ಶ್ರಾವಣ ಮಾಸದ ಬೆಟ್ಟದ ಮಲ್ಲಿಕಾರ್ಜುನ ದೇವರ ಉಚ್ಛಾಯ ಉತ್ಸವ ಯಶಸ್ವಿ

 

ಮಸ್ಕಿ : ಪಟ್ಟಣದ ಬೆಟ್ಟದ ಮಲ್ಲಿಕಾರ್ಜುನನ ದರ್ಶನ ಪಡೆದ ನಂತರ ಭಕ್ತರು ಎದುರುಗೊಂಡು ಪಲ್ಲಕ್ಕಿಯನ್ನು ಸಕಲ ವಾದ್ಯ-ಮೇಳದ ವೈಭವದೊಂದಿಗೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಡೊಳ್ಳು ಕುಣಿತದೊಂದಿಗೆ ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡು ನಂತರ ದೇವರ ಹೂಹಾರ(ಹೂಮಾಲೆ) ಹರಾಜು ನಡೆಯುತ್ತದೆ. ಶ್ರಾವಣ ಮಾಸದ ಕೊನೆಯ ಸೋಮವಾರವಾದ ಇಂದು ತೇರು ಬಜಾರದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನ, ಮುಖ್ಯ ಬೀದಿ, ದೈವದಕಟ್ಟೆ ಹಾಗೂ ಬಸವೇಶ್ವರ ದೇನಸ್ಥಾನದವರೆಗೆ ಬೆಟ್ಟದ ಮಲ್ಲಿಕಾರ್ಜುನ ದೇವರ ಉಚ್ಛಾಯ ಉತ್ಸವ ಯಶಸ್ವಿಯಾಗಿ ಜರುಗಿತು.

ಕರ್ನಾಟಕ ಸುಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಮಸ್ಕಿಯೂ ಒಂದು. ಇತಿಹಾಸಕಾರರಿಗೆ ಇಲ್ಲಿನ ದೇವನಾಂಪ್ರಿಯ ಸಾಮ್ರಾಟ್‌ ಅಶೋಕ ಶಿಲಾಶಾಸನ ಪ್ರಾಗೈತಿಹಾಸಿಕ ಕುರುಹುಗಳು ಅಧ್ಯಯನಕ್ಕೆ ಆಕರಗಳಾಗಿದ್ದರೆ, ಧಾರ್ಮಿಕವಾಗಿ ಮಸ್ಕಿಯ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನ ಎರಡನೇ ಶ್ರೀಶೈಲವೆಂದು ಖ್ಯಾತಿ ಪಡೆದಿದೆ.

ಶ್ರಾವಣಮಾಸ ಬಂತೆಂದರೆ ಇಲ್ಲಿನ ಜನರಿಗೆ ಹಬ್ಬದ ವಾತಾವರಣ. ಸುಮಾರು 450 ಅಡಿ ಎತ್ತರದ ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ದೇವರಿಗೆ ನಿತ್ಯವೂ ಶ್ರದ್ಧಾ ಭಕ್ತಿಯಿಂದ ರುದ್ರಾಭಿಷೇಕ, ಅನ್ನ ಸಂತರ್ಪಣೆ ನಡೆಯುತ್ತದೆ. ನಿತ್ಯವೂ ಭಕ್ತರು ಜಾತಿ ಬೇಧ ಭಾವವಿಲ್ಲದೇ ಶ್ರಾವಣ ಸೋಮವಾರ ಮುಂಜಾನೆ 3ರಿಂದ ಸಾಲು ಸಾಲಾಗಿ ಇರುವೆಗಳಂತೆ ಬೆಟ್ಟ ಹತ್ತುತ್ತಾರೆ. ಇನ್ನೂ ಕೆಲವರು ಬೆಟ್ಟದ ಹಿಂದಿನಿಂದ ದೇವಸ್ಥಾನಕ್ಕಾಗಿ ನಿರ್ಮಿಸಿರುವ ಸಿಸಿ ರಸ್ತೆಯ ಮೂಲಕ ಹೋಗಿ ಗುಡ್ಡದ ಮಲ್ಲಯ್ಯನ ದರ್ಶನ ಪಡೆಯುತ್ತಾರೆ.

ವಿಶೇಷತೆ: ಬೆಟ್ಟದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲದಂತೆ ಪೂರ್ವ ದಿಕ್ಕಿಗೆ ಒಂದು ಮಹಾದ್ವಾರ, ದಕ್ಷಿಣೋತ್ತರವಾಗಿ ದ್ವಾರ ಬಾಗಿಲುಗಳಿವೆ. ದೇವಾಲಯ ಹೊರಗೆ ಮತ್ತು ಒಳಗಡೆ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಹುಬ್ಬು ಚಿತ್ರಗಳನ್ನು ಚಿತ್ರಿಸಲಾಗಿದೆ.

ಶ್ರಾವಣ ಮಾಸದ ಮೂರನೇ ಸೋಮವಾರ ಪಟ್ಟಣದಿಂದ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿಯನ್ನು ಅರ್ಚಕರು ಹಾಗೂ ಭಕ್ತರು ಹೊತ್ತುಕೊಂಡು, ಸುಮಾರು ಹದಿನೈದು ಕಿ.ಮೀ ದೂರದ ತೀರ್ಥಬಾವಿಯಲ್ಲಿನ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಮಲ್ಲಿಕಾರ್ಜುನ ದೇವರಿಗೆ ಪೂಜೆ ನೆರವೇರಿಸುತ್ತಾರೆ. ಕೊಂಡದಲ್ಲಿ ಹರಿದು ಬರುವ ತೀರ್ಥವನ್ನು ಕುಂಭದಲ್ಲಿ ತುಂಬಿಕೊಂಡು ಮರಳಿ ಪಟ್ಟಣಕ್ಕೆ ಆಗಮಿಸುತ್ತಾರೆ.

ರಥೋತ್ಸವ: ಪಟ್ಟಣದ ಹಿರಿಯರು ಭಕ್ತರು ಎದುರುಗೊಂಡು ಪಲ್ಲಕ್ಕಿಯನ್ನು ಸಕಲ ವಾದ್ಯ-ಮೇಳಗಳೊಂದಿಗೆ ವೈಭವದೊಂದಿಗೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಡೊಳ್ಳು ಕುಣಿತದೊಂದಿಗೆ ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡು ನಂತರ ದೇವರ ಹೂಹಾರ(ಹೂಮಾಲೆ) ಹರಾಜು ನಡೆಯುತ್ತದೆ. ಶ್ರಾವಣ ಮಾಸದ ಕೊನೆಯ ಸೋಮವಾರದ ಇಂದು ತೇರು ಬಜಾರದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನ, ಮುಖ್ಯ ಬಿದಿ, ದೈವದಕಟ್ಟೆ ಹಾಗೂ ಬಸವೇಶ್ವರ ದೇನಸ್ಥಾನದವರೆಗೆ ದೇವರ ಉಚ್ಛಾಯ ಉತ್ಸವ ಜರುಗಿತು. ಬೆಟ್ಟದ ಅಡಿ ಸಹಸ್ರಾರು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಆಂಧ್ರದ ಆದೋನಿ, ಕರ್ನೂಲ್‌, ಕಡಪ ಮಹಾರಾಷ್ಟ್ರ ಹಾಗೂ ನೆರೆಯ ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಶ್ರಾವಣ ಮಾಸದ ಕೊನೆಯ ಸೋಮವಾರವಾದ ಇಂದು ಬೆಟ್ಟದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವವೂ ವಿಜೃಂಭಣೆಯಿಂದ ಜರುಗಿತು.

ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ದೇವರ ನಿತ್ಯವೂ ದರ್ಶನ ಪಡೆಯುವುದು ಕಷ್ಟವೆಂದು ಹಿರಿಯರು 1970 ರಲ್ಲಿ ಮುಖ್ಯ ಬಜಾರನಲ್ಲಿ ಪ್ರತ್ಯೇಕವಾಗಿ ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ದೇವಸ್ಥಾನವನ್ನು ಭಕ್ತರು ಸ್ಥಾಪಿಸಿದ್ದಾರೆ. ಇಲ್ಲಿ ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ಅತೀ ವಿಜೃಂಭಣೆ ರಥೋತ್ಸವ ಜರುಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ