ಈ ಭಾಗದ ನ್ಯಾಯಾಧೀಶ ಅಭಿಮಾನಿಗಳಿಗೆ ಎಂ.ಎಂ.ಜೆ.ಹರ್ಷವರ್ಧನ್‌ರವರಿಗೆ 62ನೇ ಹುಟ್ಟುಹಬ್ಬದ ಶುಭಾಶಯ...
"ಜನರ ಸಂಕಷ್ಟಕ್ಕೆ ಸ್ಪಂದಿಸುವ ಜನನಾಯಕನ ಎಂ ಎಂ ಜೆ ಹರ್ಷವರ್ಧನ್"
ಕೊಟ್ಟೂರು: ನಾನು ಸಣ್ಣವನಿದ್ದಾಗಲೂ ನಮ್ಮೂರಿನಲ್ಲಿ ಕೇಳುತ್ತಿದ್ದ ರೂಪಕವೆಂದರೆ 'ಧಣಿ'. ಊರಲ್ಲಿ ಯಾವುದೇ ಸಮುದಾಯಗಳ ಜಗಳಗಳಿರಲಿ, ಸಂಸಾರದ ತಾಪತ್ರಯಗಳಿರಲಿ ಅವುಗಳೆಲ್ಲವೂ ತಹಬದಿಗೆ ಬರುತ್ತಿದ್ದುದು ಇವರ ನೇತೃತ್ವದಲ್ಲಿಯೇ ಹಾಗಾಗಿ ಇವರನ್ನು ಈ ಭಾಗದ ನ್ಯಾಯಾಧೀಶ 'ಧಣಿ' ಎನ್ನುವ ರೂಪಕ. ಎಲ್ಲ ಜನಾಂಗದ ವಯಸ್ಸಾದ ಹಿರಿಯರಿಂದ ಹಿಡಿದು ಸಣ್ಣ ಮಕ್ಕಳವರೆಗೂ ಇವರನ್ನು ಕಂಡರೆ ಒಂದು ರೀತಿಯ ಗೌರವ ಭಾವನೆ, ಪ್ರೀತಿ. ಕೂತವರು ಎದ್ದುನಿಂತು ಕೈಮುಗಿಯುವ ವರ್ತನೆಯನ್ನು ಕಂಡು ನಾನೂ ಪುಳಕಿತಗೊಳ್ಳುತ್ತಿದ್ದೆ. ಎಲ್ಲೇ ಕಂಡರೂ ಒಂದು ಬಾರಿ ಕೈಮುಗಿಯಬೇಕೆನ್ನುವುದು ಮನಸ್ಸಿನಲ್ಲಿ ಹಾಗೇ ಒಂದುಕ್ಷಣ ಬಂದುಹೋಗುತ್ತಿತ್ತಾದರೂ, ಎಲ್ಲಿ ಏನನ್ನುವರೋ ಎಂದು ಎದುರಿಗೆ ಕಂಡರೂ ಭಯಭೀತಗೊಳ್ಳುತ್ತಿದ್ದೆ ಆಗ. ಯಾರೇ ಕಂಡರೂ ನಗುಮುಖದ ನಗೆಯನ್ನು ಚಿಮ್ಮಿ ಎಂತಹ ಮನುಷ್ಯನನ್ನೂ ತನ್ನ ಪ್ರೀತಿಯ ವ್ಯಾಪ್ತಿಗೆ ಸೆಳೆದುಕೊಳ್ಳುವ ನಗು ಇವರ ಮುಖದಲ್ಲಿ ಸದಾ ಹಸಿರಾಗಿದೆ. ಬಹುಶಃ ಅದರಿಂದಲೇ ಜನರು ಇವರನ್ನು ಅಷ್ಟೊಂದು ಪ್ರೀತಿಸಲು ಕಾರಣವಿರಬಹುದು.
ಬರೀ ಜಗಳಗಳಷ್ಟೇ ಅಲ್ಲ, ಊರಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ, ಅಭಿವೃದ್ಧಿ ಕಾರ್ಯಕ್ರಮಗಳಿರಲಿ ಇವರ ಹಾಜರಿಯಂತೂ ಇದ್ದೇ ಇರುತ್ತದೆ. ಎಲ್ಲ ಕಾರ್ಯಕ್ರಮಗಳಲ್ಲೂ ನಗುನಗುತ್ತಲೇ ಭಾಗವಹಿಸುವ ಇವರ ಮುಖದಲ್ಲಿ ನಗುವಿನ ದೇವತೆ ವಾಸಸ್ಥಾನ ಮಾಡಿಕೊಂಡಿದ್ದಾಳೇನೋ!. ರಾಜಕೀಯವೆನ್ನುವುದು ಇವರಿಂದ ತಂದೆಯವರಿಂದಲೇ ಜನ್ಮಜಾತವಾಗಿ ಬಂದ ಉಡುಗೊರೆ. ಅವರ ತಂದೆಯವರು ಸಚಿವರಾಗಿ ಈ ಭಾಗದ ಹಲವು ಮನೆಗಳಲ್ಲಿ, ಮನಸುಗಳಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅಂತಹವರ ಮಗನಾದ ಇವರಿಗೆ ಜನರನ್ನು ಪೋಷಿಸುವುದು ರಕ್ತದಲ್ಲೇ ಇರುವುದರನ್ನು ಜನರನ್ನು ಅಷ್ಟೊಂದು ಪ್ರೀತಿಸಲು ಸಾಧ್ಯವೆನಿಸುತ್ತದೆ. ಫ್ಯೂಡಲಿಸಂ ಎನ್ನುವುದ ರಾಜಕೀಯ ವ್ಯಕ್ತಿಗಳಿಗೆ ಸಹಜವಾಗಿಯೇ ಬರುತ್ತದೆ ಅದು ಅಧಿಕಾರ ಬಂದಮೇಲಂತೂ ಅದರ ಔನ್ನತ್ಯವನ್ನು ಅವರು ಮುಟ್ಟಿಬಿಡುತ್ತಾರೆ. ಆದರೆ ನಮ್ಮ ಹರ್ಷಣ್ಣನವರಲ್ಲಿ ನಾನು ಇದುವರೆಗೂ ಇಂತಹ ಗುಣವನ್ನು ಕಂಡಿಲ್ಲ. ಬಹುಶಃ ಅವರೂ ಸಹ ಫ್ಯೂಡಲಿಸಂ ಅನ್ನು ಒಪ್ಪದವರು. ಹಾಗಾಗಿಯೇ ಜನರು ಇವರನ್ನು 'ಧಣಿ' ಎಂದು ಕರೆಯುತ್ತಾರೆ.
ಇವರ ರಾಜಕೀಯ ಪಲ್ಲಟಗಳ ಬಗ್ಗೆ ವೈಯಕ್ತಿಕವಾಗಿ ಹಲವಾರು ತಕರಾರುಗಳಿವೆ. ಅದು ಬೇರೆಯದೇ ವಿಷಯ. ಒಬ್ಬ ಜನನಾಯಕನಿಗೆ ಇರಬೇಕಾದ ಎಲ್ಲ ಅರ್ಹತೆಗಳು ಇದ್ದರೂ ಸಹ ಎಲೆಮರೆಯ ಕಾಯಿಯಂತೆ ಜನಸೇವೆಯನ್ನು ಹೀಗೂ ಮಾಡಬಹುದು ಎನ್ನುವುದಕ್ಕೆ ಕಣ್ಣೆದುರಿಗೆ ಕಾಣುವ ಉದಾಹರಣೆಯಾಗಿದ್ದಾರೆ. ಬರೀ ರಾಜಕೀಯವನ್ನಷ್ಟೇ ಮಾಡದೇ, ಸಾಹಿತ್ಯಿಕ, ಸಾಂಸ್ಕೃತಿಕ ನಂಟನ್ನು ಇಟ್ಟುಕೊಂಡಿರುವ ಇವರು ಪುಸ್ತಕಗಳ ಸಖ್ಯವನ್ನು ಇನ್ನಷ್ಟು ಮತ್ತಷ್ಟು ಮಾಡಬೇಕು ಎನ್ನುವುದು ನನ್ನ ಆಶಯ. ತಮ್ಮ ಮಗನ ವಯಸ್ಸಿನವನಾದರೂ ಸಹ ನನ್ನ ಅಭಿಪ್ರಾಯವನ್ನು ನಾನು ತಿಳಿಸಿ ಆ ಮೂಲಕ ನಿಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದೇನೆ.
ನಿಮ್ಮ ಮುಖದ ನಗುವನ್ನು ನಮಗೂ ಸ್ವಲ್ಪ ದಯಪಾಲಿಸಿ ಎನ್ನುವ ಸ್ವಾರ್ಥವಂತೂ ಇದ್ದೇ ಇದೆ. ಎನಿವೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಹರ್ಷಣ್ಣ ನಿಮ್ಮ ನಗು, ಜನಸೇವೆ ನಿರಂತರವಾಗಿರಲಿ.ಎಂದು ಕೊರವರ ಕೊಟ್ರೇಶ್, ಕೊಟ್ಟೂರು ಆಶಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ