"ಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣದ ಭೂಮಿ ಪೂಜೆಯಲ್ಲಿ |ತಾಲೂಕು ಪಂಚಾಯಿತಿದೆ ಚರ್ಚೆ |ಲಂಚದ ಆರೋಪ ಕೇಳಿ ಬರುತ್ತಿರುವವರ ವಿರುದ್ಧ| ಶಿಸ್ತು ಕ್ರಮ ಕೈಗೊಳ್ಳುತ್ತೇವೆ: ಕೆ ನೇಮರಾಜ್ ನಾಯ್ಕ್ "
"ನೂತನ ಪಶು ಆಸ್ಪತ್ರೆಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಉದ್ಘಾಟನೆ: ಕೆ ನೇಮರಾಜ್ ನಾಯ್ಕ್ "
"ಕೇಂದ್ರ ಸರ್ಕಾರ ಹಾಗೂ ಪಶುಸಂಗೋಪನ ನಿಧಿಯಿಂದ ನೂತನ ಪಶು ಸಂಜೀವಿನಿ ತುರ್ತು ವಾಹನಕ್ಕೆ ಶಾಸಕರು ನೇಮರಾಜ್ ನಾಯಕ್ ಚಾಲನೆ ನೀಡಿದರು"
"ಕೊಟ್ಟೂರು ತಾಲ್ಲೂಕಿನಾದ್ಯಂತ ಪಶು ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿಗಳು ನೇಮಕಕ್ಕೆ ಅಧಿವೇಶನದಲ್ಲಿ ಚರ್ಚೆಸುವೆ: ಕೆ ನೇಮರಾಜ್ ನಾಯ್ಕ್ "
ಪಶು ಪಾಲನ ಮತ್ತು ಪಶುವೈದ್ಯ ಸೇವೆ ಇಲಾಖೆಯಿಂದ ಆರ್ ಐ ಡಿ ಉಪ ಯೋಜನೆ ಅಡಿಯಲ್ಲಿ ಬ್ರಾಂಚ್ ಪಶು ವೈದ್ಯ ಆಸ್ಪತ್ರೆ ಆವರಣದಲ್ಲಿ ಅಂದಾಜು 50 ಲಕ್ಷ ರೂಪಾಯಿ ವೆಚ್ಚದ ಭೂಮಿ ಪೂಜೆ ನೆರವೇರಿಸಿ ಮತ್ತು ಕರ್ನಾಟಕ ಸ್ಟೇಟ್ ಹೆಬಡೆಂಟ್ ಸರ್ವಿಸ್, ಪಶು ಸಂಜೀವಿನಿ ವಾಹನ ಚಾಲನೆ ನೀಡಿದರು.
ಪ್ರತಿ ಗ್ರಾಮ ಪಂಚಾಯಿತಿಗೆ ಪಶು ಸಖಿಯರಿಗೆ ಶಾಸಕರಿಂದ ಕಿಟ್ಟನ್ನು ವಿತರಣೆ ಮಾಡಲಾಯಿತು.
ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಒಟ್ಟು 28 ವೈದ್ಯರು ಬೇಕಾಗಿದ್ದು ಅದರಲ್ಲಿ ಐದು ಜನ ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಮತ್ತು 23 ವೈದ್ಯರು ಹಾಗೂ ಸಿಬ್ಬಂದಿ ವರ್ಗ ಖಾಲಿ ಇರುವುದರ ಬಗ್ಗೆ ಈ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ.ಎಂದರು.
ಬರಪೀಡಿತ ತಾಲೂಕು ಪ್ರದೇಶಗಳಿಗೆ 21ರಿಂದ ವಿಜಯನಗರ ಜಿಲ್ಲೆಯ 5 ತಾಲೂಕು ಪರಮ ಪೂಜ್ಯರ ಸಯೋಗದಲ್ಲಿ ಬರಗಾಲ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಶು ಕೇಂದ್ರದಲ್ಲಿ ಗ್ರಾಮೀಣ ಭಾಗದ ರೈತರಿಗೆ ವಿವಿಧ ಯೋಜನೆಗಳು ಕೈಗೆ ಸಿಗದಂತಹ ಪರಿಸ್ಥಿತಿ ಒದಗಿದೆ ಮಧ್ಯವರ್ತಿಗಳ ಅವಳಿಗೆ ಕಡಿವಾಣ ಹಾಕಬೇಕೆಂದು ಮಾನ್ಯ ಶಾಸಕರು ಮೇಲಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳು ಗಮನಕ್ಕೆ ತರಲಾಗಿದೆ ಈ ವಿಷಯದ ಬಗ್ಗೆ ವಿಶೇಷವಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೊಟ್ಟೂರು ತಾಲೂಕು ಪಂಚಾಯಿತಿ ಲಂಚದ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಗ್ರೇಡ್ ಒನ್ ಕಾರ್ಯದರ್ಶಿ ರೂಪ ಹಾಗೂ ಡಾಟಾ ಆಪರೇಟರ್ ಮೋಹನ್ ಅವರ ವಿರುದ್ಧ ಮೇಲಧಿಕಾರಿಗಳು ಕ್ರಮ ವಹಿಸಿದಿರುವುದು ಮೇಲಧಿಕಾರಿಗಳ ಕುಮಕ್ಕು ಇದೆ ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.?
ಶಾಸಕರು ಮೇಲಧಿಕಾರಿಗಳ ಸಿಇಓ ಹಾಗೂ ಡಿ ಎಸ್ ಗಮನಕ್ಕೆ ತಂದಿದ್ದು ಇಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕರು ತಿಳಿಸಿದ್ದಾರೆ.ಮತ್ತು 25 ನೇ ತಾರೀಖಿಗೆ ಸಭೆಯನ್ನು ಕರೆಯಲಾಗಿತ್ತದೆ ಎಂದು ಎಲ್ಲವನ್ನೂ ಕ್ರಮ ವಹಿಸುತ್ತೇವೆ ಹೇಳಿದರು.
ತಾಲೂಕು ಪಂಚಾಯಿತಿ ಇಓ ಸಾಹೇಬರು ಸಮಯಕ್ಕೆ ಸಿಗುವುದಿಲ್ಲ. ಎನ್ನುವ ಆರೋಪ ಕೇಳಿ ಬಂದಿದೆ 20 ನಿಮಿಷಕ್ಕಿಂತ ಹೆಚ್ಚಿನ ಸಮಯ ಇರುವುದಿಲ್ಲ .ಎನ್ನುವ ಆರೋಪ ಕೇಳಿ ಬಂದಿದೆ ಎಂದು ಸಾರ್ವಜನಿಕರು ಶಾಸಕರಿಗೆ ಪ್ರಶ್ನೆ ಮಾಡಿದರು.
ಶಾಸಕರು ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು.ಎಂದು ಇಓ ಅವರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬೆಣ್ಣಿ ಬಸವರಾಜ್ ಡಾಕ್ಟರ್, ಕೊಟ್ರೇಶ್ ವಿ ಡಾಕ್ಟರ್, ಯೋಗೇಶ್ವರ ದಿನ್ನೆ, ತಾಲೂಕು ಪಂಚಾಯಿತಿ ಇಓ ರವಿಕುಮಾರ್,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್, ಡಿಶ್ ಮಂಜುನಾಥ್, ಬಸವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಣ್ಣ, ಗಂಗಮ್ಮನಹಳ್ಳಿ ಪ್ರಕಾಶ್ ವಕೀಲರು, ಪಟ್ಟಣ ಪಂಚಾಯಿತಿ ಸದಸ್ಯೆ ವೀಣಾ ವಿವೇಕಾನಂದ ಗೌಡ, ಬೋರ್ವೆಲ್ ತಿಪ್ಪೇಸ್ವಾಮಿ,ನಾಗರಾಜ್, ಇನ್ನು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ