ಎಸ್ ಜೆ ಕೋಟೆ ಶಾಲೆಯಲ್ಲಿ ದೃಷ್ಟಿ ದೋಷ ಪರೀಕ್ಷೆ




ಬಳ್ಳಾರಿ:(Ballari news) : ಮಾನವನ ದೇಹದ ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಮಹತ್ವದ ಸ್ಥಾನ ಇದೆ.ಅದರ ಬಗ್ಗೆ ಯಾವ ಮಕ್ಕಳು ಕೂಡ ನಿರ್ಲಕ್ಷ್ಯ ವಹಿಸಬಾರದು. ತೊಂದರೆಗಳಿದ್ದರೆ,ಅಕ್ಷರ ಸರಿಯಾಗಿ ಕಾಣದಿದ್ದರೆ,ಅರೆತಲೆನೋವು,ಕಣ್ಣಲ್ಲಿ ನೀರು ಸೋರುತ್ತಿದ್ದರೆ ಅಂತಹ ಮಕ್ಕಳು ತಮ್ಮ ತರಗತಿ ಶಿಕ್ಷಕರಿಗೆ,ಇಲ್ಲವೇ ದೈಹಿಕ ಶಿಕ್ಷಕರಿಗೆ,ಇಲ್ಲವೇ ಶಾಲೆಯ ಮುಖ್ಯ ಗುರುಗಳಿಗೆ ಭಯಪಡದೆ ತಿಳಿಸಬೇಕು.ನಂತರ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಹೇಳಿದರು.

ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಡಿಗಿನಮೊಳ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ದೃಷ್ಟಿ ದೋಷ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮೇಲಿನಂತೆ ಹೇಳಿದರು.

ದೃಷ್ಟಿ ದೋಷವುಳ್ಳ ಮಕ್ಕಳನ್ನು ಪರೀಕ್ಷೆ ಮಾಡಿ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ಮಕ್ಕಳನ್ನು ವಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆಗೆ ಪೋಷಕರ ಜೊತೆ ಹೋಗಲು ತಿಳಿಸಲಾಯಿತು.

ಹಿರಿಯ ಆರೋಗ್ಯ ಸಹಾಯಕರಾದ ಡೋನೇಷ್,ವಿಜಯ ಲಕ್ಷ್ಮೀ, ಆಶಾ ಕಾರ್ಯಕರ್ತೆಯರಾದ ಯಶೋಧ, ಸುಶೀಲಾ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ