ಸಂವಿಧಾನ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ : ಮಲ್ಲಪ್ಪ ಎಸ್ ಗೋನಾಳ್ಕರ್
ಮಸ್ಕಿ : ದೇಶದ ಸಾರ್ವಭೌಮತೆ ಹಾಗೂ ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು ಎಂದು ದಲಿತ ಮುಖಂಡರಾದ ಮಲ್ಲಪ್ಪ ಎಸ್ ಗೋನಾಳ್ಕರ್ ಅವರು ತಿಳಿಸಿದರು.
ಗೋನಾಳ ಗ್ರಾಮದಲ್ಲಿ ನಡೆದ "ಸಂವಿಧಾನ ಸಮರ್ಪಣಾ ದಿನ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ"ದಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ದೇಶಕ್ಕೆ ಉತ್ತಮ ಕಾನೂನಿನ ಅವಶ್ಯ ಹಿನ್ನೆಲೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಅಭಿನಂದನಾರ್ಹ ಎಂದರಲ್ಲದೆ, ವಿಶ್ವದ ಹಲವಾರು ಲಿಖಿತ ಮತ್ತು ಅಲಿಖಿತ ಸಂವಿಧಾನಗಳನ್ನು ಅಧ್ಯಯನ ಮಾಡುವ ಮೂಲಕ ನಮ್ಮ ದೇಶಕ್ಕೆ ಬೇಕಾದಂತಹ ಕಾನೂನುಗಳನ್ನು ಅಳವಡಿಸಿಕೊಂಡು ಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ಭಾರತದ ಸಂವಿಧಾನ ಸಹಕಾರಿಯಾಗಿದೆ ಎಂದರು.
ಈ ವೇಳೆ,ಮಲ್ಲಯ್ಯ ಪೂಜಾರಿ,ಚಿನ್ನಗೌಡ ಮಾಲಿ ಪಾಟೀಲ್, ಮಲ್ಲಣ್ಣಗೌಡ ಗ್ರಾ.ಪ.ಸದಸ್ಯರು,ದುರ್ಗಸಿಂಗ್,ಶರಣಬಸವ ಎಸ್ ,ಶಿಕ್ಷಕರು, ಡಾ.ಮಲ್ಲನಗೌಡ, ಅನ್ವರ್ ಪಾಷ,ಶಂಕರ್, ಕರಿಬಸವ, ಬಸವರಾಜ ಮಡಿವಾಳ,ಮಲ್ಲಯ್ಯ ಗೋನಾಳ, ಹುಚ್ಚಪ್ಪ ಗೋನಾಳ,ಹಾಗೂ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ