ಶಾಸಕರ ಅಸಮಾಧಾನ:ಬಳ್ಳಾರಿಯಲ್ಲಿ ಸಹ ಇದೆ ಇದೆ ಸ್ಥಿತಿ
ಬಳ್ಳಾರಿ:ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಶಾಸಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಕೂಗು ಇದೀಗ ರಾಜ್ಯಮಟ್ಟದಲ್ಲಿ ಜೋರಾಗಿದ್ದು ಇದೇ ರೀತಿಯ ವಾತಾವರಣ ಬಳ್ಳಾರಿ ಜಿಲ್ಲೆಯಲ್ಲೂ ಇದೆ ಅನ್ನುತ್ತಿವೆ ಮೂಲಗಳು.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿತನ ಪರಿಗಣಿಸಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ
ಸಚಿವ ಸ್ಥಾನ ನೀಡಲಾಗಿದೆ. ಜಿಲ್ಲೆಯ ಐದೂ ಸ್ಥಾನಗಳನ್ನು ನೀಡಿರುವ ಜನತೆಗೆ ಅಭಿವೃದ್ದಿಯ ಕೃತಜ್ಞತೆ ನೀಡಬೇಕಾಗಿರುವುದು ಎಲ್ಲ ಶಾಸಕರ ಕರ್ತವ್ಯ. ಇದಕ್ಕೆ ಪೂರಕವಾಗಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುವ ಮತ್ತು ಶಾಸಕರ ವಿಶ್ವಾಸ ಗಳಿಸುವ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಾಗೇಂದ್ರ ಮಾಡಬೇಕು. ಆದರೆ, ನಾಗೇಂದ್ರ ಹಾಗೆಡುತ್ತಿಲ್ಲ ಎಂಬ ಮಾತು ಕಾಂಗ್ರೆಸ್ ಪಾಲಯದಲ್ಲೆಯೇ ಕೇಳಿಬರುತ್ತಿವೆ.
ಜಿಲ್ಲಾಧಿಕಾರಿ ವರ್ಗಾವಣೆ ವಿಷಯದಲ್ಲಿ ಶಾಸಕರ ಅಭಿಪ್ರಾಯ ಕೇಳುವ ಬದಲು ತಮ್ಮ ಸುತ್ತ ಇರುವ ಜನ ಮತ್ತು ಆತ್ಮೀಯರಾದ ಅಧಿಕಾರಿಗಳ ಅಭಿಪ್ರಾಯದಂತೆ ನಡೆದುಕೊಂಡರು ಎಂದು ಹೇಳಲಾಗುತ್ತಿದೆ. ಇದೆ ಕಾರಣಕ್ಕೆ ಜಿಲ್ಲೆಯ ಅತೃಪ್ತ ಶಾಸಕರು ಬೆಂಗಳೂರಿನ ಶಾಂಗ್ರಿಲ್ಲಾ ಹೋಟೆಲ್ ನಲ್ಲಿ ಸಭೆ ನಡೆಸಿ, ಮುಖ್ಯಮಂತ್ರಿಗಳ ಮುಂದೆ ದೂರಿತ್ತರು ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲ ವಿವಿಧ ಕಾಮಗಾರಿಗಳ ವಿಷಯದಲ್ಲಿ ವೀಣಾ ಕಾರಣ ಸಚಿವರ ಹಿಂಬಾಲಕರು ಮೂಗು ತೂರಿಸುತ್ತಿದೆ ಎಂತಲೂ ಸಚಿವರ ಸಹೋದರ ವೆಂಕಟೇಶ್ ಪ್ರಸಾದ್ ಸೂಪರ್ ಸಚಿವರ ತರಹ ವರ್ತಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ಗುನುಗಿಕೊಳ್ಳುತ್ತಿದ್ದಾರೆ.
ಕೆಲವೇ ತಿಂಗಳ ನಂತರ ಲೋಕಸಭಾ ಚುನಾವಣೆ ಬರಲಿದೆ. ಬಳ್ಳಾರಿ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲೇಬೇಕು. ಸಂಸತ್ ಕ್ಷೇತ್ರದ ಅವಳಿ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 6ರಲ್ಲೀ ಕಾಂಗ್ರೆಸ್ ಗೆಲುವು ಕಂಡಿದೆ. ಉಳಿದ ಎರಡು ಕ್ಷೇತ್ರದ ಪೈಕಿ ಜೆಡಿಎಸ್, ಬಿಜೆಪಿ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸುವೆ. ಅಲ್ಲಿಗೆ ಕಾಂಗ್ರೆಸ್ ಬಹುದೊಡ್ಡ ಮಟ್ಟದಲ್ಲಿ ಮೇಲುಗೈ ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈಗ ಸಮಸ್ಯೆ ಬಂದಿರುವುದು ಶಾಸಕರ ಅತೃಪ್ಪಿ ಒಂದು ಕಡೆ ಆದರೆ ಮತ್ತೊಂದು ಕಡೆ ಶಾಸಕರ ಹಿಂಬಾಲಕರು ಸಹ ಬೇಸರಗೊಂಡಿದ್ದಾರೆ. ಅತ್ಯಂತ ಹುರುಪಿನಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸಿದ ಕಾರ್ಯಕರ್ತರ ಕಡೆಗಣನೆ ಆಗುತ್ತಿದೆ. ಬರೀ ಸಚಿವರ ಹಿಂದೆ ಇರುವವರು ಮಾತ್ರ ಎಲ್ಲ ಕಡೆ ಆಚರಿಸುತ್ತಿದ್ದಾರೆ ಎಂಬ ಕೊರಗು ಕಾಡುತ್ತಿದೆ.
ಇನ್ನು ಪಕ್ಷದ ಮುಖಂಡರು ಈಗ ಆಗುತ್ತಿರುವ ಬೆಳವಣಿಗೆ ಖಂಡಿತಾ ಪಕ್ಷದ ಮಟ್ಟಿಗೆ ಒಳ್ಳೆಯದಲ್ಲ. ಬಳ್ಳಾರಿ ಕಾಂಗ್ರೆಸ್ ಭದ್ರ ಕೋಟೆ. ಹಿಂದೆ ಮಾಡಿದ ತಪ್ಪಿಂದ ನಾವು ಅದನ್ನು ಕಳೆದುಕೊಂಡಿದ್ದೆವು. ಈಗ ಜನ ಮತ್ತೆ ನಮ್ಮ ಮೇಲೆ ಒಲವು ತೋರಿದ್ದಾರೆ. ಬಳ್ಳಾರಿ ಕಾಂಗ್ರೆಸ್ ಭದ್ರ ಕೋಟೆ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಅದನ್ನು ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಹೋಗಬೇಕು. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ನಾವು ಒಗ್ಗಟ್ಟು ಮೆರೆಯಬೇಕು ಎಂಬ ಅಭಿಪ್ರಾಯ ಮುಂದೆ ಇಡುತ್ತಿದ್ದಾರೆ.

Congress is losing its strong hold because of minister nagendra hilter like behaviour against his own voters. Congress will lose lok sabha if it's so BJP is gaining momentum again in bellary and finding more chances of win with this issues
ಪ್ರತ್ಯುತ್ತರಅಳಿಸಿOne Journalist is Killing B. Nagendra feature.
ಪ್ರತ್ಯುತ್ತರಅಳಿಸಿ