ಆಕಾಶಕ್ಕೆ ಉಗಿಯುವ ಪ್ರಯತ್ನವಾದಂತಗಾಗುತ್ತದೆ.

    ಕಾಳಾಪುರ ಮತ್ತು ಈ ವ್ಯಾಪ್ತಿಯ 68
    ಮಕ್ಕಳಿಗೆ LKG ಯಿಂದ ಪಿಯುಸಿ ವರೆಗೆ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರೀತ ಶಾಲಾ ಕಾಲೇಜುಗಳಲ್ಲಿ ಊಟ ವಸತಿಯುತ ಉಚಿತ ಶಿಕ್ಷಣವನ್ನು ಶ್ರೀ ತರಳಬಾಳು ಜಗದ್ಗುರಗಳವರು
    ಕಲ್ಪಿಸಿ ಆ ಮಕ್ಕಳ ಭವಿಷ್ಯಕ್ಕೆ ಆಸರೆಯಾಗಿದ್ದಾರೆ.

    ಮಾತು ಸಾಧನೆಯಾಗಬಾರದು ಕೃತಿ ಸಾಧನೆಯಾಗಬೇಕು ಎಂಬುದನ್ನು ಈಗಾಗಲೇ ಶ್ರೀ ತರಳಬಾಳು ಜಗದ್ಗುರುಗಳವರು ತಮ್ಮ ನೂರಾರು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಮನೆ ದೇವರಿಗಿದ್ದಾರೆ.

    ಪತ್ರಿಕಾ ಧರ್ಮದ ಕನಿಷ್ಠ ಪರಿಜ್ಞಾನ ಇಲ್ದದ ನಿಮ್ಮಂತವರಿಂದ ನಾಡಿನ ಮಾಧ್ಯಮ ಲೋಕಕ್ಕೆ ಕನಿಷ್ಠ ಬೆಲೆ ಇಲ್ಲದಂತಾಗಿರುವುದು ಮಾತ್ರ ಸತ್ಯ.ಅಂದಹಾಗೆ ನಿನ್ನ ಪತ್ರಿಕೆಯ ಪ್ರಚಾರಕ್ಕೆ ಸುಳ್ಳು ಸುದ್ದಿಯನ್ನು ಹಬ್ಬಿಸುವ ನಿನ್ನ ವಿಕೃತ ಬುದ್ಧಿವಂತಿಕೆಗೆ ನಮ್ಮ ಅಂತಿಮ ನಮನಗಳು

    ಪ್ರತ್ಯುತ್ತರಅಳಿಸಿ
  3. ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಕಾಳಾಪುರದ ಅಮಾಯಕ ಜನರನ್ನ.

    ಎಂಜಲು ತಿಂದು ಬರೆಯುವ ಪತ್ರಕರ್ತನಿಗೆ ಗೊತ್ತಿದೆಯಾ ಸತ್ಯ...!

    ಹೌದು ಕಳೆದ ಜನವರಿ ತಿಂಗಳಿನಲ್ಲಿ ನಡೆದಿದ್ದ ಗಲಭೆಯ ವಿಷಯವನ್ನೇ ಇಟ್ಟುಕೊಂಡು ಕೆಲವು ನೀಚ, ಸ್ವಾರ್ಥ ಮನಸ್ಥಿತಿಯ ವ್ಯಕ್ತಿಗಳು ಕಾಳಾಪುರದ ಅಮಾಯಕ ಜನರನ್ನ ತಮ್ಮ ವೈಯಕ್ತಿಕ ಏಳ್ಗೆಗಾಗಿಯೋ ಅಥವಾ ಪ್ರಚಾರಕ್ಕಾಗಿಯೋ ಬಳಸಿಕೊಳ್ಳುತ್ತಿರುವುದನ್ನ ಪತ್ರಕರ್ತ ವಲಯದ ವರದಿಗಾರರು ಖಂಡಿಸಬೇಕಿದೆ. ತರಳಬಾಳು ಹುಣ್ಣಿಮೆಯ ಮೊದಲ ದಿನದ ಬೈಕ್ ರ್ಯಾಲಿ ಸಾಗುವಾಗ ಕಾಳಾಪುರ ಕ್ರಾಸ್ ಬಳಿ ಕಿಡಿಗೇಡಿಗಳು ರ್ಯಾಲಿ ಹೊರಟ ಜನರ ಮೇಲೆ ಕಲ್ಲು ತೂರಿ ಅವಾಚ್ಯವಾಗಿ ನಿಂದಿಸಿದ್ದರ ಪರಿಣಾಮ ಕಾಳಾಪುರ ಗ್ರಾಮದಲ್ಲಿ ಗುಂಪು ಘರ್ಷಣೆಯಾಗಿ ಹಲವು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳು ಹಾಗೂ ಒಬ್ಬರಿಗೆ ತೀವ್ರ ಸ್ವರೂಪದ ಗಾಯವಾಗಿ ಹಲವು ವಾಹನಗಳಿಗೆ ಹಾನಿಯಾಗಿತ್ತು. ಗಲಭೆಯಲ್ಲಿ ಪಾಲ್ಗೊಂಡಿದ್ದ ಹಲವಾರು ಆರೋಪಿತರನ್ನ ಪೊಲೀಸರಿಗೆ ಒಪ್ಪಿಸಿ, ಗಲಭೆಯಲ್ಲಿ ಗಾಯಗೊಂಡಿದ್ದ ಪ್ರತಿಯೊಬ್ಬರಿಗೂ ದಾವಣಗೆರೆಯ ಪ್ರತಿಷ್ಠಿತ ಹಾಗೂ ಸುಸಜ್ಜಿತ ಸೌಲಭ್ಯವುಳ್ಳ ಎಸ್.ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಕೊಡಿಸಿ, ವೈಯಕ್ತಿಕವಾಗಿ ಖುದ್ದು ಅವರವರ ಆರೋಗ್ಯ ವಿಚಾರಿಸಿ, ಇಡೀ ಕಾಳಾಪುರ ಗ್ರಾಮವನ್ನ ತರಳಬಾಳು ಮಠ ದತ್ತು ತೆಗೆದುಕೊಳ್ಳುತ್ತದೆ ಎಂದು ತೆರೆದ ಬೃಹತ್ ಹುಣ್ಣಿಮೆಯ ಕಾರ್ಯಕ್ರಮದಲ್ಲೇ ಸಿರಿಗೆರೆಯ ಗುರುಗಳು ಘೋಷಿಸಿದ್ದರು. ಅದಾದ ನಂತರ ಕಾಳಾಪುರದ ಮಕ್ಕಳಿಗೆ ತರಳಬಾಳು ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಸಂಪೂರ್ಣ ಉಚಿತ ಶಿಕ್ಷಣದ ನೆರವನ್ನೂ ನೀಡಿದರು. ಪರಿಣಾಮವಾಗಿ ಕಾಳಾಪುರ ಗ್ರಾಮದ 68 ವಿದ್ಯಾರ್ಥಿಗಳಿಗೆ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಉಚಿತವಾಗಿ ದಾಖಲು ಮಾಡಿಕೊಂಡು ಅವರಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಇಷ್ಟೆಲ್ಲಾ ನಡೆದರೂ ಕೆಲವು ಮಾಡಲು ಕೆಲಸವಿಲ್ಲದ ಕಿಡಿಗೇಡಿಗಳು ಕಾಳಾಪುರದ ಅಮಾಯಕ ಜನರನ್ನ ದಿಕ್ಕುತಪ್ಪಿಸಿ ತಮ್ಮ ತಮ್ಮ ವೈಯಕ್ತಿಕ ಬೆಳವಣಿಗೆಗೆ ಬಳಸಿಕೊಳ್ಳುತ್ತಿರುವುದು ಖಂಡನೀಯವಾಗಿದೆ. ಹಾಗೆಯೇ ಅನಗತ್ಯವಾಗಿ ತರಳಬಾಳು ಮಠದ ಬಗೆಗೆ ಅಪಪ್ರಚಾರ ಮಾಡುತ್ತಿರುವ ಹಾಗೂ ಜನರಲ್ಲಿ ಅನವಶ್ಯಕ ಗೊಂದಲ ಸೃಷ್ಟಿಸುತ್ತಿರುವ ಆ ಮೂಲಕ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ, ಹಾಗೂ ಸಾಮಾಜಿಕ ಭದ್ರತೆಯ ವೈಫಲ್ಯಕ್ಕೆ ಕಾರಣ ಆಗುತ್ತಿರುವವರ ಕುರಿತು ಶೀಘ್ರದಲ್ಲೇ ತರಳಬಾಳು ಮಠದ ಭಕ್ತರು ಕಾನೂನಾತ್ಮಕ ಕ್ರಮ ಕೈಗೊಳ್ಳುವವರಿದ್ದಾರೆ.

    ಕಾಳಾಪುರದ ಜನರೇ, ನಿಮ್ಮ ಸಮಸ್ಯೆಗಳೇನೇ ಇದ್ದರೂ ನೇರವಾಗಿ ಸಿರಿಗೆರೆಯ ಶ್ರೀಗಳನ್ನ ಕಂಡು ಅವರಲ್ಲಿ ಮನವಿ ಮಾಡಿ. ಖಂಡಿತ ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತದೆ. ಇಂತಹ ಕೆಲಸಕ್ಕೆ ಬಾರದ ವ್ಯಕ್ತಿಗಳು ಸುಖಾಸುಮ್ಮನೆ ಪತ್ರಕರ್ತರಂತೆ ನಟಿಸಿ ನಿಮ್ಮನ್ನ ವಂಚಿಸುತ್ತಾರೆ. ಎಚ್ಚರ

    ಗಾಯಗೊಂಡು ನರಳುತ್ತಿದ್ದ ಈ ಕೆಳಗಿನವರನ್ನು ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿದ ಶ್ರೀ ಜಗದ್ಗುರುಗಳವರು ಲಕ್ಷಾಂತರ ವೆಚ್ಚದಲ್ಲಿ ವಿಐಪಿ ಚಿಕಿತ್ಸೆಯನ್ನು ಕೊಡಿಸಿ ಸಂಪೂರ್ಣ ಗುಣಮುಖರನ್ನಾಗಿಸಿರುತ್ತಾರೆ.

    ಚಿಕಿತ್ಸೆ ಪಡೆದವರು.

    1. Thimmesh S O
    Muchanur
    Jagalur Tq

    2. Sunil Gowda
    Muchanur
    Jagalur Tq

    3. Manjappa
    Belludi
    Harihar Tq

    4. Manjunath K
    Nandibevur
    Harapanahalli Tq

    5. Shivananda K
    Kyarakatte
    Harapanahalli Tq

    6. Giddappara Ramesh
    Kyarakatte
    Harapanahalli Tq

    7. Basamma
    Kalapura
    Kottur Tq

    8. Manganahalli Siddappa
    Kalapura
    Kottur Tq

    9. Siddaiah T M
    Kalapura
    Kottur Tq


    ಎಂಜಲು ತಿಂದು ಬರೆಯುವ ಪತ್ರಕರ್ತ ಮೊದಲು ವಾಸ್ತವತೆಯನ್ನು ಅರಿಯುವುದು ಒಳಿತು.

    ಪ್ರತ್ಯುತ್ತರಅಳಿಸಿ
  4. ಅಮಾಯಕ ಜನರನ್ನು ಹೇಗೇ ತಮ್ಮ ಸ್ವಾರ್ಥಕ್ಕೆ ಮತ್ತು ಒಂದು ಮಠ ಸಂಸ್ತೆಯ ಹೆಸರನ್ನು ಹಾಳು ಮಾಡುವುದಕ್ಕೆ ಬಳಸುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾರಣೆ . ಶಿವಪ್ರಕಾಶರವು ಮೇಲೆ ಹೇಳಿದಂತೆ ಸ್ವತ ಗುರುಗಳು ಮುತುವರ್ಜೆವಹಿಸಿ ಗ್ರಾಮದ ಶಿಕ್ಷಣ ಮತ್ತೆ ಶಾಂತಿ ನೆಲೆಸುವಂತೆ ಮಾಡಿದಾರೆ. ಅಂತಹ ನೊಂದ ಜನರು ಇನ್ನು ತಮಗೆ ನ್ಯಾಯ ಸಿಗಲಿಲ್ಲವೆಂದರೇ ಪತ್ರಕರ್ತರೆಂದು ಕರೆಸಿಕೊಳ್ಳುವ ನೀವು ಅಮಾಯಕ ಜನರನ್ನು ಯೆಲ್ಲರಿಗೂ ನ್ಯಾಯ ದೊರಕಿಸುವ ಪ್ರತಿ ಸೋಮವಾರ ನಡೆಯುವ" ಸದ್ಧರ್ಮ ಪೀಠಕ್ಕೆ ಕರೆತರಬಹುದಿತ್ತು.ಅದನ್ನೂ ಬಿಟ್ಟು ಪುಂಗಿ ದಾಸರಂತೆ ಗುರುಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು ಅಕ್ಷರಶ ಒಳ ಸಂಚೆ ಸಾರಿ. ಅದಕ್ಕೇ ತಮ್ಮ ಮಾಧ್ಯಮ ಬಳಸಿರುವದು
    ದುರಂತ. ಅಂದ ಹಾಗೆ ಹೆದರಿ ಗುಳೆ ಹೊರಟಿರುವ ವಿಷಯ ಕೇಳಿ ನಗಬೇಕೋ ಅಳಬೇಕೋ ಗೊತ್ತಿಲ್ಲ.ಅವರು ನಿಜವಾಗಿ ಗುಳೆ ಹೊರಟಿದ್ದಾರ ಅಥವಾ ಇಲ್ಲವೋ ಇದ್ದರೂ ಈ ಬರಗಾಲಕ್ಕೆ ಹೋರ್ತಿದ್ದಾರೋ ಗೊತ್ತಿಲ್ಲ. ನಿಮಗೆ ಅಂತವರ ಮೇಲೆ ನಿಜವಾದ ಕರುಣೆ ಕನಿಕರ ಇದ್ದರೆ ಎಲ್ಲರನ್ನೂ ಸಿರಿಗೆರೆ ಗುರುಗಳ ಹತ್ತಿರ ಕರೆತನ್ನಿ ಇಲ್ಲದಿದ್ದರೆ ಮುಂದಾಗುವ ಪರಿಣಾಮ ನೀವೇ ಎದುರಿಸಿ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ