ತಾಲೂಕು ಪಂಚಾಯಿತಿ ಗ್ರೇಡ್-೧ ಕಾರ್ಯದರ್ಶಿಯವರಾದ ರೂಪಾ , ಡಾಟಾ ಎಂಟ್ರಿ ಆಪರೇಟರ್ ಮೋಹನ್ ವರ್ಗಾವಣೆ
"ನಮ್ಮ ಪ್ರಜಾ ಸಾಕ್ಷಿ ವರದಿ ಫಲಶ್ರುತಿ" |
ಕೊಟ್ಟೂರು: ತಾಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕರು ಮಂಗಳವಾರ ರಂದು ಕರೆಯಲಾಗಿತ್ತು.ನಂತರ ಇತ್ತೀಚೆಗೆ ಕೊಟ್ಟೂರು ತಾಲ್ಲೂಕು ಪಂಚಾಯಿತಿಯಲ್ಲಿ ಲಂಚದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಗ್ರೇಡ್-೧ ಕಾರ್ಯದರ್ಶಿಯವರಾದ ರೂಪ ಮತ್ತು ಡಾಟಾ ಎಂಟ್ರಿ ಆಪರೇಟರ್ ಮೋಹನ್ ರವರನ್ನು ವರ್ಗಾವಣೆ 22.11/2023 ರಂದು ಆದೇಶ ಹೊರಡಿಸಿದ್ದಾರೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ ವಿಜಯನಗರ ಜಿಲ್ಲಾ ಪಂಚಾಯಿತಿಯಿಂದ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಗ್ರೇಡ್ ಒನ್ ಕಾರ್ಯದರ್ಶಿಯಾದ ರೂಪ ಅವರನ್ನು ತಾಲೂಕಿನ ಕೆ.ಅಯ್ಯನಹಳ್ಳಿ ಪಂಚಾಯಿತಿಗೆ ಹಾಗೂ ಡಾಟಾ ಆಪರೇಟರ್ ಮೋಹನ್‌ರವರನ್ನು ಕೂಡ್ಲಿಗಿಗೆ ವರ್ಗಾವಣೆ ಮಾಡಿದ್ದಾರೆ.
ಡಾಟಾ ಎಂಟ್ರಿ ಆಪರೇಟರ್ ಮೋಹನ್ ಕುಮಾರ್
ಪತ್ರಿಕೆ ವರದಿಗಳು, ಸಾರ್ವಜನಿಕರು ಹಾಗೂ ಸಂಘಟನೆಗಳ ದೂರಿನ ಆಧಾರದ ಮೇಲೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಎಂದು ಮಂಗಳವಾರ ಸಭೆಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ರೂಪ ಹಾಗೂ ಮೋಹನ್‌ರವರಿಗೆ ಸರಿಯಾಗಿ ಕೆಲಸ ನಿರ್ವಹಿಸಿ, ಸರ್ಕಾರಿ ಕೆಲಸ ಎಲ್ಲರಿಗೂ ದೊರೆಯತಕ್ಕದಲ್ಲ ದೊರೆತಿರುವ ಕೆಲಸವನ್ನು ಸರಿಯಾಗಿ ನಿರ್ವಹಿಸಿ .ಎಂದು ಶಾಸಕ ನೇಮಿರಾಜನಾಯ್ಕ ತಿಳಿಸಿದರು. ಈ ಹಿಂದೆ ಪಶು ಇಲಾಖೆಯ ಭೂಮಿ ಪೂಜೆಯ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಎಂದಿದ್ದ ಶಾಸಕರು ಮಾತಿಗೆ ತಕ್ಕಂತೆ ನಡೆದುಕೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಇಒ ರವಿಕುಮಾರ್, ವ್ಯವಸ್ಥಾಪಕರಾದ ಪುಷ್ಪಲತಾ, ಎ.ಡಿ. ವಿಜಯಕುಮಾರ್, ಪಿಡಿಒಗಳು ಹಾಜರಿದ್ದರು. ತಾಲ್ಲೂಕು ಪಂಚಾಯಿತಿಯಲ್ಲಿ ಲಂಚದ ವಿಷಯವನ್ನು ನಿರಂತರವಾಗಿ ನಮ್ಮ ಪ್ರಜಾ ಸಾಕ್ಷಿ ವರದಿ ಮಾಡಿತ್ತು.
ಕೊಟ್ -1
ಗ್ರೇಡ್ ಒನ್ ಕಾರ್ಯದರ್ಶಿಯಾದ ರೂಪ ಹಾಗೂ ಡಾಟಾ ಎಂಟ್ರಿ ಆಪರೇಟರ್ ಮೋಹನ್ ಕುಮಾರ್ ಇವರನ್ನು ಮುಖ್ಯ ಕಾರ್ಯನಿರ್ವಾಹಕ ಕಾರ್ಯಾಲಯ ವಿಜಯನಗರ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲಾ ಪಂಚಾಯತಿ ಉಪಾಕಾರ್ಯದರ್ಶಿ ಭೀಮಪ್ಪ ಲಾಳಿ ಅವರು ವರ್ಗಾವಣೆ ಆದೇಶ 22.11/2023 ಕ್ಕೆ ಮಾಡಿ ಹಾಗಿದೆ.ಮತ್ತು ಈ ವಿಷಯ ಸಂಬಂಧಿಸಿದಂತೆ ಪತ್ರಿಕಾ ಮಾಧ್ಯಮದವರಿಗೆ 29.11.2023 ಬುಧವಾರ ರಂದು ರಿಲಿವ್ ಮಾಡಲಾಗಿತ್ತೆ. ಎಂದು ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ