ಕೊಟ್ಟೂರು ತಾಲೂಕು ಪಂಚಾಯಿತಿಯಲ್ಲಿ ರೂಪಕ್ಕನ ಆತಂಕ..!



ಕೊಟ್ಟೂರು ತಾಲ್ಲೂಕು ಪಂಚಾಯಿತಿಯಲ್ಲಿ  ರೂಪಾ ಗ್ರೇಡ್-೧ ಕಾರ್ಯದರ್ಶಿಯಾಗಿರುವ ಮತ್ತು ಡಾಟಾ ಆಪರೇಟರ್ ಮೋಹನ್ ಇವರ ಮೇಲೆ ಹಲವಾರು ಲಂಚದ ಆರೋಪಗಳನ್ನು ಬಿತ್ತರಿಸಿ ಪತ್ರಿಕೆ ವರದಿ ಮಾಡಿರುವ ಬೆನ್ನಲ್ಲೆ ರೂಪರವರು  ಕೆಲವು ಪಿ.ಡಿ.ಒ. ಅವರನ್ನು ಸಂಪರ್ಕಿಸಿ, ಅವರ ಮನವೊಲಿಸಿ ಅವರಿಂದ ತಾವು ಯಾವುದೇ ಬಗೆಯ ಲಂಚದ ಬೇಡಿಕೆಯನ್ನು ಇಟ್ಟಿರುವುದಿಲ್ಲವೆಂದು ಪತ್ರದ ಮೂಲಕ ಬರೆಸಿಕೊಂಳ್ಳುವ  ಸನ್ನಿವೇಶ ಮಾತುಗಳು ಕೇಳಿಬರುತ್ತಿವೆ.ಅಂತೆ ! ರಾಜಕೀಯ ಪ್ರಭಾವೀ ವ್ಯಕ್ತಿಗಳ ಒತ್ತಡಗಳನ್ನು ಬಳಸಿಕೊಂಡು ಈ ರೀತಿಯ ಕೆಲಸಗಳು ತಾಲ್ಲೂಕು ಪಂಚಾಯಿತಿಯಲ್ಲಿ ನಡೆಯುತ್ತಿವೆ.ಅಂತೆ.! ಇವೆಲ್ಲವನ್ನು ಗೊತ್ತೂ ಗೊತ್ತಿಲ್ಲದಂತೆ ಇರುವ ಕಾರ್ಯನಿರ್ವಾಹಕ ಅಧಿಕಾರಿಗಳು ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ.! ಕಾರ್ಯ ನಿರ್ವಾಹಕ ಅಧಿಕಾರಿಗಳ ಅಧಿಕಾರವನ್ನೇ ಓವರ್‌ಟೇಕ್ ಮಾಡಿರುವ ರೂಪ ಅವರಿಗೆ ಸಾಮಾನ್ಯ ಪಿ.ಡಿ.ಒ. ಅವರಿಂದ ಲಿಖಿತ ಪತ್ರ  ಬರೆಸಿಕೊಳ್ಳುವುದು ದೊಡ್ಡ ಕೆಲಸವೇ? ಇದನ್ನು ಮೇಲಾಧಿಕಾರಿಗಳು ಗಮನಿಸದೇ ಇರುವರೇ?

ಈ ಹಿಂದೆ ನಕಲಿ ದಾಖಲೆ ಸೃಷ್ಟಿಸಿ ಮುಂಬಡ್ತಿ ಪಡೆದಿರುವ ರೂಪರವರು ಹಿಂಬಾಗಿಲಿನ ಮೂಲಕ ಚಕಾರವೆತ್ತುವವರನ್ನು ಸಂಪರ್ಕಿಸಿ ಅವರ ಎದುರಿಸುವುದು , ಮತ್ತು ಮನವೊಲಿಸಲು ಪ್ರಯತ್ನಿಸುತ್ತಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ.!

ಪತ್ರಿಕೆಯಲ್ಲಿ ಬಣವಿ ಬಿಲ್ಲು ಎಂದು ಬರೆದಿತ್ತು ಅಂದ್ರೆ ತಕ್ಷಣವೇ  ಬಿಲ್ ಮಂಜೂರು ಮಾಡಿರುವ ಲಂಚದ ಬೇಡಿಕೆಯ ಉಲ್ಲೇಖವಾಗಿರುವವರನ್ನು ಗಮನಿಸಿ ಅವರನ್ನು ಹುಡುಕಿಕೊಂಡು ಹೋಗಿ ಅವರ ಮನವೊಲಿಸಲು, ಮತ್ತು ಹೆದರಿಸುವ, ಕಾರ್ಯಗಳೂ ನಡೆಯುತ್ತಿರಬಹುದೆ.?

ರೂಪಾ ಮತ್ತು ಡಾಟಾ ಆಪರೇಟರ್ ಮೋಹನ್ ಅವರು  ನನ್ನನ್ನು ಯಾವ ಪಿಡಿಒ ಮತ್ತು ಸಿಬ್ಬಂದಿಗಳು ಯಾವ ವರದಿ ಮಾಡಿದರು ಎದುರಿಸುವುದಕ್ಕೆ ಆಗೋದಿಲ್ಲ ನಾನು ಎದುರುವುದಿಲ್ಲ ಎಂದು ರೂಪ ಅವರು ಹೇಳುವ ಕಾರ್ಯಗಳ ನಡೆದಿದೆ. ಮತ್ತು ಹಿಂಬಾಗಿಲಿನಿಂದ ಇವರಿಗೆ ರೂಪಾ ಮೇಡಂ ಅವರು ಬೇಕಾದ ಸ್ವಾಮಿ ಎಂಬ ವ್ಯಕ್ತಿ ಕಡೆಯಿಂದ ಸಂಘಟನೆಯ  ಮುಖಂಡರುಗಳಿಗೆ  ನಮ್ಮವರು ವರದಿ ಮಾಡಬೇಡಿ ಸುಮ್ಮನಿರಿ ಎನ್ನುವ ಸಂದೇಶ ಕೊಡುತ್ತಿದ್ದಾರೆ. ಅಂತೆ.! ಎಂದು ಸಿಪಿಐ(ಎಂಎಲ್) ಪಕ್ಷದ ತಾಲೂಕು ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ್ ಹೇಳಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ