ಪಟ್ಟಣ ಪಂಚಾಯಿತಿಯಲ್ಲಿ ಬಾಡಿಗಾರ್ಡ್ ನಿಂದ ಸಾರ್ವಜನಿಕರು ಕಂಗಾಲು..!

ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಚರಂಡಿ ಸ್ವಚ್ಛತೆ ಮಾಡುವ ಕೆಲಸ ಬಿಟ್ಟು ಬಾಡಿಗಾರ್ಡ್ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಯಾರು ಬೇಕಾದರೂ ಅವರಿಗೆ ಇಷ್ಟವಾದ ಕೆಲಸ ನಿರ್ವಹಿಸಬಹುದು!  ನಾಳೆಯಿಂದ ಪೌರಕಾರ್ಮಿಕರು ಕಛೇರಿಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಾರೆ ! ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪಟ್ಟಣ ಪಂಚಾಯಿತಿಯಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಇಲ್ಲಿಯ ಜನರು ಗೌರವದಿಂದ ಕಾಣುತ್ತಾರೆ. ಇಂತಹ ಬಾಡಿಗಾರ್ಡ್ ಜವಾನನಿಂದ ಒಳ್ಳೆಯ ಕೆಲಸ ಮಾಡುವವರೂ ಸಹ ತೊಂದರೆಗೆ ಒಳಗಾಗುವ ಸಾಧ್ಯತೆಗಳಿವೆ. 

ಈ ಬಾಡಿಗಾರ್ಡ್ ಜವಾನ ಸಾರ್ವಜನಿಕರು ಕುಂದು ಕೊರತೆಗಳನ್ನು ಅಧಿಕಾರಿಗಳ ಹತ್ತಿರ ಹೇಳಲಿಕ್ಕೆ ಬಂದರೆ ಅವರ ಕಷ್ಟ ಹೇಳಿಕೊಳ್ಳಲು ಬಿಡದೇ, ಯಾರೂ ಹೋಗಬಾರದೆಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುಳ್ಳು ಹೇಳಿ ದರ್ಪ ತೋರಿಸುತ್ತೇನೆ. ಅದೇ ರಾಜಕಾರಣಿಗಳು ಬಂದ ತಕ್ಷಣವೇ ಒಳಗಡೆ ಬಿಟ್ಟು ಬಿಡುತ್ತಾನೆ. ಈ ಜವಾನ ಒಳಗಡೆ ಅಧಿಕಾರಿ ಮತ್ತು ರಾಜಕಾರಣಿಗಳ ಅವ್ಯವಹಾರಗಳನ್ನು ! ನಡೆಯುವುದಕ್ಕೆ ಹೊರಗಡೆ ವೀರಭದ್ರ ರೀತಿಯಲ್ಲಿ ದ್ವಾರಬಾಗದಲ್ಲಿ ಕಾಯುತ್ತಾನೆ.ಇಲ್ಲಿ ಒಬ್ಬ ಮುಖ್ಯ ಅಧಿಕಾರಿಗಳಿಗೆ ಮಂಜು ಬಾಡಿಗಾರ್ಡ್ ಕೆಲಸದಲ್ಲಿ ಕಾರ್ಯ ನಿಷ್ಠೆ   ತೋರಿಸುವುದರಲ್ಲಿ ಸಾರ್ವಜನಿಕರಿಗೆ ದರ್ಪ ಅಹಂಕಾರ ತೋರಿಸುತ್ತ ಬೇಜವಾಬ್ದಾರಿತನದಿಂದ ವರ್ತಿಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಟ್ -೧

ಪಟ್ಟಣ ಪಂಚಾಯಿತಿ ಸಾರ್ವಜನಿಕರಿಗೆ ಕಚೇರಿಯೋ ಅಥವಾ ದರ್ಪ ಅಹಂಕಾರ ತೋರಿಸುವ ಕಚೇರಿಯೋ? ಇಂತಹ ಜವಾನನನ್ನು ಕೆಲಸದಿಂದ ಅಮಾನತ್ತು ಮಾಡಬೇಕೆಂದು ಇಲ್ಲಿನ ಡಿಎಸ್‌ಎಸ್ ಮುಖಂಡ ಪತ್ರಿಕೆಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ