ಜಗತ್ತಿಗೆ ವಿಶ್ವಕರ್ಮ ಸಮಾಜದ ಕೊಡುಗೆಗಳು ಅಪಾರವಾದದ್ದು - ವೀರೇಶ ಯಾದವ್

ಸಿಂಧನೂರು ಸೆ.18 ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಹೋಮ,ಹವನ, ಶ್ರೀ ಕಾಳಿಕಾದೇವಿ ಮೂರ್ತಿಗೆ ಕ್ಷೀರಾಭಿಷೇಕ,ಪುಷ್ಪಾಲಂಕಾರ, ನೈವೇದ್ಯ ನೆರವೇರಿತು.ಶ್ರೀ ಭಗವಾನ್ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗಣ್ಯಾತೀಗಣ್ಯರ ಸಮ್ಮುಖದಲ್ಲಿ ವಿಶ್ವಕರ್ಮ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.ಗಂಗಾವತಿ ರಸ್ತೆಯಲ್ಲಿರುವ ಶ್ರೀ ವಿಶ್ವಕರ್ಮ ವೃತ್ತಕ್ಕೆ ಮತ್ತು ಜಕಣಾಚಾರಿ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು.

 ಧ್ವಜಾರೋಹಣ ನೆರವೇರಿಸಿದ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ ಮಾತನಾಡಿ ವಿಶ್ವಕರ್ಮ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಆರ್ಥಿಕವಾಗಿ,ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದೆ.ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ನಾವುಗಳೆಲ್ಲರೂ ಒಗ್ಗಟ್ಟಾಗಬೇಕು,ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು,ರಾಜ್ಯದಲ್ಲಿ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ನಾವುಗಳೆಲ್ಲರೂ ಒಗ್ಗೂಡಿ ಹೋರಾಟದ ಫಲವಾಗಿ ಇಂದು ವಿಶ್ವಕರ್ಮ ಜಯಂತಿ ಆಚರಿಸುತ್ತಿದ್ದೆವೆ.ಸಮಾಜ ಸಂಘಟನೆ ಆದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ವೀರೇಶ ಯಾದವ್ ಮಾತನಾಡಿ ಪ್ರಪಂಚದಲ್ಲೇ ಪಂಚಕುಲ ಕಸುಬುಗಳನ್ನು ಹೊಂದಿರುವ ಏಕೈಕ ಸಮಾಜ ವಿಶ್ವಕರ್ಮ ಸಮಾಜ.ಈ ಸಮಾಜ ಅನಾದಿಕಾಲದಿಂದಲೂ ಗುಡಿ ಗುಂಡಾರಗಳನ್ನು,ಮಹಲ್ ಗಳನ್ನು ನಿರ್ಮಿಸುತ್ತಿದ್ದಾರೆ ಇಂತಹುಗಳಿಂದಲೇ ಇಂದು ನಮ್ಮ ದೇಶದ ಸಂಸ್ಕೃತಿ ಉಳಿದುಕೊಂಡಿದೆ,ಜಗತ್ತಿಗೆ ಶಿಲ್ಪಕಲೆಗಳನ್ನು ನೀಡಿದ ಸಮಾಜವಾಗಿದೆ,ಸಂಸ್ಕೃತಿ, ಪರಂಪರೆಗಳನ್ನು ಉಳಿಸಿಕೊಂಟ್ಟಂತಹ ಯಾವುದಾದರೂ ಸಮಾಜ ಇದ್ದರೆ ಅದು ವಿಶ್ವಕರ್ಮ ಸಮಾಜ.ಸಮಾಜಕ್ಕೆ ಒಂದು ಗಟ್ಟಿಯಾದ ದ್ವನಿ ಬರಬೇಕಾದರೆ ಮೊದಲು ಪ್ರತಿ ಕುಟುಂಬದ ಮಕ್ಕಳು ಶಿಕ್ಷಣವಂತರಾಗಬೇಕು ಆಗ ಸರ್ಕಾರದ ಸೌಲಭ್ಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.


 ಈ ಸಂದರ್ಭದಲ್ಲಿ ಸೋಮನಾಥ ಪತ್ತಾರ ಸುಕಲಪೇಟೆ ರಾಜ್ಯ ಕಾರ್ಯದರ್ಶಿಗಳು ಅ.ಕ.ವಿ.ಮ.ಬೆಂಗಳೂರು, ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ, ತಿರುಮಲ ಆಚಾರಿ,ಧರ್ಮಣ್ಣ ಗುಂಜಳ್ಳಿ, ಸುರೇಶ ಸಿದ್ದಾಪುರ,ತಿಮ್ಮಣ್ಣ ವಾಲೇಕಾಕಾರ,ವೆಂಕಟೇಶ ಬಾದರ್ಲಿ,ಕರಿಯಪ್ಪ ಬೂದಿಹಾಳ,ಚನ್ನಪ್ಪ ಕೆ ಹೊಸಹಳ್ಳಿ, ಷಣ್ಮುಖಪ್ಪ ಪತ್ತಾರ, ಮುತ್ತಣ್ಣ ಪತ್ತಾರ,ಬಸವರಾಜ ದೇವರಾಜ ಫ್ರಭು ದೇವರಗುಡಿ ಹಾಗೂ ಸಮಾಜದ ಹಿರಿಯರು,ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ