" ಬರದನಾಡಿಗೆ ಮಳೆರಾಯನಿಗೋಸ್ಕರ ಜೋಕುಮಾರ ಸ್ವಾಮಿ ದೇವರ ಮೊರೆ"

*ಮಳೆಗಾಗಿ ಜಾನ ಪದ ಸೊಗಡಿನ ಜೋಕುಮಾರ ಸ್ವಾಮಿ ದೇವರ ಮೊರೆ.*

"ಜೋಕುಮಾರಸ್ವಾಮಿ ಎಂಬ ನೆಲದ ನಂಟಿನ ದೇವರು"

ಕೊಟ್ಟೂರು :ಉತ್ತರ ಕರ್ನಾಟಕ ದ ಜಾನಪದ ವಿಶಿಷ್ಟ ಹಬ್ಬದ ಸಂಭ್ರಮ, ಜೋಕುಮಾರ ಸ್ವಾಮಿ ಹಬ್ಬ ಆಚರಣೆ ವಾಡಿಕೆಯ ವಿಶೇಷವಾಗಿದೆ.ಸಾಂಪ್ರಾದಾಯಿಕ ನಾಡಹಬ್ಬ ಗಣೇಶನ ಪ್ರತಿಷ್ಠಾಪನೆಯ ಮೂರು ಅಥವಾ ಐದು ದಿನಗಳ ಕಾಲ ಪ್ರಪಂಚದಲ್ಲಿ ಹಾಯಾಗಿ ಕುಳಿತುಕೊಂಡು ಕಾಯಿ ಕಡುಬು ಹೋಳಿಗೆ ಸುಖ ಭೋಜನ ಮತ್ತು ಹಣ್ಣು ಹಂಪಲುಗಳನ್ನು ಸೇವಿಸಿ ಡೊಳ್ಳು ಹೊಟ್ಟೆಯನ್ನು ತುಂಬಿಸಿಕೊಂಡು ಸತ್ತನಂತರ.ಭೂಲೋಕ ಎಂದು ವರದಿಡುತ್ತಾನೆ ಎಂಬ ಪ್ರತೀತಿ. ಆಗ ಜಗತ್ತಿನಲ್ಲಿ ಮಳೆಯಿಲ್ಲದೆ ಸೂತಕದ ಛಾಯೆ ಆವರಿಸುತ್ತದೆ. ಆಗ ಮೂರು ದಿನಗಳ ನಂತರ ಆಗಮನವಾಗುವವನೇ ಮಳೆತರು ದೇವರು ಎನ್ನುವುದು ವಾಡಿಕೆಯಾಗಿದೆ. 3 ದಿನಗಳಲ್ಲಿ ಜೋಕುಮಾರಸ್ವಾಮಿ ಹುಟ್ಟಿ ಮಳೆ ಹೋಗಿ ಬೆಳೆ ಒಣಗುತ್ತದೆ. ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳ ಲ್ಲಿ ಸಂಚರಿಸುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಹೊಲದಲ್ಲಿನ ಗಿಡಗಳ ಬುಡದಲ್ಲಿ ಹಾಗೂ ಎಲೆಗಳ ಮೇಲೆ ಬಿಳಿಯಾದ ಬುರುಗು (ನೊರೆ ) ಇರುತ್ತದೆ ಇದನ್ನು ಜೋಕುಮಾರ ಉಗುಳಿದ್ದಾನೆ. ಎಂದು ನಂಬುವ ರೈತರು ಜೋಕುಮಾರನ ಬಗ್ಗೆ ಮಾತನಾಡದೆ ಇರಲಾರ ರು.ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂಬ ಕಥೆಯ ಇದೆ ಎನ್ನುತ್ತಾರೆ ಹಿಂದಿನ ಕಾಲದ ಹಿರಿಯ ಯಜಮಾನರು ಚಿಕ್ಕ ಮಕ್ಕಳಿಗೆ ಕಥೆ ಹೇಳುವುದು ಸಾಮಾನ್ಯವಾಗಿದೆ.ಗಣೇಶ ಸತ್ತು ಮೂರು ದಿನಕ್ಕೆ ಜೋಕುಮಾರ ಬಾರಿಕರ (ಗಂಗಾ ಮತಸ್ಥರು.ಬೆಸ್ತರ) ಮನೆಯಲ್ಲಿ ಹುಟ್ಟುತ್ತಾನೆ ಅವರು ಹುತ್ತದ ಮಣ್ಣಿ ನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಜೋಕುಮಾರ ಸ್ವಾಮಿ ಇದಾಗಿರುತ್ತದೆ. ಬೆಳಿಗ್ಗೆ ಬಿದಿರಿನ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಪೂಜೆ ನೆರವೇರಿಸಿದ ಬಳಿಕ ಏಳು ದಿನಗಳ ಕಾಲ ಊರಿನ ಪ್ರತಿ ಮನೆ ಮನೆಗೂ ಜೋಕುಮಾರನನ್ನು ಬಾರಿಕ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರ ನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಜೋಕುಮಾರ ಬೇವಿನ ಸೊಪ್ಪು ಮತ್ತು ಪುಷ್ಪಗಳಿಂದ ಅಲಂಕರಿಸಿ ಕೊಂಡು ಪಟ್ಟಣ ಮತ್ತು ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಲ್ಲಿ ಮಹಿಳೆ ಯರು ಮತ್ತು ಪುರುಷರು ತಲೆ ಮೇಲೆ ಜೋಕುಮಾರಸ್ವಾಮಿ ಬುಟ್ಟಿಯನ್ನು ಹೊತ್ತುಕೊಂಡು ಊರೂರು ತಿರುಗಿ ಹಾಡು ಹೇಳು ವ ಮುಖಾಂತರ ಏಳು ದಿನಗಳ ಕಾಲ ಹಳ್ಳಿಗಳಲ್ಲಿ ದವಸ ದಾನ್ಯ ಗಳನ್ನು ಸಂಗ್ರಹಣೆ ಮಾಡಿಕೊಳ್ಳುತ್ತಾರೆ ಮತ್ತು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ.ಆ ಹಾಡುಗಳಲ್ಲಿ ಆತನ ಜನನ ಉಡಾಳತನ,ಆತನ ಕೊಲೆ,ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ ಎಲ್ಲವೂ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಚೋಳ, ಬೇವಿ ನ ಸೊಪ್ಪು, ಒಂದಿಷ್ಟು ಮರಣದ ನಂತರ ನುಚ್ಚನ್ನು ಮತ್ತು(ಕರಿ ಕಾಡಿಗೆಯಂತಹದ್ದ ನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ ಕರಿಯನ್ನು ನುಚ್ಚಿನ ಅನ್ನದ ಜೊತೆಗೆ ಬೆರೆಸಿ ಹೊಲದ ಸುತ್ತ ಚರಗ ಚೆಲ್ಲುತ್ತಾರೆ ಹೀಗೆ ಮಾಡುವುದ ರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ ಇದಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ.ಮರಳಿ ಕಣ್ಣು ಕಳೆದು ಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯರು ಹಿರಿಯ ರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಪಟ್ಟಣದ ಬಾವಿ ಯಲ್ಲಿ ಗುರುತಿಸಿದ ಮನೆ ಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿ ನಲ್ಲಿ ಹೂತು ಹಾಕಿ ಬರುವರು ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ಸಂಚರಿಸಿದ ನಂತರ ಸಂದರ್ಭದಲ್ಲಿ ದೊರೆ ಈ ಧಾನ್ಯಗಳಿಂದ ಆಚರಣೆ ಮಾಡುತ್ತಾರೆ.

ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುತ್ತೇವೆ. ಎನ್ನುತ್ತಾರೆ.ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ. ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. `ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡು ಬರುವುದು ಸಂಪ್ರದಾಯ. , ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ-ವಾಹನ ಖರೀದಿಸುವ೦ತಿಲ್ಲ.ಶುಭ ಕಾರ್ಯ ಮಾಡುವಂತಿಲ್ಲ ಎಂಬುದು ಗ್ರಾಮೀಣ ಜನರ ಪದ್ಧತಿಯಾಗಿದೆಜೋಕುಮಾರನ ಆಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋನದಿ ದಂಡೆಗೋ . ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರ ವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳ ರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಹರಿಜನ (ಬೇಗಾರ )ಕೇರಿಗೆ ಹೋಗಿ ತನ್ನ ಬಿಸಾಕಿ ದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ "ದನ" ಮಾಡಿ ಮುಗಿ ಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ ಎನ್ನುತ್ತಾರೆ 2 ಇಂದಿಗೂ ಗ್ರಾಮೀಣ ಭಾಗದಲ್ಲಿ ಜೋಕುಮಾರನ ಅಳಲು ಎಂದು ಕರೆಯುವುದು ವಾಡಿಕೆ ಆಗಿದೆ ಈಗಲೂ ಎಸೆಯುವುದು ಸಂಪ್ರದಾಯ.ಕೊನೆಯ ದಿನ ಈ ಪದ್ಧತಿಯನ್ನು ಕೊಟ್ಟೂರು ತಾಲ್ಲೂಕಿನ ಬಾರಿಕರು (ಗಂಗಾಮತಸ್ಥರು) ವಂಶಸ್ಥರಾದ ರೇಣುಕಮ್ಮ, ಅಡುವೆಮ್ಮ ,ಶಾರದಮ್ಮ ,ಭಾಗ್ಯಮ್ಮ,ಸೇರಿದಂತೆ ಅನೇಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*