ಕಾಂಗ್ರೆಸ್ ಪಕ್ಷದ ಕೊಪ್ಪಳ ಲೋಕಸಭಾ ಟಿಕೆಟ್ ಆಕಾಂಕ್ಷಿ ಬಸವರಾಜ್ ಸ್ವಾಮಿ ಮಳ್ಳೆಮಠ ಬೆಂಬಲಿಸಲು ಮನವಿ

ಮಸ್ಕಿ : ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಬಸವರಾಜ್ ಸ್ವಾಮಿ ಮಳೆಮಠ ಅವರು ಇಂದು ಮಸ್ಕಿ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಶಾಸಕರಾದ ಬಸವನಗೌಡ ತುರುವಿಹಾಳ ಅವರನ್ನು ಭೇಟಿ ಮಾಡಿ ಲೋಕಸಭಾ ಟಿಕೆಟ್ ಗಾಗಿ ತಮ್ಮನ್ನು ಬೆಂಬಲಿಸಲು ಮನವಿಮಾಡಿದರು.

ಬಸವರಾಜ್ ಸ್ವಾಮಿ ಮಾತನಾಡಿ ಇಂದಿನ ಲೋಕಸಭಾ ಕ್ಷೇತ್ರದ ಸಂಸದರು ಭಾಷಾಜ್ಞಾನದ ಕೊರತೆಯಿಂದ, ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆ, ಅಧಿಕಾರಿ ವರ್ಗ ದೊಂದಿಗಿನ ಸಂವಹನವನದ ಕೊರತೆಯಿಂದಾಗಿ ,ಕೊಪ್ಪಳ ಲೋಕಸಭಾ ಕ್ಷೇತ್ರದ ಕೇಂದ್ರದ ಹಲವಾರು ಯೋಜನೆಗಳು ಕ್ಷೇತ್ರಕ್ಕೆ ತಂದು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಸಂಸತ್ ನಲ್ಲಿ ನಿರಾಳವಾಗಿ ಮಾತನಾಡಲು, ಕ್ಷೇತ್ರದ ಮತ್ತು ಭಾರತ ದೇಶದ ಜಲವಂತ ಸಮಸ್ಯೆಗಳು ಧ್ವನಿಯಾಗಲು ಕೇಂದ್ರ ಸರ್ಕಾರದ ಹಲವು ಹತ್ತು ಯೋಜನೆಗಳು ಅನುಷ್ಠಾನಕ್ಕಾಗಿ ಕೊಪ್ಪಳ ಲೋಕ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ರೈತರ, ಅಸಂಘಟಿತ ಕಾರ್ಮಿಕರ, ಬಡವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಪರವಾದ ಧ್ವನಿಯಾಗಲು, ಚರ್ಚೆ ಮಾಡಲು, ಜನರೊಂದಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ನನ್ನನ್ನು ಲೋಕಸಭಾ ಕ್ಷೇತ್ರದ 2024ರ ಚುನಾವಣೆ ಅಭ್ಯರ್ಥಿಯನ್ನಾಗಿಸಲು ಈ ಭಾಗದ ಶಾಸಕರು ಮತ್ತು ಮುಖಂಡರು ನನಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಸ್ಕಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ, ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮೇಶ ಬಾಗೋಡಿ, ಬಸವರಾಜ್ ಪ್ರಥಮ ದರ್ಜೆ ಗುತ್ತೇದಾರರು, ಮೈಬೂಬ್ ಸಾಬ್ ಮುದ್ದಾಪುರ್ ಕಿಸಾನ್ ಘಟಕದ ಅಧ್ಯಕ್ಷರು, ದ್ಯಾಮಣ್ಣ ನರಸಾಪುರ್ ಕಾಂಗ್ರೆಸ್ ಮುಖಂಡರು, ವೀರೇಶ,ಸುರೇಶ ನಾಯಕ್, ಅಪಾರ ಸಂಖ್ಯೆಯ ಮಳೆಮಠ ಅವರ ಬೆಂಬಲಿಗರು ಕಾಂಗ್ರೆಸ್ ಅಭಿಮಾನಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ