ನಾಲ್ಕೆ ತಿಂಗಳಲ್ಲಿ ಕಿತ್ತುಹೋದ ರಸ್ತೆ ಶಾಸಕರೇ ಇತ್ತ ನೋಡಿ
ಮಸ್ಕಿ : ಸರಕಾರಿ ಕೆಲಸ ದೇವರ ಕೆಲಸ ಎಂದು ವಿಧಾನಸೌಧ ಮುಂಭಾಗದಲ್ಲಿ ಹಾಕಲಾಗಿದೆ. ಆದರೆ ತಾಲೂಕಿನಲ್ಲಿ ಈ ಮಾತು ಅಕ್ಷರ ಸಹ ವಿರುದ್ಧವಾಗಿದ್ದು ಗ್ರಾಮೀಣ ರಸ್ತೆಗೆ ಕೋಟಿ ಕೋಟಿ ಅನುದಾನ ಬಂದರು ನಾಲ್ಕೆ ತಿಂಗಳಲ್ಲಿಯೇ ರಸ್ತೆ ಹಾಳಾಗಿ ತನ್ನ ಮೊದಲಿನ ಸ್ವರೂಪದಲ್ಲಿ ಕಾಣತೊಡಗಿದೆ.
ತಾಲೂಕು ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಇದ್ದರೂ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುವುದೇ ಅಪರೂಪ.ತಾಲೂಕಿನಲ್ಲಿ ರಸ್ತೆ ಮೇಲೆ ಸಂಚರಿಸುವುದೆಂದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ತೋರಣ ದಿನ್ನಿಯಿಂದ ಮಲ್ಲದಗುಡ್ಡದ ವರಿಗೆ 7 ಕಿಮೀ ರಸ್ತೆ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಅನುದಾನ
ಬಿಡುಗಡೆಗೊಳಿಸಲಾಗಿತ್ತು. ಗುತ್ತಿಗೆದಾರರು ಸಹ ಕಾಮಗಾರಿ ಪೂರ್ಣಗೊಳಿಸಿ ಕೇವಲ ನಾಲ್ಕೇ ತಿಂಗಳು ಕಳೆಯುವುದರೊಳಗೆ ರಸ್ತೆಗೆ ಹಾಕಿರುವ ಡಾಂಬರ್ ಕಿತ್ತಿಹೋಗಿದೆ ಗುಂಡಿಗಳ ಹಾವಳಿ ಹೆಚ್ಚಾಗಿವೆ ಕಲ್ಲುಗಳು ರಸ್ತೆ ತುಂಬ ಕಾಣತೊಡಗಿವೆ. ಇದೀಗ ಈ ರಸ್ತೆಯ ಮೇಲೆ ದ್ವಿಚಕ್ರ ವಾಹನ ಸಹ ಸಂಚರಿಸದಂತಾಗಿದ್ದು ಸ್ವಲ್ಪ ಯಾಮಾರಿದರೂ ಕಲ್ಲುಗಳು ಹಾಗೂ ಗುಂಡಿ ತಪ್ಪಿಸಲು ಹೋಗಿ ಬೀಳುವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿಗೆ ಅಭಿವೃದ್ಧಿ ಯೋಜನೆಗಳು ಬರುವುದೇ ಅಪರೂಪ. ಬಂದ
ಅನುದಾನವಾದರೂ ಸಮರ್ಪಕವಾಗಿ ಅನುಷ್ಠಾನಗೊಂಡು ಉತ್ತಮ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನು ಮಾಡಿಕೊಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪದ ಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿರುವುದರಿಂದ ರಸ್ತೆ ಈಗ ಸಂಪೂರ್ಣ ಹಾಳಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಗುತ್ತಿಗೆದಾರರ ಅಸಮರ್ಪಕ ಕಾಮಗಾರಿಯಿಂದ ಹಳ್ಳ ಹಿಡಿಯುತ್ತಿದೆ. ಈಗಲಾದರೂ ಈ ಭಾಗದ ಸಂಸದರು, ಶಾಸಕರು,ಅಧಿಕಾರಿಗಳು ಸರ್ಕಾರದ ಹಣ ಪೋಲಾಗದಂತೆ ಕ್ರಮ ಕೈಗೊಳ್ಳಬೇಕಿದೆ.
ಬಾಕ್ಸ್
ಯಾರಪ್ಪನ ದುಡ್ಡೂ ಅಲ್ಲ. ಜನರ ತೆರಿಗೆಯ ಹಣ. ಇದನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಡುವುದಿಲ್ಲ. ಪೂರ್ಣ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ಗುಣಮಟ್ಟ ನಿಯಂತ್ರಣ ಇಲಾಖೆ ಪರೀಕ್ಷಕರಿಂದ ಹಿಡಿದು ಗುತ್ತಿಗೆದಾರನವರೆಗೆ ಅಮಾನತುಗೊಳಿಸಿ ರಸ್ತೆಯನ್ನು ಸಂಪೂರ್ಣ ಮರು ನಿರ್ಮಾಣಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಸಾರ್ವಜನಿಕರೊಂದಿಗೆ ರಸ್ತೆತಡೆ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಸವರಾಜ ಕೊಠಾರಿ ದಲಿತ ಸಂಘ ತಾಲೂಕ ಅಧ್ಯಕ್ಷ ಎಚ್ಚರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ