ಎಲೆಮರೆಯ ಕಾಯಿಗಳಂತೆ ಇದ್ದ ಶಿಕ್ಷಕರನ್ನು ಗುರುತಿಸಿದ್ದು ಹೆಮ್ಮೆಯ ಸಂಗತಿ - ಪ್ರತಾಪಗೌಡ ಪಾಟೀಲ್
ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಸ್ಕಿಯ ಅಭಿನಂದನ್ ಸಂಸ್ಥೆಯ ವತಿಯಿಂದ ಜನ ಮೆಚ್ಚಿದ 20 ಜನ ಶಿಕ್ಷಕರಿಗೆ "ಅಭಿನಂದನ್ ಶಿಕ್ಷಕ ರತ್ನ" ಎಂಬ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಹಿರಿಯ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಯಲ್ಲಪ್ಪ ಗುಂಡಪ್ಪ ಜಾಲಿಹಾಳ ಅವರಿಗೆ ಅಭಿನಂದನ್ ಜೀವಮಾನ ಸಾಧನೆ ಪ್ರಶಸ್ತಿ, ಸಿದ್ದಾರೆಡ್ಡಿ ಗಿಣಿವಾರ, ಬಿ ಆರ್ ಪಿ ರಾಮಚಂದ್ರ ನಿರಾಳೆ, ಸಿಆರ್‌ಪಿ ರಾಮಸ್ವಾಮಿ, ಚಂದ್ರು ಬೆಂಡೋಣಿ, ಶಿವಯೋಗಿ ಹುಲಿಗುಡ್ಡ, ಚಿಕ್ಕಮಗಳೂರು ಜಿಲ್ಲೆಯ ದಿನೇಶ್, ವಿಜಯನಗರ ಜಿಲ್ಲೆಯ ಅರುಣ್ ಕುಮಾರ್, ಜಮಖಂಡಿಯ ಪರಮಾನಂದ ಹಾಗೂ ಇನ್ನಿತರ ಶಿಕ್ಷಕರಿಗೆ ರಾಜ್ಯಮಟ್ಟದ ಅಭಿನಂದನ್ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಅವರು ಎಲೆಮರೆಯ ಕಾಯಿಗಳಂತೆ ಇದ್ದು ಕಾರ್ಯನಿರ್ವಹಿಸಿದ ಹಾಗೂ ಅತ್ಯುತ್ತಮವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ ಹಲವಾರು ಜನ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಿ ಇನ್ನಷ್ಟು ಚೈತನ್ಯವನ್ನು ತುಂಬಿದ ಅಭಿನಂದನ್ ಸಂಸ್ಥೆಯ ಕಾರ್ಯ ಶುಭವಾಗಲಿ ಎಂದು ಶುಭ ಕೋರಿದರು.
ನಂತರ ಮಾತನಾಡಿದ ವೆಂಕಟಗಿರಿ ಸಿದ್ಧಾಶ್ರಮದ ಶ್ರೀಗಳಾದ ಸದಾಶಿವಾಚಾರ್ಯರು ಪವಿತ್ರವಾದ ಬೋಧನೆಯ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕರನ್ನು ಅದರಲ್ಲೂ ಹಿಂದುಳಿದ ಪ್ರದೇಶಗಳಲ್ಲಿ ತಮ್ಮ ಅಮೂಲ್ಯವಾದ ಹಾಗೂ ಸುಂದರವಾದ ಕಾರ್ಯದಲ್ಲಿ ನಿರತರಾದ ಶಿಕ್ಷಕರಿಗೆ ಪ್ರಶಸ್ತಿ ನೀಡಿದ್ದರಿಂದ ಈ ಪ್ರಶಸ್ತಿಗೆ ಒಂದು ಅರ್ಹತೆ ಬಂಧಂತಾಗಿದೆ. ಇನ್ನು ಹಲವಾರು ಶಿಕ್ಷಕರಿಗೆ ತಮ್ಮ ಕಾರ್ಯವನ್ನು ಉತ್ತಮಗೊಳಿಸುವಲ್ಲಿ ಈ ಪ್ರಶಸ್ತಿ ಸ್ಪೂರ್ತಿದಾಯಕವಾಗುವುದು ಎಂಬ ಭರವಸೆ ನನಗಿದೆ ಅವರ ಈ ಕಾರ್ಯಗಳು ಹೀಗೆ ಮುಂದೆವರೆಯಲಿ ಅಥವಾ ಅವರಿಗೆ ಸಕಲ ಕೀರ್ತಿಗಳು ದೊರೆಯಲಿ ಎಂದು ಆಶೀರ್ವದಿಸಿದರು.
ನಂತರ ಮಾತನಾಡಿದ ಹಿರಿಯ ನಾಯಕರಾದ ಹೆಚ್.ಬಿ.ಮುರಾರಿ ಅವರು ಆರಂಭದಿಂದಲೂ ಬಡತನದಲ್ಲಿ ಹುಟ್ಟಿ ಪ್ರಮಾಣದಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ರಾಮಣ್ಣ ಹಂಪರಗುಂದಿ ಅವರ ಈ ಸೇವೆಯು ಅಮೋಘವಾಗಿದೆ. ಹಾಗೂ ಇವರು ನೀಡುತ್ತಿರುವ ಶಿಕ್ಷಕರಿಗೆ ಈ ಪ್ರಶಸ್ತಿಯು ಬಹಳ ಅರ್ಥಪೂರ್ಣವಾಗಿದ್ದು ನೇರವಾಗಿ ಜನರಿಂದ ಆಯ್ಕೆಯಾದ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಬಹಳ ಸಂತಸಕರವಾಗಿದೆ. ಅವರ ಎಲ್ಲಾ ಕಾರ್ಯಗಳಿಗೆ ಶುಭವಾಗಲಿ ಹಾಗೂ ಅವರಿಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದರು.
ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಮುಖಂಡರಾದ ಕೆ.ಕರಿಯಪ್ಪ, ಖ್ಯಾತ ವೈದ್ಯರಾದ ಶಿವಶರಣಪ್ಪ ಇತ್ಲಿ, ರಾ.ನೌ.ಸಂ.ತಾಲ್ಲೂಕ ಅಧ್ಯಕ್ಷ ಶಂಕರಗೌಡ ಕರಡಕಲ್, ಪ್ರಾ.ಶಾ.ಶಿ.ಸಂ.ತಾಲ್ಲೂಕ ಅಧ್ಯಕ್ಷ ಬಾಲಸ್ವಾಮಿ, ಪ್ರೌ.ಶಾ.ಶಿ.ಸಂ.ತಾಲ್ಲೂಕ ಅಧ್ಯಕ್ಷ ಪಂಪಾಪತಿ ಹೂಗಾರ್, ಪ್ರಭಾರಿ ಶಿಕ್ಷಣಾಧಿಕಾರಿ ಬಸಪ್ಪ ತನಿಖೆದಾರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ಮೇಟಿ, ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ ಕ್ಯಾತ್ನಟ್ಟಿ, ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳು, ಹಲವಾರು ಶಿಕ್ಷಕರು, ನಾಗರಿಕರು, ಅಭಿನಂದನ್ ಸ್ಪೂರ್ತಿಧಾಮದ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ