ವೀರಣ್ಣ ಹೂಗಾರ ಶಿಕ್ಷಕರಿಗೆ ಗ್ರಾಮಸ್ಥರು ಮತ್ತು ಶಾಲಾ ವತಿಯಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭ.
ಹಟ್ಟಿ ಚಿನ್ನದ ಗಣಿ. ಸಮೀಪದ ಹಿರೇನಗನೂರು ಗ್ರಾಮದಲ್ಲಿ ಸುಮಾರು 16 ವರ್ಷಗಳ ಕಾಲ ಸುತೀರ್ಘ ಸೇವೆ ಸಲ್ಲಿಸಿ ಜನಮಾನಸದಲ್ಲಿ ಪ್ರೀತಿಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ವರ್ಗಾವಣೆಗೊಂಡ ಶಿಕ್ಷಕ ವೀರಣ್ಣ ಹೂಗಾರ್ ಇವರಿಗೆ ಹಿರೇನಗನೂರು ಹಾಗೂ ಚಿಕ್ಕನಟ್ಟಿ ಗ್ರಾಮದ ವತಿಯಿಂದ ಮತ್ತು ಶಾಲಾ ಶಿಕ್ಷಕ ಬಳಗದ ವತಿಯಿಂದ ಅದ್ದೂರಿಯಾಗಿ ಬಿಳ್ಕೊಡುಗೆ ಸಮಾರಂಭ ಮಾಡಿ ಗೌರವ ಸಲ್ಲಿಸಲಾಯಿತು.
ಶ್ರೀ ವೀರಣ್ಣ ಹೂಗಾರ್ ಸರಳ ಸಜ್ಜನಿಕೆಗೆ ಹೆಸರುವಾಸಿಯಾದವರ. ಮತ್ತು ಎಲ್ಲಾರೊಂದಿಗೆ ಬೆರೆಯುವ ಮತ್ತು ಮಕ್ಕಳಿಗೆ ಪ್ರೀತಿಯ ಶಿಕ್ಷಕ ನಲಿಕಲಿ ಶಿಕ್ಷಕರಾಗಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿದ ಗುರುಗಳು ಇವರು. ಹಾಗೂ ಪ್ರಭಾರಿ ಮುಖ್ಯ ಶಿಕ್ಷಕರಾಗಿಯೂ ಉತ್ತಮ ಸೇವೆಯನ್ನು ಸಲ್ಲಿಸಿ ನಮ್ಮ ಶಾಲೆಯ ಮತ್ತು ಗ್ರಾಮದ ಕೀರ್ತಿಯನ್ನು ಬೆಳಗಿಸಿದವರು.ಅವರ ಸರಳ ಸಜ್ಜನಿಕೆಯೇ ಅವರನ್ನು ಎತ್ತರಕ್ಕೆ ಕೊಂಡೊಯುತ್ತದೆ ಎಂಬುದರಲ್ಲಿ ಸಂಶಯವಿಲ್ಲವೆಂದು ಗ್ರಾಮದ ಹಿರಿಯರು ಹೇಳಿದರು.
ಶಿಕ್ಷಕರಾಗಿ ಮತ್ತು ಪ್ರಭಾರಿ ಮುಖ್ಯ ಗುರುಗಳಾಗಿ ಸುಮಾರು 16 ವರ್ಷ ಸುದೀರ್ಘವಾಗಿ ಸೇವೆ ಸಲ್ಲಿಸಿರುವ ವೀರಣ್ಣ ಹೂಗಾರ ಅವರಿಗೆ ಇಂದು ಶಾಲೆಗೆ ಸ್ವಾಗತಿಸಿ ತದನಂತರ ವೇದಿಕೆಗೆ ಸ್ವಾಗತ ಮಾಡಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು.
ಮಕ್ಕಳಿಂದ ಪ್ರಾಥನೆ ಗೀತೆ ಹಾಗೂ ಸ್ವಾಗತ ಭಾಷಣ ಮಮತಾ ಶಿಕ್ಷಕರಿಂದ ನಡಿಸಲಾಯಿತು.ವೇದಿಕೆ ಮೇಲೆ ಆಗಮಸಿರುವ ಗಣ್ಯರಿಗೆ ಮಕ್ಕಳಿಂದ ಹೂ ಗಚ್ಚು ನೀಡಲಾಯಿತು.
ನಂತರ ವಿದ್ಯಾರ್ಥಿಗಳಿಂದ ಹಿತ ನುಡಿಗಳು, ನಂತರ ಶಾಲೆಯ ವಯಿಂದ ಶ್ರೀ ವೀರಣ್ಣ ಹೂಗಾರ ಅವರ ದಂಪತಿಗೆ ಸನ್ಮಾನಿಸಲಾಯಿತು. ಊರಿನ ಗುರುಹಿರಿಯಾರಿಂದ ಮತ್ತು ಶಾಲೆಯ ಮುದ್ದು ಮಕ್ಕಳಿಂದ ನೆನಪಿನ ಹುಡುಗೋರೆಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಚುಕನಟ್ಟಿ ಗ್ರಾಮದ ರವಿಕುಮಾರ್ ಎಸ್ ಇವರು ಜಿ.ಪಿ.ಟಿ ಶಿಕ್ಷರಾಗಿ ನೇಮಕಗೊಂಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಮರಡಿ ತಮ್ಮ ಕಾರ್ಯ ಸ್ಥಾನವನ್ನು ಆಯ್ಕೆ ಮಾಡಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದು ಇವರಿಗೆ ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ.. ಬಸವರಾಜಪ್ಪ ಕುರುಗೋಡು ,ಗ್ರಾಮ ಪಂಚಾಯತಿ ಅಧ್ಯಕ್ಷ ಮುದಿಯಪ್ಪ ಕೋಠ ,ಉಪಾಧ್ಯಕ್ಷ ಚಂದಮ್ಮ ಸಿದ್ದಪ್ಪ ಹುಬ್ಬಳ್ಳಿ ,ಗ್ರಾಮ ಪಂಚಾಯತಿ ಸದಸ್ಯರಾದ ದಾದಾಪಿರ್.ಮೌನೇಶ್ ಬೊಮ್ಮನಾಳ.ಶಾಂತಪ್ಪ ಎಸ್,ಶಿವನ ಗೌಡ ನಗರ,ಪಂಪಣ್ಣ, ಅಬ್ರಮ್ ಸಲಬುರು, ಶಿಕ್ಷಣ ಪ್ರೇಮಿ ಸಮಾಜ ಸೇವಕ ಮೌನೌದ್ದಿನ್ ಬುದಿನಾಳ,ದೇವಪ್ಪ ಹಾಗೂ ಚಿನ್ನಪ್ಪ ಕೊಟ್ರಿಕಿ ಎಸ್ ಡಿ ಎಂ ಸಿ ಅಧ್ಯಕ್ಷರು.ಅಬ್ಬಾಸ್ ಅಲಿ.ನಿಂಗಪ್ಪ.ಕನಕಪ್ಪ, ಮು ಗು.ಶಿಬರಾಣಿ, ಆಮರ ಗುಂಡ.ಮೊದಿನ್ ಸಾಬ್. ನಿ. ಮು.ಗು ಮಲ್ಲಪ್ಪ, ಭೀಮಣ್ಣ ರವೀಂದ್ರ ಸ್ವಾಮಿ, ನಿಂಗಪ್ಪ ಸೇರಿ
ಸನ್ಮಾನಿತ ಶಿಕ್ಷಕ ವೀರಣ್ಣ ಹೂಗಾರ ಶ್ರೀಮತಿ ಶಿಲ್ಪಾ ವೀರಣ್ಣ ಹೂಗಾರ, ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ