ಭೂ ಕಬಳಿಕೆಗೆ ಕೈ ಜೋಡಿಸುವ ರಿಯಲ್ ಎಸ್ಟೇಟ್ ಹಾಗೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಹನುಮಂತಪ್ಪ ವೆಂಕಟಾಪುರ

ಮಸ್ಕಿ,ತಾಲೂಕಿನ ಹಿರೇ ಅಂತರಗಂಗಿ ಸೀಮಾದ ಜಮೀನು 60 ರಲ್ಲಿ ಜಮೀನನ್ನು ರಿಯಲ್ ಎಸ್ಟೇಟ್ ಗಳು ಹಾಗೂ ಅಧಿಕಾರಿಗಳು ಸೇರಿ ಮೋಸ - ವಂಚನೆ ಕುತಂತ್ರತನದಿಂದ ಭೂ ಕಬಳಿಕೆಗೆ ಕೈ ಜೋಡಿಸುವವರ ವಿರುದ್ಧ ಕಾನೂನೂ ಕ್ರಮ ಜರುಗಿಸಬೇಕೆಂದು ದಲಿತ ಮುಖಂಡರಾದ ಹನುಮಂತಪ್ಪ ವೆಂಕಟಾಪುರ ಸೋಮವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.

ಮಸ್ಕಿ ತಾಲೂಕಿನ ಹಿರೇ ಅಂತರಗಂಗಿ ಸೀಮಾದ ಸರ್ವೇ ನಂಬರ್ 60 ರ ನಾಗರಾಜ ತಂದೆ ಮಲ್ಲಪ್ಪ ಸಜ್ಜನ್ ಇವರಿಗೆ ಸಂಭಂದಿಸಿದ 3 ಎಕರೆ 28 ಗುಂಟೆಯ ಜಮೀನು ನಮ್ಮದು ಎಂದು ಸರ್ವೇ ನಂಬರ್ 60 ರಲ್ಲಿಯೇ ಪಹಣಿದಾರರಾಗಿರುವ ಸತ್ಯಮ್ಮ ಗಂಡ ಮುದುಕಪ್ಪ ರವರ 4 ಎಕರೆ ಜಮೀನು ನಾವು ಒತ್ತಿ ಮಾಡಿಕೊಂಡಿದ್ದೇವೆ ಎಂದು ಬಿ.ಜಿ ನಾಯಕ,ಜಿ.ಪಿ.ಎ ಮಾಡಿಕೊಂಡಿದ್ದೇನೆ ಎಂದು ಮಲ್ಲಿಕಾರ್ಜುನ ಭಜಂತ್ರಿ ಎಂಬ ವ್ಯಕ್ತಿಗಳು ತಮ್ಮಲ್ಲಿರುವ ಜಮೀನಿನ ದಾಖಲೆಗಳಿಗೂ ಮತ್ತು ನಾಗರಾಜ್ ತಂದೆ ಮಲ್ಲಪ್ಪ ಸಜ್ಜನ್ ರವರ ಜಮೀನಿಗೆ ಯಾವುದೇ ರೀತಿಯ ಸಂಭಂದ ಇಲ್ಲದಿದ್ದರೂ ನಮ್ಮ ಜಮೀನು ಎಂದು ಸುಳ್ಳು ಪ್ರಚಾರ ಪಡೆದು ಜಾತಿಯಿಂದ ಪರಿಶಿಷ್ಠ ಜಾತಿ ಆಗಿರುವುದರಿಂದ ಸಾಮಾನ್ಯ ಜಾತಿಯ ಪಟ್ಟಿಯಲ್ಲಿ ಬರುವ ನಾಗರಾಜ ತಂದೆ ಮಲ್ಲಪ್ಪ ಸಜ್ಜನ್ ರವರಿಗೆ ಹಾಗೂ ಅವರ ಕುಟುಂಬದವರ ಮೇಲೆ ಅಟ್ರಾಸಿಟಿ ಕೇಸ್ ದಾಖಲು ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಭೂ ದಾಖಲೆಗಳ (ಸರ್ವೇ) ಇಲಾಖೆಯ ರಾಯಚೂರು ಜಿಲ್ಲೆಯ ಡಿ.ಡಿ.ಎಲ್.ಆರ್ ರೇಷ್ಮಾ ಪಾಟೀಲ್ ಯಾವುದೇ ಸರ್ವೇ ಕಾರ್ಯ ಮತ್ತು ಇನ್ನಿತರೇ ವ್ಯವಹಾರ ಮಾಡಬಾರದು ಎಂದು ಇವರು ನೋಟಿಸ್ ಜಾರಿ ಮಾಡಿದ್ದಾರೆ ಇವರಿಗೆ ನೊಟೀಸ್ ಜಾರಿ ಮಾಡಲು ಅಧಿಕಾರ ಇದೆಯೇ?. ಹಾಗೆಯೇ ಸರ್ವೇ ನಂಬರ್ 60 ಹಿರೇ ಅಂತರಗಂಗಿ ಸೀಮಾದ ಸತ್ಯಮ್ಮ ಗಂಡ ಮುದುಕಪ್ಪ ರವರ ಅರ್ಜಿ ಲಾಗಿನ್ ಅಳತೆಗೆ ಬಂದರೇ ಸಾಕು ಅತೀ ಜರೂರು ಅಳತೆ ಮಾಡಲು ಆಜ್ಞೆ ಮಾಡುವರು ಅದೇ ಸರ್ವೇ ನಂಬರ್ 60 ರ ನಾಗರಾಜ್ ಸಜ್ಜನ್ ರವರ ಸರ್ವೇ ಅರ್ಜಿ ಲಾಗಿನ್ ಅಳತೆಗೆ ಬಂದರೇ ದಿನಗಳ ಕಾಲಹರಣ ಮಾಡುವ ಮೂಲಕ ಅಕ್ರಮ ಭೂ ಕಬಳಿಕೆಗೆ ಲಿಂಗಸ್ಗೂರು ಮತ್ತು ಮಸ್ಕಿ ತಾಲೂಕಿನ ಎ.ಡಿ.ಎಲ್.ಆರ್ 

ಎಮ್.ಜಿ ಹಿರೇಮಠ ರವರು ಪರೋಕ್ಷವಾಗಿ ಬೆಂಬಲಿಸುತ್ತಾರೆ ಎಂದು ತಿಳಿದು ಬಂದಿದೆ. ಸರ್ವೇ ಇಲಾಖೆಗೆ ಅಳತೆಯ ಬಗ್ಗೆ ಮಾಹಿತಿ ಕೇಳಲು ಹೋದರೆ ಮಸ್ಕಿ ತಾಲೂಕಿನ ಸರ್ವೇ ಇಲಾಖೆಯ ಸೂಪರ್ ವೈಸರ್ ಗಿರೀಶ್ ರವರು ಹಾರಿಕೆಯ ಉತ್ತರವನ್ನು ನೀಡುತ್ತಾರೆ. ಲೈಸೆನ್ಸ್ ಸರ್ವೇಯರ್ ಮಲ್ಲಪ್ಪ ಅಂಗಡಿ ನಾಗರಬೆಂಚಿಯೇ ಸಜ್ಜನರ ಭೂ ಕಬಳಿಕೆ ಕಿಂಗ್ ಪಿನ್ ಆದ್ದರಿಂದ ಇವರ ಪರವಾನಗಿ (ಲೈಸೆನ್ಸ್) ಅನ್ನು ರದ್ದುಗೊಳಿಸಿ ಇಲಾಖೆಯಿಂದ ತೆಗೆದು ಹಾಕಬೇಕು. ಹಾಗೇಯೇ ಕೇಸ್ ವರ್ಕರ್ ಭೀಮಣ್ಣ ಎಂಬ ಸಿಬ್ಬಂದಿ ಮಾಹಿತಿ ಕೇಳಲು ಹೋದರೆ ಇಲ್ಲ ಸಲ್ಲದ ಕಥೆ ಹೇಳಿ ಕಳುಹಿಸುತ್ತಿದ್ದರು.


ಸತ್ಯಮ್ಮ ಗಂಡ ಮುದುಕಪ್ಪ ಎಂಬ ಒಂದೇ ಮಾಲೀಕರು ಮೂವರು ವ್ಯಕ್ತಿಗಳಿಗೆ ಭೂಮಿ ಮಾರಾಟ ಮಾಡಿರುತ್ತಾರೆ.

ಮೊದಲಿಗೆ ಮಲ್ಲಪ್ಪ ಬಾರಿಕೇರ್ ಎಂಬ ವ್ಯಕ್ತಿಗೆ ಮಾರಾಟ ಮಾಡುತ್ತಾರೆ ಭೂಮಿ ಇಲ್ಲಾ ನಮಗೆ ಹಣ ವಾಪಸ್ ನೀಡಿ ಎಂದಾಕ್ಷಣ ಹಣವನ್ನು ಬಳಸಿಕೊಂಡ ಕಾರಣ ಸರ್ವೇ ನಂಬರ್ 59 ರಲ್ಲಿರುವ ಜಮೀನನ್ನು ರಿಜಿಸ್ಟರ್ ಮಾಡಿ ಕೊಡುತ್ತಾರೆ. ನಂತರ ಅದೇ ಜಮೀನನ್ನು ಬಿ.ಜಿ ನಾಯಕ ಎಂಬ ವ್ಯಕ್ತಿಗೆ ವತ್ತಿ ಮಾಡಲಾಗುತ್ತೆ. ನಂತರ ಮಲ್ಲಿಕಾರ್ಜುನ ಭಜಂತ್ರಿ ಎಂಬ ರಿಯಲ್ ಎಸ್ಟೇಟ್ ವ್ಯಕ್ತಿಗೆ 50,000 ರೂಪಾಯಿಗೆ ಜಿ ಪಿ ಎ ಮಾಡುವ ಮೂಲಕ ಮಾರಾಟ ಮಾಡಿರುತ್ತಾರೆ.


ಒಟ್ಟಾರೆ ಹಣದ ಆಸೆಗೆ ಸತ್ಯಮ್ಮ ಗಂಡ ಮುದುಕಪ್ಪ ಎಂಬುವವರು ಈ ರೀತಿಯಾಗಿ ಭೂಮಿಯನ್ನು ಮಾರಾಟದ ವ್ಯವಹಾರ ಮಾಡಿರುತ್ತಾರೆ. ಮುದುಗಲ್ ಮತ್ತು ಮಸ್ಕಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜಮೀನು ಮತ್ತು ಬೆಲೆ ಬಾಳುವ ಜಮೀನು ಆಗಿರುವುದರಿಂದ ಅದರ ಮೇಲೆ ಹದ್ದಿನ ಕಣ್ಣು ಹಾಯಿಸಿದಂತೆ ಬೆಂಬಿಡದೆ ಅಮಾಯಕರ ಜೀವ ಹಿಂಡುತ್ತಿದ್ದಾರೆ. ಆದ್ದರಿಂದ 

ಕಂದಾಯ ಇಲಾಖೆ , ಪೋಲಿಸ್ ಇಲಾಖೆ, ಸರ್ವೇ ಇಲಾಖೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು.


ಒಟ್ಟಿನಲ್ಲಿ ಭೂ ಮಾಪನ ಇಲಾಖೆಯ ಅಧಿಕಾರಿಗಳಾದ ಎಮ್ ಜಿ ಹಿರೇಮಠ್ ಎ.ಡಿ.ಎಲ್.ಆರ್, ಸೂಪರ್ ವೈಸರ್ ಗಿರೀಶ್,ಭೀಮಣ್ಣ ಕೇಸ್ ವರ್ಕರ್, ಮಲ್ಲಪ್ಪ ಅಂಗಡಿ ನಾಗರಬೆಂಚಿ ಇವರುಗಳು ಒಳ ಒಪ್ಪಂದದ ಮೂಲಕ ಅಮಾಯಕರ ಜಮೀನುಗಳ ಭೂ ಕಬಳಿಕೆಗೆ ಒಳ ಸಂಚಿನ ಯೋಜನೆಯ ರೂಪಿಸಿ ಮುಗ್ದ ಜನತೆಯ ಮೇಲೆ ಅಧಿಕಾರ ದರ್ಪ ಮೆರೆಯಲು ಮುಂದಾದ ಅಧಿಕಾರಿಗಳ ಹಾಗೂ ಭೂ ಕಬಳಿಕೆ ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಈ ಹಿಂದೆ ಅಂದರೇ

2022 ರಲ್ಲಿಯೂ ಬೈಲಗುಡ್ಡ, ಬಗಲಗುಡ್ಡ ಗ್ರಾಮದಲ್ಲಿ ಬಳ್ಳಾರಿ ಮೂಲದ ಪ್ರಬಾರಿ ಮಧ್ಯವರ್ತಿಗಳ ಸಹಾಯದಿಂದ ಜಮೀನು ವಾರಸುದಾರರಿಗೆ ಮಾಹಿತಿ ಇಲ್ಲದಂತೆ ಮೂರನೇ ವ್ಯಕ್ತಿಯ ಖೊಟ್ಟಿ ದಾಖಲೆ ಸೃಷ್ಟಿಸಿ ರಿಜಿಸ್ಟರ್ ಆಫೀಸ್ ನಲ್ಲಿ ಹೆಸರಿಗೆ ಮಾಡಿಕೊಂಡು ಅಕ್ರಮ ಭೂ ಕಬಳಿಕೆ ಮಾಡುವ ಮೂಲಕ ಇಂದು ಶಿಕ್ಷೆ ಅನುಭವಿಸುತ್ತಾ ಇದ್ದು. ಇಷ್ಟಾದರೂ ಅಕ್ರಮ ಭೂ ಕಬಳಿಕೆಗೆ ಮುಂದಾಗಿ ಅಮಾಯಕರ ಮೇಲೆ ಅಟ್ರಾಸಿಟಿ ಕೇಸು,ಇನ್ನಿತರೇ ಬಗೆ ಬಗೆಯ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುವ ಮೂಲಕ ಭಯಭೀತಗೊಳಿಸುವ ಸುಸಂದರ್ಭ ನಿರ್ಮಾಣ ಆಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇನ್ನೂ ಮುಂದೆಯಾದರು ಇಂತಹ ಯಾವುದೇ ಭೂ ಕಬಳಿಕೆದಾರರು ಮತ್ತೊಮ್ಮೆ ಸರ್ವೇ ನಂಬರ್ 60 ರ ನಾಗರಾಜ ತಂದೆ ಮಲ್ಲಪ್ಪ ಸಜ್ಜನ್ ರವರ ಜಮೀನಿಗೆ ತಂಟೆ ತಕರಾರು ಮಾಡದ ರೀತಿಯಲ್ಲಿ ಶಿಸ್ತು ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ಮುಖಂಡರಾದ ಹನುಮಂತಪ್ಪ ವೆಂಕಟಾಪುರ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಲ್ಲಯ್ಯ ಬಳ್ಳಾ ಮಸ್ಕಿ ದಲಿತ ಮುಖಂಡರು, ಜಯಪ್ಪ ಮೆದಿಕಿನಾಳ, ಬಾಲಸ್ವಾಮಿ ಜಿನ್ನಾಪೂರ ಜಿಲ್ಲಾಧ್ಯಕ್ಷರು ದಲಿತ ಸಂಘಟನೆ, ಮರಿಸ್ವಾಮಿ ಬೆನಕನಾಳ ತಾಲೂಕ ಅಧ್ಯಕ್ಷರು ದಲಿತ ಸಂಘ ಸೇರಿದಂತೆ ಪತ್ರಿಕಾ ಮಿತ್ರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ