ಪದವಿ ಅಂತಿಮ ವರ್ಷದ ವಿಧ್ಯಾರ್ಥಿನಿಯರಿಗೆ ,ಸಂಗಳ್ ಬಿ.ಆರ್. ವಾರ್ಡನ್ ಗೆ ಬಿಳ್ಕೋಡಿಗೆ.
ಸಿಂಧನೂರು :ನಗರದ ಶಿವಜ್ಯೋತಿ ನಗರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರಿ ಬಾಲಕಿಯರ ವಸತಿ ನಿಲಯ (ಪರಿಶಿಷ್ಟ ವರ್ಗ) ದಲ್ಲಿ ಪದವಿ ಅಂತಿಮ ವರ್ಷದ ವಿಧ್ಯಾರ್ಥಿನಿಯರಿಗೆ ಹಾಗೂ ವಾರ್ಡನ್ ಶ್ರೀ ಮತಿ ಸಂಗಳ ಬಿ.ಆರ್ ರವರ ಬಿಳ್ಕೋಡಿಗೆ ಹಾಗೂ 2023 - 24 ನೇ ಸಾಲಿನ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಾತನಾಡಿದ ಪರಿಶಿಷ್ಟ ಪಂಗಡ ವರ್ಗಗಳ ಅಧಿಕಾರಿ ಶಿವಮಾನಪ್ಪ ವಿದ್ಯಾರ್ಥಿಗಳು ಕೇವಲ ಪದವಿ, ಅಂಕ ಮತ್ತು ಯಾವುದೇ ಶಿಕ್ಷಣ ಪಡೆದರೂ ಸಾಲದು. ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ಪೋಷಕರು ಹಾಗೂ ಗುರು ಹಿರಿಯರಿಗೆ ಗೌರವವನ್ನು ನೀಡವುದರ ಜೊತೆಗೆ ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತವನ್ನು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ವಿಜಯಲಕ್ಷ್ಮಿ ಗುರಿಕಾರ ,ಶಂಕರ ಗಿರಿಕಾರ.ವಸತಿ ನಿಲಯದ ಎಲ್ಲಾ ವಿಧ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಇದ್ದರು.ವಿದ್ಯಾರ್ಥಿನಿಯರರಾದ ರೇಖಾ ಕವಿತಾ ನೀರೂಪಣೆ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ