*ಇಂಜಿನಿಯರ್ ದಿನಾಚರಣೆಗೆ ಶುಭಾಶಯಗಳು ತಿಳಿಸಿದ ಶೇಖರ್ ಬಹುರೂಪಿ(ಇ.ಇ)*

ವಿಜಯ ನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಪಟ್ಟಣದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಕಾರ್ಯ ಮತ್ತು ಪಾಲನ ವಿಭಾಗ ಹಗರಿಬೊಮ್ಮನಹಳ್ಳಿ ರವರ ಕಚೇರಿಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ ಎಲ್ಲಾರ ಸಮ್ಮುಖದಲ್ಲಿ ಭಾರತ ಕಂಡ ಅತ್ಯಂತ ಶ್ರೇಷ್ಠ ಇಂಜಿನಿಯರ್ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ ಹುಟ್ಟು ಹಬ್ಬದ ದಿನವನ್ನು ಇಂಜಿನಿಯರ್ ದಿನಾಚರಣೆ ಎಂದು ಕಾರ್ಯಕ್ರಮವನ್ನು ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡುವುದರೊಂದಿಗೆ ಸರ್ ಎಂ ವಿಶ್ವೇಶ್ವರ ರಯ್ಯ ನವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಹಾಗೂ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ದಿನದ ಕೇಕ್ ಅನ್ನು ಕಟ್ ಮಾಡುವುದರೊಂದಿಗೆ ಸಿಹಿ ಹಂಚಿ ಸರಳವಾಗಿ ಆಚರಣೆ ಮಾಡಿದರು. 

ಈ ಸಂದರ್ಭದಲ್ಲಿ ಮಾನ್ಯ ಶೇಖರ್ ಬಹುರೂಪಿ, ಕಾರ್ಯನಿರ್ವಾಹಕ ಇಂಜಿನಿಯರ್ ಇವರ ಸರ್ ಎಂ ವಿಶ್ವೇಶ್ವರಯ್ಯ ರವರಿಗೆ ಗೌರವಪೂರ್ವಕವಾಗಿ ಶುಭಾಶಯಗಳು ತಿಳಿಸುವುದರೊಂದಿಗೆ ಮಾತನಾಡುತ್ತಾ ಎಲ್ಲಾ ಕಾರ್ಯನಿರತ ಇಂಜಿನಿಯರ್ ದಿನಾಚರಣೆಯ ಶುಭಾಶಯಗಳನ್ನು ತಿಳಿಸುವತ್ತ ಭಾಗವಹಿಸಿದ್ದಂತಹ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಶುಭಾಶಯ ಹಾಗೂ ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ಆರ್ ತೇಜ ನಾಯಕ್ ಎ ಇ ಇ , ಮೋಟ್ಲಾ ನಾಯಕ್ ಎಇ ಇ, ಸಾವಿತ್ರಿ ಎ.ಒ, ರಾಘವೇಂದ್ರ ಎ.ಇ, ಬಿ ನಾರಪ್ಪ ಸಿ.ಇ.ಸಿ, ಕೆ.ರಾಮು, ಬಿ ಹೊನ್ನೂರಪ್ಪ, ಎ.ಪ್ರಕಾಶ್, ಸಹನಾ, ಅಶ್ವಿನಿ,ವಿಜಯಲಕ್ಷ್ಮಿ, ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


 ವರದಿ ರಾಘವೇಂದ್ರ ಸಾಲುಮನೆ ವರದಿಗಾರರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ