ಗಣೇಶ ಚತುರ್ಥಿ - ಶಾಂತಿ ಸಭೆ
ಮಸ್ಕಿ : ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬುಧವಾರ ಪೂರ್ವಭಾವಿಯಾಗಿ ಶಾಂತಿ ಸಭೆ ನಡೆಯಿತು.
ಈ ಸಭೆಯಲ್ಲಿ ಮಸ್ಕಿ ಸಿ.ಪಿ..ಐ. ಬಾಲಚಂದ್ರ ಲಕ್ಕಂ ರವರು ಮಾತನಾಡಿ ಗಣೇಶ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಕಾನೂನು ಉಲ್ಲಂಘನೆಯಾಗದಂತೆ ಎಲ್ಲರೂ ಸೇರಿ ಶಾಂತಿ ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಬೇಕು. ಸಂಘಟಕರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮುನ್ನ ಪುರಸಭೆ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯಿಂದ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕು. ಮೂರ್ತಿ ಕೂಡಿಸಿದದಿನದಿಂದ ವಿಸರ್ಜನೆ ಮಾಡುವವರೆಗೂ ಸ್ವಯಂ ಕಾವಲು ಕಾಯಬೇಕು. ವಿಸರ್ಜನೆ ಮೆರವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಡಿಜೆ ಮ್ಯೂಸಿಕ್ ಬಳಸುವಂತಿಲ್ಲ,ರಾತ್ರಿ ಹತ್ತು ಗಂಟೆಯ ಒಳಗಾಗಿ ಗಣೇಶ್ ವಿಸರ್ಜನೆ ಮುಗಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಹಾದೇವಪ್ಪ ಗೌಡ ಪೋಲಿಸ್ ಪಾಟೀಲ್, ಸಿದ್ದರೆಡ್ಡಿ ರೈಟರ್,ವಿವಿಧ ಸಂಘಟನೆಯ ಅಧ್ಯಕ್ಷರೂ ಹಾಗೂ ಸದಸ್ಯರು, ಪೊಲೀಸ್ ಠಾಣೆಯ ಸಿಬ್ಬಂದಿ,ಪುರಸಭೆ ಸಿಬ್ಬಂದಿ, ಜೆಸ್ಕಾಂ ಸಿಬ್ಬಂದಿ, ವಿವಿಧ ಗ್ರಾಮಗಳ ಮುಖಂಡರು ಜನಪ್ರತಿನಿಧಿಗಳು ಸಾರ್ವಜನಿಕರು ಸೇರಿದಂತೆ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ