*ಹುಚ್ಚುನಾಯಿ ಕಡಿತ: 15 ರಿಂದ 20 ಜನರಿಗೆ ಗಾಯ*

 

"ಬೀದಿ ನಾಯಿಗಳ ಹಾವಳಿಗೆ ಅಧಿಕಾರಿಗಳು ನಿರ್ಲಕ್ಷ್ಯೆ"

ಕೊಟ್ಟೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು. ಎಲ್ಲಿಂದರಲ್ಲಿ ವಾಹನ ಸವಾರರ ಮೇಲೆ ದಾಳಿ ನಡೆಸಲು ಮುಂದಾಗುತ್ತಿವೆ ಇವುಗಳ ನಿಯಂತ್ರಣಕ್ಕೆ   ಮುಂದಾಗಬೇಕು ಬೀದಿ ನಾಯಿಗಳ  ಸಂತಾನ ಹೆಚ್ಚುತ್ತಿದ್ದು ವೃದ್ಧರ, ಮಕ್ಕಳ ಮೇಲೆ ಎರಗುವ ಬೀದಿ ಸ್ವಾನಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ  ಸಾರ್ವಜನಿಕರು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪಟ್ಟಣದಲ್ಲಿ ಹುಚ್ಚುನಾಯಿ ಏಕಾಏಕಿ ದಾಳಿ ಮಾಡಿ ಸುಮಾರು 15 ರಿಂದ 20 ಜನರಿಗೆ ಗಾಯಗೊಳಿಸಿದೆ. ಅತೀ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ನಂತರ ಸಾರ್ವಜನಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳು ಚಿಕಿತ್ಸೆಯನ್ನು ಪಡೆಯಲಾಗಿದೆ.

ಇದರ ಸ೦ಬ೦ಧ ಪಟ್ಟಣದಲ್ಲಿ ಸಾರ್ವಜನಿಕರು ಭಯ ಭೀತರಾಗಿದ್ದರು. ಈ ವಿಷಯ ತಿಳಿದ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಚಿಕಿತ್ಸೆ ಪಡೆಯುವಂತೆ ಸಲಹೆ ಸೂಚನೆ ನೀಡಿ ಹುಚ್ಚು ನಾಯಿಯನ್ನು ಸೆರೆ ಹಿಡಿದು ಬೇರೆ ಕಡೆ ಸಾಗಿಸುತ್ತವೆ .ಎ೦ದು ಪಟ್ಟಣ ಪಂಚಾಯಿತಿಯವರು ತಿಳಿಸಿದ್ದಾರೆ.

ಕೊಟ್ -1

ಸಾರ್ವಜನಿಕರು ಹಲವು ಬಾರಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗ್ರಹ ಮಾಡಿದರು  ಯಾವುದೇ ಅಗ್ರಹಕ್ಕೆ ಅಧಿಕಾರಿಗಳು ಕ್ಯಾರಿ ಅನ್ನದೆ ಕಣ್ಮುಚ್ಚಿ ಕುಳಿತಿದ್ದಾರೆ.ಭಾನುವಾರ ರಂದು 15 ರಿಂದ 20 ಜನರಿಗೆ ಹುಚ್ಚು ನಾಯಿ ಕಡದಿದ್ದು  ಇದಕ್ಕೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ನೇರಹೊಣೆ ಎಂದು ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ್ ಆರೋಪಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ