ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿ ಸಮಸ್ಯೆಯ ಕುರಿತು ಮನವಿ

ಮಸ್ಕಿ : ಪಟ್ಟಣದ ಅಂಬೇಡ್ಕರ್ ವೃತ್ತ ಗಾಂಧೀ ನಗರದಿಂದ ಕಾಲ್ನಡಿಗೆಯ ಜಾಥಾ ಮೂಲಕ ತಹಶೀಲ್ದಾರ್ ಕಚೇರಿಯ ವರೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ನ್ಯಾಯ ಒದಗಿಸಬೇಕು ಎಂದು ಘೋಷಣೆ ಕೂಗುತ್ತಾ ತೆರಳಿ ಕಚೇರಿ ಬಳಿ ಧರಣಿ ನಡೆಸಿ ಕೊನೆಗೆ ತಹಶೀಲ್ದಾರರಿಗೆ ಹಾಗೂ ಶಾಸಕರ ಆಪ್ತರಿಗೆ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಬುಧವಾರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ದಲಿತ ವಿದ್ಯಾರ್ಥಿ ಪರಿಷತ್ ಮುಂದಾಳತ್ವದಲ್ಲಿ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲ್ನಡಿಗೆ ಜಾಥಾ ಮುಖಾಂತರ ತೆರಳಿ ತಹಶೀಲ್ ಕಚೇರಿಯ ಮುಂಭಾಗಲ್ಲಿ ಪ್ರತಿಭಟನೆ ನಡೆಸಿ, ಮಸ್ಕಿ ತಾಲೂಕು ವಿದ್ಯಾರ್ಥಿಗಳ ಹಲವಾರು ಸಮಸ್ಯೆಗಳ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಘೋಷಣೆಯನ್ನು ಕೂಗುತ್ತಾ, ವಿದ್ಯಾರ್ಥಿ ಯುವ ಜನರ ಶೈಕ್ಷಣಿಕ ಅಭಿವೃದ್ಧಿಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಸ್ಕಿಯ ತಹಶೀಲ್ದಾರರಾದ ಅರಮನೆ ಸುಧಾ ಹಾಗೂ ಮಸ್ಕಿ ಕ್ಷೇತ್ರದ ಶಾಸಕರ ಆಪ್ತ ಸಹಾಯಕ ಬಸವರಾಜ್ ಯದ್ದಲದಿನ್ನಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದಾಗಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ಎಚ್.ಎನ್ ಬಡಿಗೇರ್ , ಮಹಿಳಾ ಮಹಾಶಕ್ತಿ ಸಬಲೀಕರಣ ಸಂಘಟನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷರಾದ ಶ್ರೀಮತಿ ವಿಜಯ ರಾಣಿ ಸಿರವಾರ ,ಸಾಮಾಜಿಕ ಹೋರಾಟಗಾರ್ತಿ ರತ್ನ ಕಟ್ಟಿಮನಿ, ಕರಿಯಪ್ಪ ಸಿರವಾರ, ಸುರೇಶ ಗೊರೆಬಾಳ್ ದಲಿತ ವಿದ್ಯಾರ್ಥಿ ಪರಿಷತ್ ಮೌನೇಶ ಜಾಲವಾಡಗಿ

ಜಿಲ್ಲಾ ಸಂಚಾಲಕರು ರಾಯಚೂರು,ಮೌನೇಶ ತುಗ್ಗಲದಿನ್ನಿ ತಾಲೂಕ ಸಂಚಾಲಕರು ಮಸ್ಕಿ, ಹುಸೇನಪ್ಪ ಇರಾಕಲ್ ಪ್ರಧಾನ ಕಾರ್ಯದರ್ಶಿ,ಮೌನೇಶ್ ಬಡಿಗೇರ್ ಕಡಬೂರು,ರಮೇಶ್ ಉಸ್ಕಿಹಾಳ,

ಮಸ್ಕಿ ತಾಲೂಕಿನ ಪದಾಧಿಕಾರಿಗಳು, ವಿದ್ಯಾರ್ಥಿ - ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ