ಬಿ.ವೈ ವಿಜಯೇಂದ್ರ ಹುಟ್ಟು ಹಬ್ಬದ ಪ್ರಯುಕ್ತ ಬಣಜಿಗ ಸಮಾಜ ಹಣ್ಣು ಹಂಪಲು ವಿತರಣೆ



ಮಸ್ಕಿ : ಶಾಸಕರಾದ ಬಿ.ವೈ ವಿಜಯೇಂದ್ರ ರವರ ಹುಟ್ಟುಹಬ್ಬದ ಪ್ರಯುಕ್ತ ಬಣಜಿಗ ಸಮಾಜದ ವತಿಯಿಂದ ಆಸ್ಪತ್ರೆಗಳಿಗೆ ಹಾಗೂ ಅನಾಥ ಆಶ್ರಮ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಭಾನುವಾರ ತಾಲೂಕ ಬಣಜಿಗ ಯುವ ಘಟಕದಿಂದ ಬಣಜಿಗ ಸಮಾಜದ ರಾಜ್ಯ ಯುವ ಮುಖಂಡರಾದ ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿ.ವೈ ವಿಜಯೇಂದ್ರ ರವರ ಹುಟ್ಟುಹಬ್ಬದ ಅಂಗವಾಗಿ ಆಸ್ಪತ್ರೆಗಳಿಗೆ ಹಣ್ಣು ಹಂಪಲು, ಅಭಿನಂದ ಸಂಸ್ಥೆಯ ಅನಾಥ ಆಶ್ರಮದಲ್ಲಿ ನೋಟ್ ಬುಕ್ ಮತ್ತು ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಮಾಜದ ತಾಲೂಕು ಯುವ ಘಟಕದ ಅಧ್ಯಕ್ಷರಾದ ಸೂಗಣ್ಣ ಬಾಳೆಕಾಯಿ, ಬಸವರಾಜ್ ಕುಡ್ತಿನಿ ಶಿವು ಬ್ಯಾಳಿ, ಮಲ್ಲಿಕಾರ್ಜುನ್ ಹೆಂಬಲದ, ಶಿವಕುಮಾರ್ ಗೋನಾಳ್, ಶಿವಪ್ರಸಾದ್ ಕ್ಯಾತ್ನಟ್ಟಿ, ಬಸವರಾಜು ಕಡಬೂರು, ಸುರೇಶ್ ಬಾಳೇಕಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*