ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ

ಮಸ್ಕಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಡೆಹಿಡಿಯುವ ಬಗ್ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ ವತಿಯಿಂದ ತಹಶೀಲ್ದಾರರ ಮುಖಾಂತ ರಘನವೆತ್ತ ರಾಜ್ಯ ಪಾಲರು ಕರ್ನಾಟಕ ಸರ್ಕಾರ ರಾಜಭವನ ಬೆಂಗಳೂರು ಇವರಿಗೆ ಮನವಿಯನ್ನು ಸಲ್ಲಿಸಿದರು.

ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು 18 ದಿನ ನಿತ್ಯವೂ ತಮಿಳುನಾಡಿಗೆ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸ್ಸು ಮಾಡಿದೆ. ಆದರೆ ಕರ್ನಾಟಕ ಕಾವೇರಿ ಜಲನಯನ ಪ್ರದೇಶದ ಆಣೆಕಟ್ಟುಗಳಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಸಂಗ್ರಹ ಕಡಿಮೆ ಇರುವ ಸಂದರ್ಭದಲ್ಲಿ ಇಂತಹ ಶಿಫಾರಸ್ಸು ಮಾಡಿರುವ ನೀರಿನ ನಿಯಂತ್ರಣ ಸಮಿತಿಯ ಏಕಮುಖ ನಿರ್ಧಾರ ಖಂಡನೀಯ, ಕಾವೇರಿ ಕಣಿವೆಯ ಆಣೆಕಟ್ಟುಗಳಲ್ಲಿ ನೀರಿನ ಸಂಗ್ರಹದ ಸ್ಥಿತಿಗತಿ ಗೊತ್ತಿದ್ದರೂ ಸಹ ಸಂಬಂಧಿಸಿದ ಸಮಿತಿ ಮತ್ತು ಪ್ರಾಧಿಕಾರವು ಪದೇ ಪದೇ ನೀರು ಹರಿಸುವಂತೆ ಮಾಡುತ್ತಿರುವ ಆದೇಶಗಳಿಂದ ಕಾವೇರಿ ನೀರು ಅವಲಂಬಿಸಿರುವ ಬೆಂಗಳೂರು, ಮೈಸೂರು, ರಾಮನಗರ, ಚಾಮರಾಜನಗರ ಮಂಡ್ಯ ಜಿಲ್ಲೆಗಳು ಈ ಭಾರಿ ತೀವ್ರ ಮಳೆ ಕೊರತೆಯಿಂದಾಗಿ ಕೃಷಿಗೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ಸಾರ ಉಂಟಾಗಿರುವ ಈ ಕಾರಣಕ್ಕಾಗಿ ಈ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು.ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ ವತಿಯಿಂದ ಆಗ್ರಹಿಸಿದರು.

ಈ ಸಂದರ್ಭದಲ್ಲಿ,ಅಶೋಕ ಮುರಾರಿ,ಆರ್.ಕೆ ನಾಯಕ,ಕಿರಣ ಮುರಾರಿ,ವಿಜಯ ಕುಮಾರ ಬಡೀಗೆರ,ಬಸವರಾಜ ಡಿ.ಉದ್ಬಾಳ ಮಲ್ಲಿಕ್ ಕೋಠಾರಿ,ದುರುಗಪ್ಪ ಕೆ.,ರಾಘವೇಂದ್ರ ಗುತ್ತಿಗೆದಾರ,ಸಿದ್ದು ಮುರಾರಿ,ಡಾ.ಸಂತೋಷ, ದೇವರಾಜ ಮಡಿವಾಳ,ಹಾಗೂ ವಿವಿಧ ಕನ್ನಡ ಪರ ಸಂಘಟನೆ ಅಧ್ಯಕ್ಷರು ಸದಸ್ಯರು ಹಾಗೂ ಕನ್ನಡ ಅಭಿಮಾನಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ