ಜಾಗತಿಕ ತಾಪಮಾನ ಏರಿಕೆಯಿಂದ ನೂರೆಂಟು ಸಮಸ್ಯೆ:ರಾಮಕೃಷ್ಣ
ಬಳ್ಳಾರಿ:ಜಾಗತಿಕ ತಾಪಮಾನ ಏರಿಕೆ ಕಾರಣಕ್ಕೆ ಇಡೀ ಪ್ರಪಂಚ ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗುತ್ತಿದೆ ಎಂದು ಅನಂತಪುರದ ಶ್ರೀಕೃಷ್ಣ ವಿವಿಯ ಯುಜಿಸಿ ಸಂಪನ್ಮೂಲ ವ್ಯಕ್ತಿ ಡಾ.ರಾಮಕೃಷ್ಣ ಹೇಳಿದರು.
ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ ಕಾಲೇಜಿನ ಎಲೆಕ್ಟ್ರಾನಿಕ್ ಮತ್ತು ಸಂವಹನ ತಂತ್ರಜ್ಞಾನ ಮತ್ತು ಭೌತಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡ ಮೂರು ದಿನಗಳ ಉಪನ್ಯಾಸಕರ ಸಂಪನ್ಮೂಲ ಅಭವೃದ್ಧಿ ವಿಚಾರ ಸಂಕಿರಣದಲ್ಲಿ ಬುಧವಾರ ಜಾಗತಿಕ ತಾಪಮಾನ ಕುರಿತು ಉಪನ್ಯಾಸ ನೀಡಿದ ಅವರು, ಜಾಗತಿಕ ತಾಪಮಾನ ಏರಿಕೆ ಕಾರಣದಿಂದ ಇಂದು ಬೆಳೆ ಸರಿಯಾಗಿ ಬರುತ್ತಿಲ್ಲ. ಹಿಮಾಲಯದ ಮಂಜು ಗಡ್ಡೆ ಕರಗುವುದರಿಂದ ಜಲ ಸಮಸ್ಯೆ ಎದುರಾಗಲಿದೆ. ಅಷ್ಟೇ ಅಲ್ಲ ಮನುಷ್ಯ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು
ಮಾಲಿನ್ಯ ಮಾದರಿ ಇದೀಗ ನ್ಯಾನೋ ಮಟ್ಟಕ್ಕೆ ಇಳಿದಿವೆ. ಕಣ್ಣಿಗೆ ಕಾಣದ ಮಲಿನಕಾರಿ ವಸ್ತುಗಳು ದೇಹ ಸೇರುತ್ತಿವೆ. ಇದೆ ಕಾರಣಕ್ಕೆ ಕೊರೋನ ಕಾಲದಲ್ಲಿ ಮಾಸ್ಕ್ ಹಾಕಿಕೊಂಡೆ ಹೋಗುವ ಸ್ಥಿತಿ ಬಂತು. ವಾಸ್ತವದಲ್ಲಿ ಮಾಸ್ಕ್ ಧಾರಣೆ 18 ನೆಯ ಶತಮಾನದಲ್ಲಿ ಮಾಸ್ಕ್ ಬಂದಿತ್ತು. ಆದರೆ ಜನ ಸಾಮಾನ್ಯರೂ ಧರಿಸುವಂತೆ ಆಗಿದ್ದು ಮಾತ್ರ ಕೊರೋ ನ ಕಾಲದಲ್ಲಿ ಎಂದರು.
ಹವಾಮಾನ ವೈಪರಿತ್ಯ ಕಾರಣಕ್ಕೆ ಇಂದು ನಮ್ಮ ಸಂಚಾರಿ ಪೊಲೀಸರು ಸಾಕಷ್ಟು ಆರೋಗ್ಯ ಸಮಸ್ಯೆಗೆ ಈಡಾಗುತ್ತಿದ್ದಾರೆ. ಇದನ್ನು ನಾವು ಅರಿತು ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಇಂದು ಎಲ್ಲೆಂದರಲ್ಲಿ ಉಗುಳುವ ಅನಿಷ್ಠ ಪದ್ಧತಿ ಇದೆ. ಇದಕ್ಕೆ ಉತ್ತಮ ಉದಾಹರಣೆ ನಮ್ಮ ದೇಶದ ಬನಾರಸ್ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿದರೆ ತಿಳಿಯುತ್ತೆ. ಅಲ್ಲಿ ಎಲ್ಲಿ ಬೇಕೆಂದರೆ ಅಲ್ಲಿ ಉಗುಳಿದ ಕಲೆ ನಿಮ್ಮ ಕಣ್ಣಿಗೆ ಬೀಳುತ್ತವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಸಂಯೋಜಕರಾದ, ಇ ಸಿ ಐ ವಿಭಾಗದ. ಪ್ರಭಾವತಿ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಭಾಗ್ಯ ಕೆ.ಆರ್. ಇತರರು ಇದ್ದರು.
ಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ