ಸಂವಿಧಾನ ಸಮರ್ಪಣಾ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಯಶಸ್ವಿ

ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದ ಜನನಿ ಪದವಿ ಪೂರ್ವ ಕಾಲೇಜ್ ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಕವಿತಾಳ ಪಿಎಸ್ಐ ಜಿ.ಪಂಪಣ್ಣ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ನಿರಂತರವಾಗಿ ಮತ್ತು ನಿಷ್ಠೆಯಿಂದ ಅಧ್ಯಯನ ಮಾಡಬೇಕು,ಸತತ ಓದು,ಕಠಿಣ ಅಭ್ಯಾಸದಿಂದ ಭವಿಷ್ಯದಲ್ಲಿ ಉನ್ನತವಾದ ಹುದ್ದೆಯನ್ನು ಪಡೆದು ದೇಶಕ್ಕೆ ನಿಮ್ಮದೆ ಆದ ಕೊಡುಗೆ ಕೊಡಿ ಎಂದು ಹೇಳಿದರು.

ಅದೇ ರೀತಿಯಲ್ಲಿ ಹಾಲಾಪೂರ ಗ್ರಾಮ ಪಂಚಾಯತಿ ಪಿಡಿಒ ವಿಶ್ವನಾಥ ರವರು ಮಾತನಾಡುತ್ತಾ ಸಂವಿಧಾನ ನಮ್ಮ ದೇಶದ ಮಹಾನ್ ಸಂಪತ್ತು, ಹೀಗಾಗಿ ನಾವೆಲ್ಲರೂ ನಿರಂತರವಾಗಿ ಸಂವಿಧಾನ ಅಧ್ಯಯನ ಮಾಡಿ ಕಾಯ್ದೆ ಕಾನೂನು ರೀತಿ ನೀತಿಗಳನ್ನು ತಿಳಿದು ಭವ್ಯ ಭಾರತದ ಉತ್ತಮ ಪ್ರಜೆಗಳಾಗಬೇಕು ಎಂದು ಪಿಡಿಒ ವಿಶ್ವನಾಥ ಹೇಳಿದರು.


 ಈ ಸಂದರ್ಭದಲ್ಲಿ ಕಾಲೇಜ್ ಪ್ರಾಚಾರ್ಯರಾದ ನಾಗೇಶ ಜಂಗಮರಹಳ್ಳಿ, ಎ ಎಸ್ ಐ ಆಂಜನೇಯ ಉಪ ಪ್ರಾಚಾರ್ಯರಾದ ಸಿದ್ದಾರ್ಥ ಪಾಟೀಲ್ ಉಪನ್ಯಾಸಕರಾದ ಮರಿಸ್ವಾಮಿ,ಪರಪ್ಪ ಬಂಡಾರಿ, ವಿರೇಶ , ಯುನಿಸ್ ಅಕ್ರಮ, ದಿವ್ಯಾ ಕುಮಾರಿ, ಗ್ರಾಮ ಪಂಚಾಯತಿ ಸದಸ್ಯರಾದ ಆಬೆಲ್ ರಾಜ್ ,ಚಂದಪ್ಪ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ