ಭಾರತೀಯ ಮಹಿಳಾ ಒಕ್ಕೂಟದ ವತಿಯಿಂದ ತಾಲೂಕು ಸಮ್ಮೇಳನದ ಕಾರ್ಯಕ್ರಮ
ಕೊಟ್ಟೂರು ತಾಲೂಕು ಪಟ್ಟಣದ ಹ್ಯಾಳ್ಯ ರಸ್ತೆ ಅಂಬೇಡ್ಕರ್ ನಗರದ ಸಮುದಾಯ ಭವನದಲ್ಲಿ ಸಿಪಿಐ ಪಾರ್ಟಿ ತಾಲೂಕು ಕಾರ್ಯದರ್ಶಿ ರೇಣುಕಮ್ಮ ಹಾಗೂ ಕಾರ್ಯಕರ್ತರು ತಾಲೂಕು ಸಮ್ಮೇಳನದ ಕಾರ್ಯಕ್ರಮ ಸಭೆಯನ್ನು ಮಂಗಳವಾರದಂದು ಮಾಡಲಾಯಿತು.
ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿ ಸಂವಿಧಾನದ ಸಂರಕ್ಷಣೆಗಾಗಿ ಮಹಿಳೆಯರ ಸಮಾನ, ಸ್ವಾಭಿಮಾನಿ. ಘನತೆಯ ಬದುಕಿನ ಹಕ್ಕುಗಳ ರಕ್ಷಣೆಗಾಗಿ, ಭಾರತೀಯ ಮಹಿಳಾ ಒಕ್ಕೂಟ (NFIW) ದ 5ನೇ ರಾಜ್ಯ ಸಮ್ಮೇಳನ 2023 ಡಿಸೆಂಬರ್ 2 ಮತ್ತು 3, ರಂದು ದಾವಣಗೆರೆಯಲ್ಲಿ ನಡೆಯುವ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ತಿಳಿಸುವುದರ ಮೂಲಕ ರಾಜ್ಯ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಗಮನಕ್ಕೆ ತರಲಾಗುವುದು ಎಂದು ತಾಲೂಕು ಕಾರ್ಯದರ್ಶಿ ರೇಣುಕಮ್ಮ ಹೇಳಿದರು.
ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಕಾರ್ಯಕರ್ತರಾದ ಬದ್ದಿ ರೇಣುಕಮ್ಮ, ಕಂದಗಲ್ ತಿಮ್ಮಪ್ಪ, ಕಂದಗಲ್ ರಾಜು ಗೌಡ, ಮಹಿಳೆಯರು, ಉಪಸ್ಥಿತರಿದ್ದರು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ