ನರೇಗಾ ಕಾಮಗಾರಿ ಗಳನ್ನು ಶೀಘ್ರ ಪ್ರಾರಂಭಕ್ಕೆ ಒತ್ತಾಯ
ಸಿಂಧನೂರು ಸೆ.11 ಈ ಸಾಲಿನ ನರೇಗಾ ಕಾಮಗಾರಿ ಗಳನ್ನು ಶೀಘ್ರ ಪ್ರಾರಂಭಿಸಬೇಕು ಹಾಗೂ ಕಳೆದ ವರ್ಷದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊರಡಿಸಿದ ಆದೇಶ ಪಾಲಿಸದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದಿಂದ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
2023 - 24 ನೇ ಸಾಲಿನಲ್ಲಿ ತಾಲೂಕಿನ ಮೂವತ್ತು ಗ್ರಾಮ ಪಂಚಾಯತಿ ಅದ್ಯಕ್ಷರನ್ನೊಳಗೊಂಡ ಸದಸ್ಯರಿಂದ ಕಳಿಸಿದ ನರೇಗಾ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಿ.ಇ.ಒ ಅನುಮೋದನೆ ಕೊಟ್ಟಿದ್ದು ,ಸಮುದಾಯ ಆಧಾರಿತ ಕ್ರಿಯಾ ಯೋಜನೆ ಗಳು ತಾಲೂಕಿನಲ್ಲಿ ಯಾವ ಪಂಚಾಯತಿ ಯಲ್ಲಿ ಪ್ರಾರಂಭವಾಗಿ ರುವ ದಿಲ್ಲ ಸಂಬಂಧಪಟ್ಟ ಪಿ.ಡಿ.ಒ ,ನರೇಗಾ ಜೆ.ಇ ಗಳನ್ನು ಕಾಮಗಾರಿ ಪ್ರಾರಂಭಿಸಿ ಎಂದು ಕೇಳಿದರೆ ತಾಲೂಕ ಪಂಚಾಯತಿ ಇ.ಒ ,ನರೇಗಾ ಎ.ಡಿ ಸ್ವಲ್ಪ ದಿನ ತಡೆಯಿರಿ ಪ್ರಾಂರಭಿಸಬೇಡಿ ಎಂದು ಹೇಳಿದ್ದಾರೆಂದು ಹೇಳುತ್ತಿದ್ದಾರೆ.
ಪ್ರತಿ ಪಂಚಾಯತಿ ಗಳಲ್ಲಿ ಅತಿಯಾದ ಮಳೆಯಿಂದ ಚರಂಡಿ ,ರಸ್ತೆ ಹಾಳಾಗಿದ್ದು ಕ್ರೀಯಾ ಯೋಜನೆಗಳಲ್ಲಿನ ಕಾಮಗಾರಿ ಗಳನ್ನು ಮಾಡಿಕೊಡಿ ಎಂದು ಜನರು ಪ್ರತಿದಿನ ಮೌಖಿಕವಾಗಿ ದೂರುತ್ತಿದ್ದಾರೆ .ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣವೇ ಕಾಮಗಾರಿ ಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಬೇಕು .ಪಂಚಾಯತಿ ಸದಸ್ಯರು ಮಾಹಿತಿ ಕೇಳಿದರೆ ಪಿ.ಡಿ.ಒ ಗಳು ಮಾಹಿತಿ ಕೊಡದೇ ಸುಖಾ ಸುಮ್ಮನೇ ಕಾಲಹರಣ ಮಾಡುತ್ತಿದ್ದಾರೆಂದು ಒಕ್ಕೂಟಕ್ಕೆ ದೂರುಗಳು ಬಂದಿವೆ .
ಈ ರೀತಿ ದೂರುಗಳು ಬಂದರೆ ತಕ್ಷಣ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಿ, 15-6-2022 ರಂದು ಜಿಲ್ಲಾ ಪಂಚಾಯತ ಸಿ.ಇ.ಒ ಹೊರಡಿಸಿದ ಸರ್ಕಾರದ ಸುತ್ತೊಲೆಯಲ್ಲಿ ನಿರ್ದೇಶನಗಳಂತೆ ಕರ್ತವ್ಯ ನಿರ್ವಹಿಸಲು ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದು ಸಿಂಧನೂರು ತಾಲೂಕ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ವತಿಯಿಂದ ಒತ್ತಾಯಿಸಿ ಮನವಿ ಸಲ್ಲಿಸಿದರು.
ಒಕ್ಕೂಟದ ಅದ್ಯಕ್ಷ ಮಹಾಂತೇಶ ಹಿರೇಗೌಡರ ,ಕಾರ್ಯದರ್ಶಿ ರವಿಗೌಡ ಮಲ್ಲದಗುಡ್ಡ ,ಅಶೋಕ ನಲ್ಲಾ ,ನಿರುಪಾದಿ ಸಾಸಲಮರಿ ಸೇರಿದಂತೆ ಹಲವರು ಮನವಿ ಸಲ್ಲಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ