ಗ್ರಂಥಾಲಯದಲ್ಲಿ ಪ್ರಜಾಪ್ರಭುತ್ವ ಪ್ರತಿಜ್ಞಾವಿಧಿ ಬೋಧಿಸಿದ:ಮಲ್ಲಪ್ಪ ಗುಡ್ಲಾನೂರು

ಕೊಟ್ಟೂರು ಶಾಖಾ ಗ್ರಂಥಾಲಯದಲ್ಲಿ ಪ್ರಜಾಪ್ರಭುತ್ವ ಪ್ರತಿಜ್ಞಾವಿಧಿ ಬೋಧಿಸಿದ:ಮಲ್ಲಪ್ಪ ಗುಡ್ಲಾನೂರು

ಕೊಟ್ಟೂರು ಶಾಖಾ ಗ್ರಂಥಾಲಯದಲ್ಲಿ ಶುಕ್ರವಾರ ರಂದು ಬೆಳಿಗ್ಗೆ 10 ಗಂಟೆಗೆ ಡಾಕ್ಟರ್  ಬಿ ಆರ್ ಅಂಬೇಡ್ಕರ್ ಮತ್ತು  ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಮಾಡಿ ಹೂವಿನ ಹಾರ ಹಾಕಿ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಾ ಅಂತರಾಷ್ಟ್ರೀಯ *ಪ್ರಜಾಪ್ರಭುತ್ವ*  ಪ್ರತಿಜ್ಞಾವಿಧಿ ದಿನದಂದು *ಸಂವಿಧಾನ ಪೂರ್ಣ ಪೀಠಿಕೆಯನ್ನು* ಗ್ರಂಥಾಲಯ ಸದಸ್ಯರು, ಓದುಗರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ *ಮಲ್ಲಪ್ಪ ಗುಡ್ಲಾನೂರ್* ಗ್ರಂಥಾಲಯ ಸಹಾಯಕ ಇವರು ಓದಿದರು

ಈ ಸಂಧರ್ಭದಲ್ಲಿ ಭಾರಿ ಮಾಂತೇಶ ನಿವೃತ್ತ ಶಿಕ್ಷಕರು, ಎಂ ನವೀನ್ ಕುಮಾರ್, ರೈತ ಸಂಘದ ಮುಖಂಡರು ಜಂಬೂರಿ ಮರುಳ ಸಿದ್ದಪ್ಪ ,ಚಿಗಟೇರಿ ಕೊಟ್ರೇಶ್,ಅಕ್ಕಮಹಾದೇವಿ ,

ಬಾಚೇನಹಳ್ಳಿ ಈಶಪ್ಪ ಹಾಗೂ ವಿದ್ಯಾರ್ಥಿಗಳು ಭಾರತ ಸಂವಿಧಾನದ ಮತ್ತು ಸರ್.ಎಂ ವಿಶ್ವೇಶ್ವರಯ್ಯನವರ ಸಾಧನೆ ಬಗ್ಗೆ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*