*ಜರ್ಮಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರ 25 ಜನಕ್ಕೂ ಹೆಚ್ಚು ರಕ್ತದಾನ ಮಾಡಿದ ಶಿಬಿರಾರ್ಥಿಗಳು*
ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಜರ್ಮಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಶುಕ್ರವಾರ ರಂದು ಜರ್ಮಲಿ ಮತ್ತು ಎ ದಿಬ್ಬದಹಳ್ಳಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಿಗಟ್ಟ ವಿಮ್ಸ್ ರಕ್ತ ಕೇಂದ್ರ ಬಳ್ಳಾರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಾಕರದೊಂದಿಗೆ ಆಯುಷ್ಮಾನ್ ಭವ ಸೇವಾ ಪಕ್ವಾಡ ಅಡಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು. ಈ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಹಾಗೂ ಮಾರಮ್ಮನ ದೇವಸ್ಥಾನದ ಹತ್ತಿರ ಈ ದಿನ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಈ ಶಿಬಿರದಲ್ಲಿ ಸುಮಾರು ಜನಗಳು ಪಾಲ್ಗೊಂಡು ರಕ್ತದಾನ ಮಾಡಿ ಯಶಸ್ಸಿಗೆ ಕಾರಣೀಭೂತರಾದವರು
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಲೋಹಿತಾಕ್ಷಿ ಓ,ಹಾಗೂ ಶಾಲೆಯ ಶಿಕ್ಷಕರುಗಳಾದ ಮಂಗಳ ಮಹಾಂತೇಶ್, ರಮೇಶ್, ಶಶಿಧರ್, ಹಾಗೂ ಆಶಾ ಕಾರ್ಯಕರ್ತರಾದ ಅಂಜಿನಮ್ಮ, ಅಂಗನವಾಡಿ ಕಾರ್ಯಕರ್ತರಾದ ಮೇದಿನಿ,ಹಾಗೂ ರೂಪ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನಪ್ಪ, ಹಾಗೂ ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿಗಳಾದ ಕೆ.ಗುರುಮೂರ್ತಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಶ್ರೀಮತಿ ಪಲ್ಲವಿ,ಶ್ರೀಮತಿ ತಿಪ್ಪಕ್ಕ, ಜಯಂತಿ,ನೇತ್ರಾವತಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಅವಿನಾಶ,ಕುಮಾರಿ ರಶ್ಮಿ, ತಿಪ್ಪೇಸ್ವಾಮಿ, ಪ್ರಯೋಗಶಾಲಾ ತಂತ್ರಜ್ಞಾನದ ಬೋರಣ್ಣ, ಆಪ್ತ ಸಮಲೋಚಕರಾದ ಪ್ರಶಾಂತ್ ಕುಮಾರ್,ಕೆ. ಓಬಣ್ಣ,ಊರಿನ ಯುವಕರು ಗ್ರಾಮಸ್ಥರು ಮುಖಂಡರು ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದು 25 ಕ್ಕಿಂತ ಹೆಚ್ಚು ರಕ್ತ ಸಂಗ್ರಹಣೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಅದರಲ್ಲೂ ದಿಬ್ಬದಲ್ಲಿ ಆಶಾ ಕಾರ್ಯಕರ್ತೆಯಾದ ಅಂಜಿನಮ್ಮ,ಮತ್ತು ಅಂಗನವಾಡಿ ಕಾರ್ಯಕರ್ತೆಯಾದ ಮೇದಿನಿ,ಎನ್ನುವರು ರಕ್ತದಾನವನ್ನು ಮಾಡಿ ಮತ್ತೊಬ್ಬರಿಗೆ ರಕ್ತದಾನ ಮಾಡುವುದು ಒಳ್ಳೆಯ ಸೇವೆ ಎನ್ನುವುದು ಈ ದಿನ ಎಲ್ಲಾ ಮಹಿಳೆಯರಿಗೂ ಮಾದರಿಯಾದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ