ಮಸ್ಕಿ ಆಯುಕ್ತ ಸಿನಿಮಾದ ನಾಯಕ ನಟ ಅದ್ದೂರಿ ಬಸವನಿಗೆ ಸನ್ಮಾನ.
ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮದಲ್ಲಿರುವ ಜನನಿ ಪದವಿ ಪೂರ್ವ ಕಾಲೇಜ್ ನಲ್ಲಿ ತುಗ್ಗಲದಿನ್ನಿ ಯೆಂಬ ಪುಟ್ಟ ಹಳ್ಳಿಯ ಬಸವ ನಾಯಕ ಇಂದು ಸಿನಿಮಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಆಯುಕ್ತ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದು ಈಗಾಗಲೇ 75 ಕಡೆ ಆಯುಕ್ತ ಎನ್ನುವ ಸಿನಿಮಾ ಪ್ರದರ್ಶನಗೊಂಡಿದೆ ಹೀಗಾಗಿ ನಮ್ಮ ಭಾಗದ ಯುವ ಪ್ರತಿಭೆಯನ್ನು ಜನನಿ ಪದವಿ ಪೂರ್ವ ಕಾಲೇಜ್ ನಲ್ಲಿ ಗೌರವಿಸಲಾಯಿತು, ನಂತರ ಮಾತನಾಡಿದ ಪ್ರಾಚಾರ್ಯರಾದ ನಾಗೇಶ ರವರು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿನಿಮಾ ರಂಗದಲ್ಲಿ ಅಷ್ಟೊಂದು ನಾಯಕರಾಗಿ ಹೊರಹೊಮ್ಮಿಲ್ಲ , ಸಿನಿಮಾ ಕ್ಷೇತ್ರವೆಂದರೆ ಬರಿ ದಕ್ಷಿಣ ಕರ್ನಾಟಕ ಭಾಗದವರು ಮುಂದೆ ಇದ್ದು, ಹೀಗಾಗಿ ನಮ ಭಾಗದ ತುಗ್ಗಲದಿನ್ನಿ ಪುಟ್ಟಹಳ್ಳಿಯ ಯುವಕ ಒಂದು ಅದ್ಬುತ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ಹೆಮ್ಮೆಯ ವಿಷಯ ಅವರು ಯಶಸ್ವಿಯಾಗಿಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ನಾಯಕ ನಟ ಬಸವ ನಾಯಕ ತುಗ್ಗಲದಿನ್ನಿ, ಉಪಪ್ರಚಾರ್ಯರಾದ ಸಿದ್ದಾರ್ಥ ಪಾಟೀಲ್, ಮರಿಸ್ವಾಮಿ, ವಿರೇಶ , ಮಹಾಂತೇಶ ಇನ್ನಿತರರು ಮತ್ತು ವಿದ್ಯಾರ್ಥಿಗಳು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ