ನಾರಾ ಚಂದ್ರಬಾಬು ನಾಯ್ಡು ಬಂಧನವನ್ನು ಖಂಡಿಸಿ ಬಹಿರಂಗ ಸಭೆ
ಮಾನ್ವಿ: ಪಟ್ಟಣದ ಕಾಕತೀಯ ನಗರದಲ್ಲಿ ಮಾನ್ವಿ ತಾಲೂಕು ರೈತ ಜನಸಂಘ ವತಿಯಿಂದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಬಂಧನವನ್ನು ಖಂಡಿಸಿ ಸಿ.ಬಿ.ಎನ್. ಅವರಿಗೆ ಮಾನವಿ ರೈತರ ಸಂಘೀ ಭಾವ ಹೆಸರಿನಲ್ಲಿ ನಡೆದ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಹಂಪಯ್ಯ ನಾಯಕ ಮಾತನಾಡಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಮೂರು ಅವಧಿಗೆ ಮುಖ್ಯಮಂತ್ರಿಗಳಾಗಿ ಆಂಧ್ರಪ್ರದೇಶದ ಅಭಿವೃದ್ದಿಗೆ ಸಾಕಷ್ಟು ಶ್ರಾಮಿಸಿದ್ದಾರೆ. ಅಂತಹವರನ್ನು ಇಂದಿನ ಸರಕಾರದಿಂದ ಆಕ್ರಮವಾಗಿ ಬಂಧಿಸಿರುವುದು ಸರಿಯಲ್ಲ ಈ ಬಂದನದ ಹಿಂದೆ ಸೇಡಿನ ರಾಜಕೀಯ ದುರುದ್ದೇಶವಿದ್ದೆ ಆದ್ದರಿಂದ ನಾವೇಲರು ಅವರನ್ನು ಬೆಂಬಲಿಸೋಣ ಎಂದು ತಿಳಿಸಿದರು.
ಮಂತ್ರಾಲಯ ತೆಲುಗುದೇಶಂ ಪಕ್ಷದ ಉಸ್ತುವರಿ ಹಾಗೂ ಮಾಜಿ ಶಾಸಕ ತಿಕ್ಕರೆಡ್ಡಿ ಮಾತನಾಡಿ ಆಂಧ್ರ ಪ್ರದೇಶದಲ್ಲಿ ಇಂದಿನ ಸರಕಾರದಿಂದ ಅನೇಕ ಆಕ್ರಮಗಳು ನಡೆಯುತ್ತಿದೆ ಮರಳು ದಂಧೆ, ಆಕ್ರಮ ಮಧ್ಯಮಾರಟ ಸೇರಿದಂತೆ ಕಾನೂನು ಬಹಿರ ಚಟುವಟಿಕೆಗಳು ನಿರತಂಕವಾಗಿ ನಡೆಯುತ್ತಿರುವುದಕ್ಕೆ ಆಂಧ್ರಸರಕಾರವೇಬೆAಬಲ ನೀಡುತ್ತಿದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು ಜನರು ಭಯದಿಂದ ಜೀವನ ನಡೆಸುವಂತಾಗಿದೆ ರಾಜಕೀಯ ದುರುದ್ದೇಶ ಸಾಧನೆಗಾಗಿ ಆಂಧ್ರ ಪ್ರದೇಶ ಸರಕಾರ ಅಧಿಕಾರಕ್ಕೆ ಬಂದು ೪ ವರ್ಷದ ನಂತರ ಈಗ ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನುವ ಅರೋಪವನ್ನು ಹೊರಿಸಿ ಯಾವುದೇ ಪುರವೇ ಇಲ್ಲದೆ ಇರುವ ವಿಷಯದ ಮೇಲೆ ಆಡಳಿತ ಯಂತ್ರವನ್ನು ದುರುಪೊಯೊಗವನ್ನು ಮಾಡಿಕೊಂಡು ಹಿರಿಯ ವಯಸ್ಸಿನ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡುರವರಿಗೆ ಜಮೀನು ಸಿಗದಂತೆ ಮಾಡಿ ಅವರು ಜೈಲಿನಲ್ಲೆ ಉಳಿಯುವಂತೆ ಮಾಡುವುದಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಅನೇಕ ಸಂಚುಗಳನ್ನು ಮಾಡುತ್ತಿರುವುದರಿಂದ ಇಂದು ಅವರ ಬಿಡುಗಡೆಗಾಗಿ ಜಗತ್ತಿನ ಎಲ್ಲಾ ತೆಲುಗು ಪ್ರಜೆಗಳು ಒಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಮಾನ್ವಿ ತಾಲೂಕಿನ ಜನರು ಸರ್ವಪಕ್ಷಗಳ ಮುಖಂಡರು ಕೂಡ ಭಾರಿ ಬೆಂಬಲವನ್ನು ನೀಡಿದ್ದು ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಬಿಡುಗಡೆ ಗೊಂಡ ನಂತರ ಮಾನ್ವಿ ತಾಲೂಕಿಗೆ ಅವರನ್ನು ಕರೆತಂದು ಕೃತಜ್ಞತೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಟಿ.ವಿ.೫ ಮಾಧ್ಯಮ ಸಂಪಾದಕರಾದ ರಾಜೇಂದ್ರ ಮಾತನಾಡಿದರು.
ನಂತರ ವೇದಿಕೆಯಲ್ಲಿ ಸರ್ವಪಕ್ಷಗಳ ಮುಖಂಡರು ಒಟ್ಟಾಗಿ ಕೈ ಎತ್ತುವ ಮೂಲಕ ನಾರಾ ಚಂದ್ರಬಾಬು ನಾಯ್ಡುರವರಿಗೆ ಬೆಂಬಲವನ್ನು ಸೂಚಿಸಿದರು.
ನಂತರ ವೇದಿಕೆಯಲ್ಲಿ ಆಂಧ್ರ ಪ್ರದೇಶ ಕರ್ನೂಲ್ ಕ್ಷೇತ್ರದ ಮಾಜಿ ಶಾಸಕಿ ಸುಜಾತ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪನಾಯಕ, ಬಸವನಗೌಡ ಬ್ಯಾಗವಾಟ್, ಗಂಗಾಧರನಾಯಕ,ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶೇಷಗಿರಿ,ರಾವಿಬಾಬು . ಪುಟ್ಟ ಪ್ರಸಾದ್,ಬಿ.ಟಿ.ಸತ್ಯನಾರಾಯಣ, ಪಿ.ಹೆಚ್.ಸುಬ್ಬರಾವು, ರಾಮಬಾಬು, ಪಣಿ,ರಾಮರಾವು,ವೆಂಕಟರಾಮಣ, ಸುಬ್ಬರಾವು, ಮುಸಲಯ್ಯ, ವಿ.ಟಿ.ಮಲ್ಲಿಕಾರ್ಜುನ, ಸುಬ್ರಹಮ್ಮಣ್ಯಂ, ಮಾರ್ಕಂಡಯ್ಯ, ಅಯ್ಯಪ್ಪ ನಾಯಕ ಮ್ಯಾಕಲ್, ಮಲ್ಲಿಕಾರ್ಜುನ ಜಕ್ಕಲದಿನ್ನಿ, ವಿರೇಶನಾಯಕ ಬೆಟ್ಟದೂರು, ಶರಣಪ್ಪ ನಕ್ಕುಂದಿ, ಶರಣೆಗೌಡ, ಸೇರಿದಂತೆ ಆಂಧ್ರಪ್ರದೇಶದಿAದ ರಾಜ್ಯದಲ್ಲಿ ವಾಸಮಾಡುತ್ತಿರುವ ಸಾವಿರಾರು ಜನರು ಭಾಗವಹಿಸಿ ಕೈಯಲ್ಲಿ ಸಿ.ಬಿ.ಎನ್. ಪರವಾಗಿ ನಾವು ಎನ್ನುವ ಭಿತ್ತಿ ಫಲಕಗಳನ್ನು ಹಿಡಿದು ಬೆಂಬಲವನ್ನು ಸೂಚಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ