"ದಿನಗೂಲಿಗಾಗಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವ ಅಮಾಯಕ ಜನರು ಅಕ್ರಮ ಮರಳು ದಂಧೆಗೆ ಬಲಿ "

ಅಕ್ರಮ ಮರಳು ಗಣಿಗಾರಿಕೆಗೆ ವ್ಯಕ್ತಿ ಬಲಿ :ಮೃತ ಕುಟುಂಬದ ಆಕ್ರಂದನ..!

ಕೊಟ್ಟೂರು: ಅಕ್ರಮ ಮರಳು ಗಣಿಗಾರಿಕೆಗೆ ಮಲ್ಲನಾಯಕಹಳ್ಳಿ ಗ್ರಾಮದ ಹೊಸದುರ್ಗದ ತಿಮ್ಮಣ್ಣ (43) ಎಂಬ ವ್ಯಕ್ತಿ ಬಲಿ ಇತ್ತೀಚೆಗೆ ಈ ತಾಲ್ಲೂಕು ಅಕ್ರಮ ಮರಳು ಗಣಿಗಾರಿಕೆಯ ತಾಣವಾಗಿದೆ. ಮರಳು ದಂಧೆ ಗೆ ವ್ಯಕ್ತಿಯನ್ನು ಆಹುತಿ ಪಡೆದ ಘಟನೆ ನಡೆದಿದೆ.! 

ದಿನಗೂಲಿಗಾಗಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವ ಅಮಾಯಕ ಜನರು ತಮ್ಮ ಪ್ರಾಣವನ್ನು ಲೆಕ್ಕಿಸದೇ ರಾತ್ರೋ ರಾತ್ರಿ ಹೋಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವರಿಂದ.ಜನರ ಪ್ರಾಣಗಳನ್ನು ಆಹುತಿ ಪಡೆಯುತ್ತಿದ್ದಾರೆ.! ಈ ಭಾಗದಲ್ಲಿ ದಿನವೂ ಈ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಸಹ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವಾಗಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಅದು ಕೊಟ್ಟೂರಿಗೆ ಅನ್ವಯವಾಗಿಲ್ಲವೆನಿಸುತ್ತಿದೆ.! ಅಲ್ಲೊಂದು ಇಲ್ಲೊಂದು ಸಾರ್ವಜನಿಕವಾಗಿ ಕಂಡರೆ ಮಾತ್ರ ಅವುಗಳನ್ನು ಹಿಡಿದು ನೆಪಮಾತ್ರಕ್ಕೆ ದಂಡ ಕಟ್ಟಿಸಿಕೊಳ್ಳುವ ಅಧಿಕಾರಿಗಳಿರುವುದರಿಂದ ಅಕ್ರಮ ಮರಳು ಗಣಿಗಾರಿಕೆ ನಡೆಸುವವರು ರಾಜಾರೋಷವಾಗಿ ನಡೆಸುತ್ತಿದ್ದಾರೆ.! ಗುಂಡಗಳ ರೀತಿಯಲ್ಲಿ ವರ್ತನೆ.ಇಂತಹವರ ವಿರುದ್ಧ ಸರ್ಕಾರ, ಕ್ಷೇತ್ರದ ಶಾಸಕರು, ಮೇಲಾಧಿಕಾರಿಗಳು ಗಮನ ಹರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ, ಜನರ ಮರಣಯಾತ್ರೆ ಮುಂದುವರೆಯುತ್ತಲೇ ಇರಬಹುದು? ಕೊಟ್ಟೂರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮೃತ ಕುಟುಂಬಸ್ಥರು ಆಕ್ರಂದನ.! ಮಧು, ಚಂದ್ರ, ರಾಮು, ಶ್ರೀ ನಿವಾಸ,ಸಾರ್ವಜನಿಕರಲ್ಲಿ ಚರ್ಚೆ..!

ಕೋಟ್-೧

ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಕ್ರಮ ಮರಳು ಗಣಿಗಾರಿಕೆಯಲ್ಲಿ ನಮ್ಮ ಇಲಾಖೆಯವರು ಭಾಗಿಯಾಗಿದ್ದರೆ ಅವರ ಮೇಲೂ ಸಹ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವೆ.

ಹರಿಬಾಬು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯನಗರ ಜಿಲ್ಲಾ (ಹೊಸಪೇಟೆ)

ಕೋಟ್-೨

ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಮಾಹಿತಿ ನೀಡಲು ಗಣಿ ಭೂ ವಿಜ್ಞಾನ ಅಧಿಕಾರಿಗಳನ್ನು ಸಂಪರ್ಕಿಸಿದರೆ,ಅವರು ಸಂಪರ್ಕಕ್ಕೇ ಸಿಗುತ್ತಿಲ್ಲ. ಗಣಿಭೂವಿಜ್ಞಾನ ಇಲಾಖೆಯವರು ಯಾವ ಕೆಲಸ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಈ ಇಲಾಖೆ ಇದ್ದೂ ಇಲ್ಲದಂತಾಗಿದೆ.

ಚಂದ್ರಶೇಖರ್ ಡಿ.ಎಸ್.ಎಸ್. ತಾಲ್ಲೂಕು ಅಧ್ಯಕ್ಷ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ