"ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತ "

ಕೊಟ್ಟೂರು: ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತಕ್ಕಿದೆ ಆದರೆ ಈ ಪ್ರಜಾಪ್ರಭುತ್ವ ಮೂಲ ಅಂದರೆ ಈ ದೇಶದ ಸಂವಿಧಾನ. ಈ ಸಂವಿಧಾನ ರಚನೆಯಾಗಿ ಅಂಗೀಕಾರಗೊಂಡ ದಿನವೇ ರಾಷ್ಟ್ರೀಯ ಸಂವಿಧಾನ ದಿನ ಎಂದು ನವೆಂಬರ್ 26ರಂದು ಈ ದಿನ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಆಚರಣೆ ಮಾಡುತ್ತೇವೆ ಎಂದು ಛಲವಾದಿ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಪ. ಪಂ. ಸದಸ್ಯ ಎಂ ಸಿ ಕೆಂಗರಾಜು ಹೇಳಿದರು. 

ಇಲ್ಲಿನ ಚಲವಾದಿ ಕಾಲೋನಿಯಲ್ಲಿರುವ ಮುಖಂಡರು ಯುವಕರು ಸೇರಿ ಭಾನುವಾರದಂದು ಭಾರತ ಸಂವಿಧಾನ ಅರ್ಪಣೆಗೊಂಡ ಅಂಗವಾಗಿ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಜಯನಗರ ಜಿಲ್ಲೆಯ ಚಲವಾದಿ ಮಹಾಸಭಾ ಉಪಾಧ್ಯಕ್ಷರಾದ ಎಂ ಸಿ ಕೆಂಗರಾಜು ಮಾತನಾಡಿ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ ಇರುವುದು ನಮ್ಮ ಭಾರತ ದೇಶದಲ್ಲಿ ಮಾತ್ರ ಈ ಪ್ರಜಾಪ್ರಭುತ್ವ ಮೂಲ ಆಧಾರವೇ ಈ ದೇಶದ ಸಂವಿಧಾನ ಭಾರತ ದೇಶದ ಇತಿಹಾಸದಲ್ಲಿ 1949 ನವೆಂಬರ್ 26ರಂದು ಪ್ರಮುಖವಾದ ದಿನ ಕಾರಣ ನಮ್ಮ ದೇಶಕ್ಕೆ ಸಂವಿಧಾನವನ್ನು ಅಳವಡಿಸಿಕೊಂಡು ದಿನ ಇದು ಈ ದೇಶದ ಮೂಲಕ ಪ್ರಜಾಪ್ರಭುತ್ವ ಸರ್ವರಿಗೂ ಸಮಾನತೆ ನೀಡಿದ ಡಾ. ಬಿಆರ್ ಅಂಬೇಡ್ಕರ್ ರವರನ್ನು ಪ್ರತಿಯೊಬ್ಬ ಭಾರತೀಯನೂ ಸ್ಮರಿಸಿಕೊಳ್ಳಬೇಕು ಕೇವಲ ಅಂಬೇಡ್ಕರ್ ಅವರು ರಚಿಸಿರುವ ಭಾರತ ಸಂವಿಧಾನ ಕೆಲವು ವರ್ಗಕ್ಕೆ ಸೀಮಿತವಾಗಿಲ್ಲದೆ ಸರ್ವರಿಗೂ ಸಮಾನತೆ ಹಕ್ಕನ್ನು ನೀಡಿದ್ದಾರೆ ಹೇಳಿದರು.

ಈ ಸಂದರ್ಭದಲ್ಲಿ ಚಲುವಾದಿ ಸಮಾಜದ ಹಿರಿಯ ಮುಖಂಡ ಹನುಮಂತನ ಗೌಡ, ಜಗದೀಶ್ , ಕರಿ ಬಸವರಾಜ, ಸಂದೀಪ ಸಾಲುಮನಿ ( ವಕೀಲರು) ಮೂಗಪ್ಪ, ಸಿ.ಎಂ. ರಾಕೇಶ್, ಚೌಡಪ್ಪ ,ಸುರೇಶ್ ಚಂದ್ರಪ್ಪ, ನಾಗೇಶ್ ,ಮುರುಗೇಶ್, ಪುನೀತ್ ,ಮಂಜುನಾಥ (ವಕೀಲರು) ಹಾಗೂ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ