ನಾಳೆ ದಲಿತರ ದ್ವನಿ ಕ್ರಾಂತಿಕಾರಿ ಗಾಯಕ ಗದ್ದರ್ ಗೆ ಶ್ರದ್ಧಾಂಜಲಿ
ಮಾನ್ವಿ ಸೆ ೨೫ :-ಗದ್ದರ್ ರವರು ಆಂಧ್ರ ಪ್ರದೇಶದ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದ ಮುಂಚೂಣಿ ನಾಯಕರಾಗಿದ್ದರು. ವಿಶಾಲವಾದ ಭಾರತದುದ್ದಕ್ಕೂ ಗದ್ದರ್ ರವರು ಕಾರ್ಯಕ್ರಮಗಳ ಮೂಲಕ ಶೋಷಿತ ಸಮುದಾಯಗಳಿಗೆ ಉತ್ಸಾಹ ನೀಡಿದಂತಹ ರೋಮಾಂಚನಗೊಳ್ಳುವ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ದರು. ಗದ್ದರ್ ರವರ ಕಾರ್ಯಕ್ರಮವೆಂದರೆ ಲಕ್ಷಾಂತರ ಜನ ಸೇರುತಿದ್ದರು. ಅವರ ನಿಷ್ಟೂರವಾದ ನೇರವಾದ ನುಡಿ, ಪದಗಳ ಬಳಕೆ ಹಾಡುಗಳ ಸಾಲಿನ ಅರ್ಥವಾಗುತ್ತದೆ. ಗದ್ದರ್ ರವರು ನಮ್ಮನ್ನು ಅಗಲಿದ್ದರೂ ಅವರ ಹಾಡುಗಳು ಮತ್ತು ಮಾತುಗಳು ನಮ್ಮಲ್ಲಿ ಜೀವಂತವಾಗಿದೆ.ದಿಟ್ಟ ಕ್ರಾಂತಿಕಾರಿ ಹೋರಾಟಗಾರ ಗುಮ್ಮಡಿ ವಿಠ್ಠಲರಾವ್ ಗದ್ದರ್ ಇವರಿಗೆ ತಾಲೂಕ ದಲಿತಪರ ಸಂಘಟನೆಯ ಸಹಯೋಗದೊಂದಿಗೆ ಸೆ ೨೭ ರಂದು ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಮುಂಜಾನೆ ೧೧ ಗಂಟೆಗೆ ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಲ್ಲಪ್ಪ ಬಾದರದಿನ್ನಿ ಹೇಳಿದರು.
ತಾಲೂಕ ಪ್ರಗತಿಪರ ಸಂಘಟನೆಯೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ತಳ-ಕೆಳ ವರ್ಗದ ನೋವುಗಳನ್ನು ತನ್ನ ಹಾಡಿನ ಮೂಲಕ ದೇಶದ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಾ ಅವರಿಗೆ ನ್ಯಾಯ ಕೊಡಿಸುವಲ್ಲಿ ಮುಂಚೂಣಿ ನಾಯಕನಾಗಿದ್ದ ಇವರು ಕಳೆದ ಕೆಲವು ತಿಂಗಳಿಂದೆ ನಮ್ಮನಗಲಿದ್ದಾರೆ ಇವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹಿರಿಯ ಮುಖಡರಾದ ಅಂಬಣ್ಣ ಅರೋಲಿ, ಎಂ ಆರ್ ಬೇರಿ ಸೇರಿದಂತೆ ಅನೇಕರು ಆಗಮಿಸುತ್ತಿದ್ದಾರೆ ಆದರಿಂದ ತಾಲೂಕಿನ ದಲಿತಪರ ಮುಖಂಡರು, ವಿವಿಧ ಸಂಘಟನೆಯ ಒಡನಾಡಿಗಳು, ವಿದ್ಯಾರ್ಥಿಗಳು, ಪ್ರಗತಿಪರ ಚಿಂತನೆಕರು,ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಮಾಡುವಂತೆ ಹೇಳಿದರು.
ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ರವೀಂದ್ರ ಜಾನೇಕಲ್, ಶಿವಗ್ಯಾನಿ ಕಪಗಲ್,ಮೌನೇಶ ನಾಯಕ,ಯೇಸಪ್ಪ ಪೋತ್ನಾಳ, ಯಮುನಪ್ಪ ಜಾ ಪನ್ನೂರು, ಆಕಾಶ ಮ್ಯಾತ್ರಿ,ಲಕ್ಷ್ಮಣ ಜಾನೇಕಲ್ , ಪಿ ರವಿ, ಹನುಮಂತ ಸಾದಾಪೂರು, ಬಸವರಾಜ ನಕ್ಕುಂದಿ, ಶಿವರಾಜ ಹೊಸೂರು, ಹನುಮೇಶ ಸಾದಾಪೂರು, ರವಿಕುಮಾರ ಮದ್ಲಾಪೂರ, ಗಣೇಶ ಸಂಗಾಪೂರ,ಹುಸೇನಪ್ಪ ಜಾ ಪನ್ನೂರು, ಹನುಮಂತ ಕೋಟೆ, ಸೇರಿದಂತೆ ಅನೇಕರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ