ಪಠ್ಯೇತರ ಚಟುವಟಿಕೆ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತವೆ
ದಾವಣಗೆರೆ: ವಿದ್ಯಾರ್ಥಿಗಳು ತಮ್ಮ ಪದವಿಯ ಜೀವನದಲ್ಲಿ ಪಠ್ಯಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಎನ್ ಎಸ್ ಎಸ್ ಎನ್ ಸಿ ಸಿ ರೋವರ್ ರೇಂಜರ ರೆಡ್ ಕ್ರಾಸ್ ಹಾಗೂ ಇತರೆ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಬಂದರೆ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬಹುದು ಎಂದು ಎಸ್ ಎಸ್ ಕೇರ್ ನ ಲೈಫ್ ಟ್ರಸ್ಟಿ ಹಾಗೂ ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಡಾII ಪ್ರಭಾ ಮಲ್ಲಿಕಾರ್ಜುನ್ ರವರು ಹೇಳಿದರು.
ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಂಜೆ ಕಾಲೇಜಿನ ವಿವಿಧ ಪಠ್ಯೆತರ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿಯ ಜೀವನ ಬಂಗಾರದ ಜೀವನ ಎಂದೆನಿಸಿಕೊಳ್ಳಬೇಕಾದರೆ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ವಿದ್ಯಾರ್ಥಿಯ ಲಕ್ಷಣವಾಗಿದೆ ವಿದ್ಯಾರ್ಥಿಗಳು ತಾವು ಏನೆಂಬುದನ್ನು ಸಾಬೀತುಪಡಿಸಲು ಪದವಿಯೊಂದಿಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗುವುದನ್ನು ರೂಢಿಸಿಕೊಳ್ಳಬೇಕು. ಆಗ ತಾವು ಸಮಾಜದಲ್ಲಿ ಏನೆಂಬುದನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿ ಅವುಗಳ ಮಹತ್ವ ಏನು ಎಂಬುದನ್ನು ತಿಳಿಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲರಾದ ಡಾ ಜಿ ಎನ್ ಮಲ್ಲಿಕಾರ್ಜುನಪ್ಪನವರು ಮಾತನಾಡುತ್ತಾ ವಿದ್ಯೆಯನ್ನು ಅರಿಸಿ ಬರುವ ವಿದ್ಯಾರ್ಥಿಗಳು ವಿದ್ಯಾಲಯಗಳಲ್ಲಿ ಪದವಿಗಳೊಂದಿಗೆ ಕ್ರಿಯಾತ್ಮಕ ಜ್ಞಾನವನ್ನು ವೃದ್ಧಿಸುವಲ್ಲಿ ಪ್ರಯತ್ನ ಪಡಬೇಕು. ಶಿಕ್ಷಣ ಪಡೆದ ನಂತರ ಉದ್ಯೋಗ ಸಿಗದೇ ಇದ್ದರೆ ಆ ಉದ್ಯೋಗದಿಂದ ಯಾವುದೇ ಅಭಿವೃದ್ಧಿಯಾಗದಿದ್ದರೆ ಶಿಕ್ಷಣಕ್ಕೆ ಯಾವುದೇ ಮಹತ್ವ ಇರುವುದಿಲ್ಲ . ತಮ್ಮ ವೃತ್ತಿ ಜೀವನದಲ್ಲಿ ತಾವು ಕಲಿತ ಶಿಕ್ಷಣವನ್ನು ಅಳವಡಿಸಿಕೊಂಡಾಗ ತಮ್ಮ ಸ್ವ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಕವಾಗಿ ಮಾತನಾಡಿದ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಪ್ರೊ ಲತಾ ಅವರು ವಿದ್ಯಾರ್ಥಿಗಳ ಅಭಿವೃದ್ಧಿಗೆ ಬೇಕಾಗುವ ಹಾಗೂ ಅವರ ಬೆಳವಣಿಗೆ ಪೂರಕವಾಗಿರುವ ಎಲ್ಲಾ ಕಾರ್ಯಕ್ರಮಗಳನ್ನು ವೇದಿಕೆ ಮೂಲಕ ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಜೆ ಕಾಲೇಜಿನ ಪ್ರಾಂಶುಪಾಲರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ ದಾದಾಪೀರ್ ಬಿ ಸಿ ರವರು ಮಾತನಾಡುತ್ತಾ ಕಾಲೇಜು ಅತಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಹೊಂದಿದೆ ಉತ್ತಮ ಫಲಿತಾಂಶ ದೊಂದಿಗೆ ಒಳ್ಳೆಯ ಹೆಸರನ್ನು ಪಡೆದುಕೊಂಡಿರುವುದಕ್ಕೆ ಇಲ್ಲಿನ ವಿದ್ಯಾರ್ಥಿ ಹಾಗೂ ಅಧ್ಯಾಪಕರುಗಳು ಕಾರಣ ಎಲ್ಲಾ ವಿದ್ಯಾರ್ಥಿಗಳು ಅಧ್ಯಾಪಕರ ಮತ್ತು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಗೀತಾದೇವಿ ಟಿ ಸಿಡಿಸಿ ಸದಸ್ಯರುಗಳು ಹಾಗೂ ಎಲ್ಲಾ ಸಮಿತಿಯ ಸಂಚಾಲಕರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ಅಧ್ಯಾಪಕಿ ಪ್ರೊ ಯಶಸ್ವಿನಿ ರವರು ನಿರೂಪಿಸಿದರು ಪ್ರೊ ರಾಜಕುಮಾರ್ ಸ್ವಾಗತಿಸಿದರೆ ವೆಂಕಟೇಶ್ ಬಾಬುರವರು ಅತಿಥಿಗಳ ಪರಿಚಯ ಮಾಡಿಕೊಟ್ಟರು ಪ್ರೊ ನರೇಶ್ ರವರು ವಂದಿಸಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ