ಮಣಿಪಾಲ್ ಆರೋಗ್ಯ ಕಾರ್ಡ್ ಬಡವರಿಗೆ ಆಪ್ತ ರಕ್ಷಕ-ಡಿ.ನಾಗರಾಜಪ್ಪ*-
ವಿಜಯನಗರ ಜಿಲ್ಲೆ ಕೂಡ್ಲಿಗಿ:ಮಣಿಪಾಲ್ ಆರೋಗ್ಯ ಕಾರ್ಡ್ ಬಡವರ ಪಾಲಿಗೆ ಆಪ್ತ ರಕ್ಷಕವಾಗಿದೆ ಎಂದು, ಪಟ್ಟಣದ ಹಿರಿಯ ನಾಗರೀಕರು ಹಾಗೂ ನಿವೃತ್ತ ದೈಹಿಕ ಶಿಕ್ಷಕರಾದ ಡಿ.ನಾಗರಾಜಪ್ಪರವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನ8ರಂದು ಪ್ರವಾಸಿ ಮಂದಿರದಲ್ಲಿ, ಮಣಿಪಾಲ್ ಕಾರ್ಡ್ ನೊಂದಣಿ ಅಭಿಯಾನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಾವು ರಿಯಾಯಿತಿ ಕಾರ್ಡ್ ನ ಸದುಪಯೋಗ ಪಡೆದುಕೊಂಡಿರುವ ಕುರಿತು, ಸಂಕ್ಷಪ್ತವಾಗಿ ವಿವರಿಸಿದರು. ಮತ್ತು ಸದುಪಯೋಗ ಪಡಿಸಿಕೊಂಡಿರುವ ಪಟ್ಟಣ ವ್ಯಾಪ್ತಿಯ, ಹಾಗೂ ತಾಲೂಕಿನ ನೆರೆ ಹೊರೆ ತಾಲೂಕುಗಳ ವ್ಯಕ್ತಿಗಳ ಕುರಿತು ಮಾಹಿತಿ ನೀಡಿದರು. ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯ ಮಾರುಕಟ್ಟೆ ವ್ಯವಸ್ಥಾಪಕರಾದ ಮೋಹನ ಶೆಟ್ಟಿ, ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅನಿಲ್ ನಾಯ್ಕ್, ಮಣಿಪಾಲ್ ಕಾರ್ಡ್ ಮುಖ್ಯ ಸಂಯೋಜಕ ಕೆ.ಬಿ. ಕೆಂಚನಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಆಸ್ಪತ್ರೆಯ ರಿಯಾಯಿತಿ ಮಾದರಿಗಳನ್ನು ತಿಳಿಯಲು, ಮತ್ತು ಹೆಚ್ಚಿನ ವಿವರಗಳನ್ನು ಪಡೆಯಲು www.menipalhelthcard.comಗೆ ಲಾಗ್ ಇನ್ ಆಗುವುದರ ಮೂಲಕ ತಿಳಿದುಕೊಳ್ಳಬಹುದು. ಸಾರ್ವಕನಿಕರು ಮಣಿಪಾಲ್ ಆರೋಗ್ಯ ಕಾರ್ಡ್ ನ್ನು ಎಲ್ಲ ಅಧಿಕೃತ ಪ್ರತಿನಿಧಿಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ ನಂ 9980854700 ಹಾಗೂ 08202923748 ಸಂಪರ್ಕಿಸಬಹುದು. ಕೂಡ್ಲಿಗಿ ಹಾಗೂ ನೆರೆ ಹೊರೆಯ ಸಾರ್ವಜನಿಕರು, ಹೊಸದಾಗಿ ಕಾರ್ಡ್ ನೋಂದಣಿ ಹಾಗೂ ನವೀಕರಿಸಬಹುದಾದಲ್ಲಿ. ಅಧೀಕೃತ ಪ್ರತಿನಿಧಿಗಳಾದ ಕೂಡ್ಲಿಗಿ ಕೆ.ಬಿ.ಕೆಂಚನಗೌಡ-9731709177. ಮನೋಜ್ 8904219373 ಮತ್ತು 9353720350. ಕೊಟ್ಟೂರು ವಿವೇಕ್ -9741577200 ಸಂಪರ್ಕಸಿ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ