ಕಡಾಣಿ ಇಲ್ಲದೇ ಬಂಡಿ ಚಲಾಯಿಸಿ ಪವಾಡ ಮಾಡಿ ತೋರಿಸಿದ ಕಲಿಯುಗದ ನಿಜಶರಣ ಮಲ್ಲಿಕಾರ್ಜುನ ಮಹಾಸ್ವಾಮಿಗಳು

 


ಮಸ್ಕಿ, ಕಡೆಗಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ

ಮಾಣ್ಬುದೆ?

ಕಡೆಗೀಲು ಬಂಡಿಗಾಧಾರ.

ಒಡಲೆಂಬ ಬಂಡಿಗೆ

ಮೃಢಭಕ್ತರ ನುಡಿಗಡಣವೆ

ಈ ಕಡುದರ್ಪವೇರಿದ ಕಡೆಗೀಲು ಕಾಣಾ ರಾಮನಾಥ.ಎಂದು ಜೇಡರದಾಸಿಮಯ್ಯನವರು ಕಡೆಗೀಲಿಲ್ಲದೆ ಬಂಡಿ ಒಂದಡಿಯೂ ಮುಂದೆ ಸಾಗುವದಿಲ್ಲ, ಅದರಂತೆ ದೇಹವೆಂಬ ಬಂಡಿಗೆ ಶರಣರ ಅನುಭವದ ನುಡಿಯ ಜ್ಞಾನವೆಂಬ ಕಡೆಗೀಲಿಲ್ಲದೆ ಬದುಕು ಗುರಿತಲುಪದೆಂಬ ನಗ್ನಸತ್ಯವನ್ನು ಸಾರಿದ್ದಾರೆ.

ಆದರೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರಿನ ಆರಾಧ್ಯ ದೈವ ನಿರಂಜನ ಪ್ರಣವ ಸ್ವರೂಪಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಬಳಗಾನೂರಿನಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿರುವ ಮರಿದೇವರ ತಪೋವನ ಹಳೆಕೋಟೆಯ ಮಠದಿಂದ ಬಳಗಾನೂರಿಗೆ ಕಡಿಗೋಲು ಹಾಕದೆ ಜೋಡೆತ್ತಿನ ಬಂಡಿಯಲ್ಲಿ ಬಂದು ತಲುಪುವ ಸಂಕಲ್ಪ ಮಾಡಿ ಶನಿವಾರ ಬೆಳಿಗ್ಗೆ ಎಂಟುಗಂಟೆಗೆ ಪ್ರಯಾಣ ಆರಂಭಿಸಿ ರಾತ್ರಿ ಒಂಬತ್ತು ಗಂಟೆಯ ನಿರಂತರ ಪ್ರಯಾಣದ ಬಳಿಕ ಬಳಗಾನೂರನ್ನು ತಲುಪಿ ಪವಾಡ ಮಾಡುವ ಮೂಲಕ ದೇಹವೆಂಬ ಬಂಡಿಗೆ ಜ್ಞಾನವೆಂಬ ಕಡೆಗೀಲು ಹಾಕಿದರೆ ಎಲ್ಲಿಗಾದರೂ ತಲುಪಬಹುದೆಂಬ ಸತ್ಯವನ್ನು ಕಲಿಯುಗದಲ್ಲಿ ಯಾವ ದೇವರು ನಾವೇ ದೇವರು ಎಂದು ಬೀಗುವ ಹಲವು ಜನರ ಮಧ್ಯ ಈ ಬಹಿರಂಗ ಪವಾಡ ಮಾಡಿ ದೈವಶಕ್ತಿ ಹಿಂದೆಯೂ ಇತ್ತು, ಈಗಲೂ ಇದೆ,ಮುಂದೆಯೂ ಇರುತ್ತದೆಂಬ ಖಡಕ್ ಸಂದೇಶವನ್ನು ರವಾನೆ ಮಾಡಿದ್ದಾರೆ.

ಇವರು ಹಳೆಕೋಟೆ ಬಿಟ್ಟಿದ್ದಾರೆಂಬ ಸುದ್ದಿ ಹರಡುತ್ತಿದ್ದಂತೆಯೇ ದಾರಿಯುದ್ದಕ್ಕೂ ತುಂಬಿದ ಕೊಡ,ವಿಬೂತಿ,ಕುಂಕುಮ ಕಾಯಿ ಕರ್ಪೂರ ಹಿಡಿದ ಸುಮಂಗಲೆಯರು ನಿಂತು ಪಾದಪೂಜೆ ಮಾಡು ಪರಿ ದೈವ ಭಕ್ತಿಯ ನಿಜ ದರ್ಶನಮಾಡಿಸಿತು.

ಬಳಗಾನೂರಿನ ಮುಖ್ಯರಸ್ತೆ ಶುಚಿಗೊಂಡು ಮೈಯೆಲ್ಲಾ ನೀರುಂಡು ಮಡಿಯಾಗಿ ಸ್ವಾಮಿಗಳ ಅಡಿಗಾಗಿ ಬೆನ್ನೊಡ್ಡಿ ಮಲಗಿತ್ತು.

ಭಕ್ತರ ಬಾಯಲ್ಲಿ ಮಲ್ಲಯ್ಯ ತಾತ ಕಲಿಯುಗದಲ್ಲಿ ಪವಾಡಮಾಡಿದ ಎಂದು ಭಕ್ತಿಭಾವದಿ ಬಾಗುವ ದೇಹ ಅವರ ಲವಲೇಷದಷ್ಟೂ ಕಲ್ಮಷವಿಲ್ಲದ ಭಕ್ತಿಯ ಪ್ರತಿನಿಧಿಯಾಗಿತ್ತು.

ಅವರು ಸಾಗಿದ ದಾರಿಯುದ್ದಕ್ಕೂ ಇವರು ಊರೂರಿಗೆ ಶಿಲಾದೇಗುಲಗಳ ನಿರ್ಮಾಣ,ಜೀರ್ಣೋದ್ದಾರ ಮಾಎಇದ ಯಶೋಘಾತೆ,ಸಾಮೂಹಿಕ ವಿವಾಹಮಾಡಿದ ಮಂಗಲಕಾರ್ಯದ ಕಥೆ, ನಿತ್ಯದಾಸೋಹ,ಗೋಶಾಲೆ, ಪಾಠಶಾಲೆ ನಿರ್ಮಿಸಿದ ಸಾಧನೆಯ ಸರಮಾಲೆಯನ್ನು ನೆರೆದ ಜನರ ಕೊರಳಿಗೆ ಹಾಕುವ ಪರಿ ತಾತನ ಸೂಪ್ತಶಕ್ತಿಯ ಗಂಟಾನಾದ ದಶದಿಕ್ಕಿಗೂ ಹರಡಿತ್ತು. 

ಎಲ್ಲಾ ಮಾಲಿನ್ಯಗಳಿಗಿಂತ ಮಾನವನ ಮನಸುಮಾಲಿನ್ಯಕೆಟ್ಟದ್ದು ಹೀಗಾಗಿ ಮಾನವನಲ್ಲಿ ಈಗ ದೇವರು ಧರ್ಮವೆಂದರೆ ಅಸಡ್ಡೆ ಬೆಳೆದಿದೆ, ಇದು ಬಹಳ ಅಪಾಯಕಾರಿ ಅದಕ್ಕಾಗಿ ನಾನು ಈ ರೀತಿ ಜನರಲ್ಲಿ ಮತ್ತೆ ಧರ್ಮ ದೇವರಬಗ್ಗೆ ಭಕ್ತಿ ಮೂಡಿಸಲು ಸಂಕಲ್ಪತೊಟ್ಟಿದ್ದೆ ಅದು ಇಂದು ಸಾವಿರಾರು ಭಕ್ತರು ಸೇರುವ ಮೂಲಕ ಸಾಬೀತು ಪಡಿಸಿದ್ದಾರೆಂದು ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾಧ್ಯಮದೊಂದಿಗೆ ವಿಚಾರಗಳನ್ನು ಹಂಚಿಕೊಂಡರು.

ಐವತ್ತು ವರ್ಷಗಳಿಂದ ಬಿಟ್ಟಿದ್ದ ಮೀಸೆಗಡ್ಡಗಳನ್ನು ತೆಗೆದು ಪೈಜಾಮ ಜುಬ್ಬ ಧರಿಸಿ ಥೇಟು ಇಪ್ಪತ್ತೈದು ವರ್ಷದ ಯುವಕನಂತೆ ಪುರಪ್ರವೇಶಮಾಡಿದ್ದು ಮರಿತಾತನವರೇ ಮರುಜನ್ಮವೆತ್ತಿ ಬಂದಂತಾಯ್ತೆಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಶರಣರಪವಾಡ ಹೇಳಲು ಬಾರದು ಅವರ ಮನದೊಳಗೇನಿದೆಯೋ ಯಾರಿಗೆಗೊತ್ತು? ಎಂದು ಭಕ್ತರು ತಾತನ ಪವಾಡ ನೆನೆದು ದೂರದಿಂದಲೇ ಕೈಮುಗಿಯುವ ದೃಶ್ಯ ಬಳಗಾನೂರಿನ ರಸ್ತೆಯುದ್ದಕ್ಕೂ ಸಾಮಾನ್ಯವಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ