ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರುಗಳ ಪರಿಶ್ರಮ ಅವಿರತ ಉಜ್ಜಿನಿಯ ರೇವಯ್ಯ ಒಡೆಯರ್ ಅಭಿಪ್ರಾಯ

 


ಕೊಟ್ಟೂರು ಉಜ್ಜಿನಿ:- ವಿದ್ಯಾರ್ಥಿಗಳನ್ನು ಉನ್ನತವಾದ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಶಿಕ್ಷಕರುಗಳ ಶ್ರಮ ಅವಿರತವಾಗಿದೆ ಎಂದು ಉಜ್ಜಿನಿಯ ಡಾ. ರೇವಯ್ಯ ಒಡೆಯರ್ ಹೇಳಿದರು. 

ಉಜ್ಜಿನಿಯ ಯಾತ್ರಿ ನಿವಾಸದಲ್ಲಿ ಶನಿವಾರ  ಸದ್ಧರ್ಮ ಹಿರಿಯ ನಾಗರೀಕರ  ಸಂಘದ ವತಿಯಿಂದ ಆಯೋಜಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜಯಂತಿ ಅಂಗವಾಗಿ  ಉತ್ತಮ ಶಿಕ್ಷಕ ಶಿಕ್ಷಕಿಯರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದರು ನಮಗೆ ವಿದ್ಯೆ ಯನ್ನು ಕೊಟ್ಟ ಗುರುಗಳನ್ನು ಶಿಕ್ಷಕರನ್ನು  ಯಾವತ್ತು ಮರೆಯಬಾರದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ವಿದ್ಯೆಯನ್ನು ನೀಡುವ ಗುರುವನ್ನು ಗೌರವಿಸಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಪ್ರಾಚಾರ್ಯರು. ಸದ್ಧರ್ಮ ಹಿರಿಯ ನಾಗರಿಕ ಸಂಘದ ಅಧ್ಯಕ್ಷರಾದ ಚನ್ನವೀರ ಸ್ವಾಮಿ. ಭೋಜಪ್ಪ. ಶರಣಯ್ಯ. ಹರೀಶ್ ಗೌಡ್ರು. ಶಿವಕುಮಾರ್. ಬಸವನಗೌಡ್ರು. ಈರಣ್ಣ. ಕೊಟ್ರೇಶ್ ನಿರೂಪಿಸಿದರು ಶಿಕ್ಷಕ ಮತ್ತು ಶಿಕ್ಷಕಿಯರನ್ನು  ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*