ಹೋರಾಟಕ್ಕೆ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ : ಸಹಜ ಜನಜೀವನ.
ವರದಿ - ಮಂಜುನಾಥ್ ಕೋಳೂರು, ಕೊಪ್ಪಳ
ಕೊಪ್ಪಳ ಸೇ 30 : - ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂಧುಗೆ ಕೊಪ್ಪದಲ್ಲಿ ನಿರಸ ಪ್ರಕ್ರಿಯೆ ವ್ಯಕ್ತವಾಯಿತು. ಈ ಬಂಧ್ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು ನಗರದಲ್ಲಿ ಅಂಗಡಿ ಮುಗ್ಗಟ್ಟು ಬ್ಯಾಂಕುಗಳು ಸರ್ಕಾರಿ ಸಂಸ್ಥೆಗಳು ಎಪಿಎಂಸಿ ಮಳಿಗೆಗಳು ಮಾರುಕಟ್ಟೆ ಎಂದನಂತೆ ಕಾರ್ಯನಿರ್ವಹಿಸಿದವು . ಅಲ್ಲದೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಗಳು ಯಾವುದೇ ಆಡಳಿತಡೆ ಇಲ್ಲದೆ ಸಂಚರಿಸಿದವು . ನಗರದ ಪ್ರಮುಖ ಜವರ್ ರಸ್ತೆ , ಗದಗ್ ಹೊಸಪೇಟೆ ರಸ್ತೆ , ಹಸನ್ ರಸ್ತೆ, ಸಾಲಾರ್ ಜಂಗ್ ರಸ್ತೆಯಲ್ಲಿ ಜನ ವಾಹನ ಸಂಚಾರ ಸಹಜವಾಗಿತ್ತು. ಕೆಲವು ಬೀದಿ ಬದಿ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ವ್ಯಾಪಾರ ಸ್ಥಗಿತಗೊಳಿಸಿ ಅಂಗಡಿಯನ್ನು ಮುಚ್ಚಿ ಬೆಂಬಲ ಸೂಚಿಸಿದರು. ಶುಕ್ರವಾರ ಬೆಳಗ್ಗೆ ಕೆ .ಎಮ್ .ಹಳ್ಳಿ ನೇತೃತ್ವದ ಕನ್ನಡ ಪರ ಸಂಘಟನಾ ಸದಸ್ಯರು ಕೇಂದ್ರೀಯ ಬಸ್ ನಿಲ್ದಾಣದ ಬಳಿ ಕಾಲಿ ಕೊಡ ಹೊತ್ತು , ತೆಂಗಿನ ಚಿಪ್ಪು ಪ್ರದರ್ಶಿಸುತ್ತಾ ಮೆರವಣಿಗೆ ನಡೆಸಿದ್ದು ಕಂಡುಬಂತು. ಅಂಗಡಿಗಳನ್ನು ಮುಚ್ಚಿ ಬಂದಗೆ ಬೆಂಬಲ ಸೂಚಿಸುವಂತೆ ಆ ಸದಸ್ಯರು ಅಂಗಡಿಗಳನ್ನು ತೆರೆದ ಮಾಲೀಕರಿಗೆ ಮನವಿ ಮಾಡಿಕೊಳ್ಳುತ್ತಾ ಸಾಗುತ್ತಿದ್ದರು. ಕನ್ನಡ ಪರ ಸಂಘಟನೆ ( ಶಿವರಾಮೇಗೌಡ ಬಣದ) ಸದಸ್ಯರಾದ ಅಜ್ಜಪ್ಪ ಕರಡಕಲ್, ಶಿವರಾಜ್ ಉಳ್ಳಾಗಡ್ಡಿ , ರಾಜಶೇಖರ್ ಶಾಗೋಟಿ ಈಶಪ್ಪ ಮೂಲಮನಿ , ಮೌನೇಶ ಹಡಪದ್ , ರಾಜೇಶ ಚಿನ್ನೂರ್ ನೇತೃತ್ವದಲ್ಲಿ ನಗರದ ಕೇಂದ್ರಬಿಂದುವಾದ ಅಶೋಕ್ ಸರ್ಕಲ್ ನಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಸರ್ಕಾರಗಳ ವಿರುದ್ಧ ಘೋಷಣೆಗಳು ಕೂಗುತ್ತಾ ಮೆರವಣಿಗೆ ಮುಖಾಂತರ ಹಾಗೂ ಬಸವೇಶ್ವರ ವೃತ್ತದಲ್ಲಿ ಕೆಲವು ಕನ್ನಡ ಪರ ಸಂಘಟನೆಯವರು ಅವರು ಪ್ರತಿಭಟನೆ ನಡೆಸಿದರು. ಭದ್ರತೆಯ ದೃಷ್ಟಿಯಿಂದ ನಗರದ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು ಪ್ರತಿಭಟಿಸುವವರು ಒತ್ತಾಯ ಪೂರಕ ಬಂದು ಮಾಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಗುರುವಾರವೇ ಆದೇಶ ಹೊರಡಿಸಿತು. ಅಲ್ಲದೆ ಈ ಬಗ್ಗೆ ಮೈಕ್ ಮೂಲಕ ಸಾರ್ವಜನಿಕವಾಗಿ ಪ್ರಚಾರ ಪಡಿಸಲಾಗಿತ್ತು.
ಸ್ವಾಭಿಮಾನಿ ಕರವೇ ರಾಜ್ಯ ಘಟಕ ಹೈದರಾಬಾದ್, ಕರ್ನಾಟಕ ಕರವೇ ( ಪ್ರವೀಣ್ ಶೆಟ್ಟಿ ಬಣ) , ಕರವೇ ಯುವಶಕ್ತಿ ಸಂಘಟನೆ ರಾಜ್ಯ ಘಟಕ, ಕಸ್ತೂರಿ ಕರ್ನಾಟಕ ಜನಪರ ಸೈನ್ಯ ಸೇರಿದಂತೆ ಅನೇಕ ಕನ್ನಡಪರ ಹೋರಾಟದ ಸಂಘಟನೆಗಳು ಭಾಗವಹಿಸಿದ್ದವು. ಕರವೇ (ಪ್ರವೀಣ್ ಶೆಟ್ಟಿ ಬಣ ) ಜಿಲ್ಲಾಧ್ಯಕ್ಷ ಪಂಪಣ ನಾಯಕ ಮಾತನಾಡಿ ರಾಜ್ಯದಲ್ಲಿ ಮುಂಗಾರು ಮುನಿಸಿನಿಂದ ಕಾವೇರಿ ಕಣಿವೆ ಬತ್ತಿದ್ದರೂ ತಮಿಳುನಾಡಿಗೆ ನೀರು ಬಿಡುತ್ತಿರುವುದು ಸರಿಯಲ್ಲ ಇದು ರಾಜ್ಯದ ಜನತೆಗೆ ಹಾಗೂ ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದರು. ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಬೆಳಗ್ಗೆ 4 ಗಂಟೆಯಿಂದ ರಾಜ್ಯ ಹೆದ್ದಾರಿ ಬಂದು ಮಾಡಲು ಪ್ರಯತ್ನಿಸಿದರು. ವಾಹನಗಳಿಗೆ ತಡೆ ಯೋಡ್ಡಿದರು. ಎಲ್ಲಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಸಂಘಟನೆಯ ಮುಖಂಡರಾದ ಆರ್ ವಿಜಯ್ ಕುಮಾರ್, ಪ್ರಶಾಂತ ನಾಯಕ್, ವಿರುಪಾಕ್ಷಿ ಗೌಡ ನಾಯಕ್, ಅರ್ಜುನ್ ನಾಯಕ್ , ನಾಸಿರ್ ಕಂಠಿ , ರಾಜಭಕ್ಷಿ ಎಂ ಹೊಂಬಾಳ್, ಸಂಗಮೇಶ್ ಬಾಗವಾಡಗಿ, ರಮೇಶ್ ಕೋಟಿ , ಎಂ.ಡಿ ಅರಳಿ, ಚನ್ನಬಸವ ಬೇಕೆನ್, ಬಳ್ಳಾರಿ ರಾಮಣ್ಣ ನಾಯಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ